ಮುಳಗುಂದ: ಜಾನಪದ ಸಂಸ್ಕೃತಿ ಮಕ್ಕಳಲ್ಲಿ ಉಳಿಸಿ ಬೆಳೆಸುವುದು ಬಹುಮುಖ್ಯವಾಗಿದೆ. ಅದಕ್ಕೆ ತಕ್ಕಂತೆ ಈ ಜಾನಪದ ಸಿರಿ ಕಾರ್ಯಕ್ರಮ ಮಾದರಿಯಾಗಿದೆ ಎಂದು ರಾಜ್ಯ ಬಾಲ ವಿಕಾಸ ಅಕಾಡೆಮಿ ಬೆಂಗಳೂರು ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಬಿ.ಆರ್. ದೇವರಡ್ಡಿ ಮಾತನಾಡಿ, ನೈಜ ಜಾನಪದ ಕಲೆ ನಿತ್ಯ ಜೀವನದಲ್ಲಿ ಬದುಕಿರುವುದು ಹಳ್ಳಿಗಳಲ್ಲಿ ಮಾತ್ರ ಎಂದರು.
ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಇಂದಿನ ಜಾನಪದ ಸಿರಿ ಮಕ್ಕಳಿಗೆ ನಮ್ಮ ನೆಲದ ಸಂಪ್ರದಾಯ ಅರ್ಥ ಮಾಡಿಸುವಲ್ಲಿ ಸಹಕಾರಿಯಾಯಿತು ಎಂದರು.ಉಪನಿರ್ದೇಶಕ ಜಿ.ಎಲ್. ಬಾರಟಕ್ಕೆ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ಡಿ.ಎಸ್.ತಳವಾರ, ಕನಕಪ್ಪ ಬೇವಿನಮರದ, ಮುತ್ತಣ್ಣ ಕಂಬಳಿ, ಶಂಕರ ಹಡಗಲಿ, ಜೆ.ಎ. ಭಾವಿಕಟ್ಟಿ, ವಿ.ಎಂ. ಹಿರೇಮಠ, ಎಸ್.ಆರ್. ಬಂಡಿ, ಸುರೇಶ ಪವಾರ, ಶಿವಾನಂದ ತಳವಾರ, ಮುತ್ತಣ್ಣ ಮಲಕಶೆಟ್ಟಿ, ಚಂದ್ರು ಪಾಟೀಲ, ಕಳಕಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.
ಸಹ ಶಿಕ್ಷಕ ಸುರೇಶ ದೊಡ್ಡಮನಿ ಸ್ವಾಗತಿಸಿದರು. ಪ್ರಧಾನ ಗುರು ಅನ್ನಪೂರ್ಣ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹನ ಗೊಂದಿ ನಿರೂಪಿಸಿದರು. ಸಹ ಶಿಕ್ಷಕ ಶಂಭು ತಮ್ಮನಗೌಡರ ವಂದಿಸಿದರು.