ಕಡು ಬಡವರ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಿರಿ

KannadaprabhaNewsNetwork |  
Published : Sep 22, 2024, 02:03 AM IST
ಸಹಕಾರಿ ಸಂಘದ ಸದಸ್ಯರ ಸಭೆ | Kannada Prabha

ಸಾರಾಂಶ

ತುಮಕೂರು: ನಗರದ ಶ್ರೀಗುರುಕುಲ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘದ 16ನೇ ವರ್ಷದ ಸರ್ವ ಸದಸ್ಯರ ಸಭೆ ನಡೆಯಿತು.

ತುಮಕೂರು: ನಗರದ ಶ್ರೀಗುರುಕುಲ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘದ 16ನೇ ವರ್ಷದ ಸರ್ವ ಸದಸ್ಯರ ಸಭೆ ನಡೆಯಿತು.ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜಿ.ಮಲ್ಲಿಕಾರ್ಜುನಯ್ಯ ನೇತೃತ್ವದಲ್ಲಿ ಸಹಕಾರಿ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಲ ಪಡೆದವರು, ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಸ್ಥೆಗಳ ಬೆಳೆಯಲು ಸಹಕರಿಸಬೇಕು. ಸಾಲದ ಸದುಪಯೋಗವಾದಾಗ ಮಾತ್ರ ಸದಸ್ಯರ ಜೊತೆಗೆ, ಬ್ಯಾಂಕಿಗೂ ಒಳ್ಳೆಯ ಹೆಸರು ಬರಲು ಸಾಧ್ಯ ಎಂದರು.ತುಮಕೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಕೈಗಾರಿಕೆ, ನೀರಾವರಿ, ಕೃಷಿ ಹೀಗೆ ಎಲ್ಲಾ ವಿಷಯಗಳಲ್ಲಿಯೂ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರದಿಂದ ಶ್ರಮಿಸಿದ್ದೇನೆ. ಎಚ್.ಎ.ಎಲ್ ಘಟಕ ನಿರ್ಮಾಣ, ವಸಂತ ನರಸಾಪುರದಲ್ಲಿ ಅತಿ ದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣ ಯುವಜನರಿಗೆ ಹಲವಾರು ಅವಕಾಶಗಳನ್ನು ಒದಗಿಸಿದೆ. ಬ್ಯಾಂಕಿನಿಂದ ಪ್ರತಿಭಾ ಪುರಸ್ಕಾರಕ್ಕೆ ಒಳಗಾಗುತ್ತಿರುವ ಯುವಜನರು ತಮ್ಮ ಮೇಲಿರುವ ಸಮಾಜದ ಋಣ ತೀರಿಸಲು ಮುಂದಾಗಬೇಕು. ಬಡವರ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆ ಜೊತೆಗೆ, ಕೃಷಿಯ ಕಡೆಗೂ ಗಮನಹರಿಸಬೇಕೆಂದು ಸಲಹೆ ನೀಡಿದರು.ಸಂಘದ ಅಧ್ಯಕ್ಷ ಜಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಹಿರಿಯರ ಮಾರ್ಗದರ್ಶನದಂತೆ ೨೦೦೯ರಲ್ಲಿ ಪ್ರಾರಂಭಗೊಂಡ ಶ್ರೀಗುರುಕುಲ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಸ್ಥೆ, ಹಣಕಾಸಿ ವ್ಯವಹಾರದ ಜೊತೆಗೆ, ಮಾರ್ಕೆಟಿಂಗ್ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳನ್ನು ಗೌರವಿಸಲಾಯಿತು. ಬಿ.ರುದ್ರಶೆಟ್ಟಿ, ನಿದೇರ್ಶಕ ಜಗದೀಶ್, ರಾಜಶೇಖರಯ್ಯ, ಮಹೇಶ್ವರಯ್ಯ, ಉಮಾಪತಯ್ಯ, ಬಸವರಾಜು, ಜಗದೀಶ್ ಎಚ್.ಸಿ, ನಂದೀಶ್, ಎಂ.ಬಿ, ಗಂಗಾಧರ.ಬಿ., ಸಿದ್ದೇಶ್ವರಯ್ಯ, ನಂಜುಂಡಯ್ಯ, ವಿಜಯಕುಮಾರ್, ಜಯ, ಕಾತ್ಯಾಯಿನಿ, ಸಿಇಒ ಶಶಿಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ