ದೆಹಲಿ ಗಣರಾಜ್ಯೋತ್ಸವ ಪಥ್ ಪರೇಡ್‌ಗೆ ಎಂ.ಡಿ.ಮನಿಷ ರಾಜ್‌ ಆಯ್ಕೆ

KannadaprabhaNewsNetwork |  
Published : Jan 24, 2025, 12:46 AM IST
23ಕೆಎಂಎನ್ ಡಿ15 | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಯಲಿಯೂರು ಸರ್ಕಲ್ ಬಳಿ ಇರುವ ಅನಿಕೇತ ಸ್ಕೂಲ್ ಆಫ್ ಎಜುಕೇಷನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಎಂ.ಡಿ.ಮನಿಷ ರಾಜ್ ನವದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಆರ್‌ಡಿಸಿ ಕರ್ತವ್ಯ ಪಥ್ ಪರೇಡ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಯಲಿಯೂರು ಸರ್ಕಲ್ ಬಳಿ ಇರುವ ಅನಿಕೇತ ಸ್ಕೂಲ್ ಆಫ್ ಎಜುಕೇಷನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಎಂ.ಡಿ.ಮನಿಷ ರಾಜ್ ನವದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಆರ್‌ಡಿಸಿ ಕರ್ತವ್ಯ ಪಥ್ ಪರೇಡ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿ ಎಸಿಸಿಎ ಮತ್ತು ಬಿ ಸರ್ಟಿಫಿಕೇಟ್‌ಗಳ ಪಡೆದು

ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆದ ಪ್ರೀ-ಆರ್‌ಡಿಸಿ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿ ಪೂರೈಸಿ ಅಂತಿಮವಾಗಿ ನವದೆಹಲಿಯಲ್ಲಿ ನಡೆಯಲಿರುವ 76ನೇ ಗಣರಾಜ್ಯೋತ್ಸದ ಆಡ್‌ಡಿಸಿ ಕರ್ತವ್ಯ ಪಥ್ ಪರೇಡ್‌ನಲ್ಲಿ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿನಿ ಎಂ.ಡಿ.ಮನಿಷ ರಾಜ್ ಅವರನ್ನು ಅನಿಕೇತ ಸ್ಕೂಲ್ ಆಫ್ ಎಜುಕೇಷನ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರ ವೃಂದ ಅಭಿನಂದಿಸಿದೆ.

ಪುಟ್ಟಸ್ವಾಮಿ ನೇರಲೆಕೆರೆಗೆ ಪಿಎಚ್‌.ಡಿ ಪದವಿ

ಶ್ರೀರಂಗಪಟ್ಟಣ:

ತಾಲೂಕಿನ ನೇರಲೇಕೆರೆ ಗ್ರಾಮದ ಯುವ ಕವಿ ಹಾಗೂ ಕನ್ನಡ ಶಿಕ್ಷಕ ಎನ್.ಎನ್. ಪುಟ್ಟಸ್ವಾಮಿ ಅವರು ಮೈಸೂರು ವಿಶ್ವ ವಿದ್ಯಾಲಯದ ಹಾಸನದ ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಡಾ.ಪುಟ್ಟಸ್ವಾಮಿ ಅವರ ಮಾರ್ಗದರ್ಶನದಲ್ಲಿ ಹಾಗೂ ಯುಜಿಸಿಯ ಜೆಆರ್‌ಎಫ್ ಶಿಷ್ಯವೇತನದ ಸಹಯೋಗದಲ್ಲಿ ಎ.ಪಂಕಜ ಮತ್ತು ಎ.ಪಿ.ಮಾಲತಿ ಅವರ ಕಾದಂಬರಿಗಳ ತೌಲನಿಕ ಅಧ್ಯಯನ ಎಂಬ ವಿಷಯವನ್ನು ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾಲಯವು ಪಿಎಚ್‌.ಡಿ ಪದವಿ ಪ್ರದಾನ ಮಾಡಿದೆ.

ನೇರಲೆಕೆರೆ ಗ್ರಾಮದ ಜಯಮ್ಮ ಮತ್ತು ನಿಂಗೇಗೌಡರ ಪುತ್ರರಾದ ಎನ್.ಎನ್. ಪುಟ್ಟಸ್ವಾಮಿ ಪ್ರಸ್ತುತ ಕೋಲಾರ ಜಿಲ್ಲೆಯ ರಾಜೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ