ಕನ್ನಡಪ್ರಭ ವಾರ್ತೆ ಯರಗಟ್ಟಿ
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ತಾಲೂಕಿನ ವಿಶ್ವಕರ್ಮ ಸಮಾಜದವರು ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದರು.ಗಣಪತಿ ಮಹಾರಾಜರು ಸಾನಿಧ್ಯ ವಹಿಸಿದ್ದರು, ಪಪಂ ಮುಖ್ಯಾಧಿಕಾರಿ ಡಿ.ಎನ್. ತಹಶೀಲ್ದಾರ ಅಧ್ಯಕ್ಷತೆ ವಹಿಸಿದ್ದರು. ಪಪಂ ಎಂಜಿನಿಯರ್ ಕಾಮಣ್ಣವರ, ಮುರಳಿ ಬಡಿಗೇರ, ರಾಜ್ಯ ಉಪಾಧ್ಯಕ್ಷ ಸಿದ್ದಯ್ಯ ವಡಿಯರ, ಮೌನೇಶ್ವರ ಮಾಯಾಚಾರಿ, ಅಶೋಕ ಬಡಿಗೇರ, ಅರ್ಜುನ ಕಮ್ಮಾರ, ಈಶ್ವರ ಬಡಿಗೇರ, ಬಾಲಪ್ಪ ಬಡಿಗೇರ, ಸಂತೋಷ ಕಂಬಾರ, ಸಂತೋಷ ಬಡಿಗೇರ, ದ್ಯಾಮಣ್ಣ ಬಡಿಗೇರ, ಉಮೇಶ ಬಡಿಗೇರ, ರಮೇಶ ಬಡಿಗೇರ, ಆನಂದ ಬಡಿಗೇರ, ಶಂಕರ ಬಡಿಗೇರ ಸೇರಿದಂತೆ ಯರಗಟ್ಟಿ-ಸವದತ್ತಿ ತಾಲೂಕು ವಿಶ್ವಕರ್ಮ ಸಮಾಜದವರು ಇದ್ದರು.