ಸುರೇಶ್‌ಗೌಡ ಮಂಜೂರಾತಿ ನೀಡಿದ್ದ ಸಾಗುವಳಿ ಚೀಟಿ ರದ್ದು

KannadaprabhaNewsNetwork |  
Published : Oct 14, 2026, 01:30 AM IST
ಜೆಡಿಎಸ್‌ | Kannada Prabha

ಸಾರಾಂಶ

ಮಾಜಿ ಶಾಸಕ ಕೆ.ಸುರೇಶ್‌ಗೌಡ ಅವರು ೨೦೨೧ರಿಂದ ೨೦೨೩ರವರೆಗೆ ಕಾನೂನುಬದ್ಧವಾಗಿ ಅರ್ಹ ರೈತರಿಗೆ ನೀಡಿದ್ದ ಬಗರ್‌ಹುಕುಂ ಸಾಗುವಳಿ ಜಮೀನನ್ನು ಸಹಿಸದೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಅಧಿಕಾರಿಗಳನ್ನು ಬಳಸಿಕೊಂಡು ರಾಜಕೀಯ ದ್ವೇಷ ಸಾಧನೆಗಾಗಿ ರದ್ದುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಶಾಸಕ ಕೆ.ಸುರೇಶ್‌ಗೌಡ ಅವರು ೨೦೨೧ರಿಂದ ೨೦೨೩ರವರೆಗೆ ಕಾನೂನುಬದ್ಧವಾಗಿ ಅರ್ಹ ರೈತರಿಗೆ ನೀಡಿದ್ದ ಬಗರ್‌ಹುಕುಂ ಸಾಗುವಳಿ ಜಮೀನನ್ನು ಸಹಿಸದೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಅಧಿಕಾರಿಗಳನ್ನು ಬಳಸಿಕೊಂಡು ರಾಜಕೀಯ ದ್ವೇಷ ಸಾಧನೆಗಾಗಿ ರದ್ದುಗೊಳಿಸಿದ್ದಾರೆ ಎಂದು ನಾಗಮಂಗಲ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಎನ್.ಆರ್.ಸಂತೋಷ್ ಆರೋಪಿಸಿದರು.

ಸುರೇಶ್ ಗೌಡರು ಜಮೀನಿಗೆ ಕಿಮ್ಮತ್ತು ಕಟ್ಟಲು ಕಾಸಿಲ್ಲದವರಿಗೆ ಸ್ವತಃ ತಾವೇ ಕಿಮ್ಮತ್ತು ಕಟ್ಟಿ ಸಾಗುವಳಿ ಚೀಟಿಗಳನ್ನು ದೊರಕಿಸಿಕೊಟ್ಟಿದ್ದರು. ಅಲ್ಲದೇ, ಸಚಿವರ ಎದುರಿನಲ್ಲಿ ಸಾಗುವಳಿ ಚೀಟಿಗಳನ್ನು ಹಂಚಿಕೆ ಮಾಡಿದ್ದರು. ಆದರೆ, ಚಲುವರಾಯಸ್ವಾಮಿ ಅವರು ಯಾರಿಗೂ ಗೊತ್ತಾಗದ ರೀತಿಯಲ್ಲಿ ೧೦೦ ಜನರಿಗೆ ಸಾಗುವಳಿ ಚೀಟಿ ಹಂಚಿಕೆ ಮಾಡಿದ್ದಾರೆ. ಆಯ್ಕೆ ಪಾರದರ್ಶಕವಾಗಿದ್ದರೆ ಕದ್ದುಮುಚ್ಚಿ ಫಲಾನುಭವಿಗಳಿಗೆ ಏಕೆ ನೀಡಬೇಕಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ನಾಗಮಂಗಲ ತಾಲೂಕು ಕಸಬಾ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ಸರ್ವೇ ನಂ.೧೩ರ ಸರ್ಕಾರಿ ಗೋಮಾಳದ ೮ ಎಕರೆ ೧೦ ಗುಂಟೆ ಜಮೀನನ್ನು ಚಲುವರಾಯಸ್ವಾಮಿ ಅವರ ಬೆಂಬಲಿಗ ವನರಾಜು ತಂದೆ ಬಿ.ಎನ್.ನಿಂಗೇಗೌಡ ಹಾಗೂ ಮಾವ ಹಾಲ್ತಿ ಗ್ರಾಮದ ಮೂಡ್ಲಿಗಿರಿಗೌಡರವರಿಗೆ ನಕಲಿ ದಾಖಲೆ ಸೃಷ್ಟಿಸಿ ಸಲ್ಲಿಸಿದ್ದರು. ಅದನ್ನು ಪಾಂಡವಪುರ ಉಪವಿಭಾಗಾಧಿಕಾರಿಗಳು ಇಂಡೀಕರಿಸಿದ್ದು ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ದಾಖಲೆ ಸಹಿತ ವಿವರಿಸಿದರು.

ಚಲುವರಾಯಸ್ವಾಮಿ ಬೆಂಬಲಿಗ ಕ್ರಷರ್ ಮಾಲೀಕರೊಬ್ಬರ ಪತ್ನಿ ಹೆಸರಿಗೆ ಗಂಗಸಮುದ್ರ ಗ್ರಾಮದ ಸರ್ವೇ ನಂ.೧೪೩ರ ಅರಣ್ಯ ಜಾಗವನ್ನು ೩ ಎಕರೆ ೧೮ ಗುಂಟೆ ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆ ಎನ್‌ಒಸಿ ನೀಡದಿದ್ದರೂ ಹಣ ಪಡೆದು ಅಕ್ರಮವಾಗಿ ಗಣಿಗಾರಿಕೆಗೆ ಜಿಲ್ಲಾಧಿಕಾರಿಗಳು ಅನ್ಯಕ್ರಾಂತ ಮಾಡಿಕೊಟ್ಟಿದ್ದಾರೆ ಎಂದು ದೂಷಿಸಿದರು.

ಎಚ್.ಎನ್.ಕಾವಲು ಸರ್ವೇ ನಂ.೧೦೬ರಲ್ಲಿ ಸ್ಮಶಾನ ಮತ್ತು ಇತರರಿಗೆ ಮಂಜೂರಾಗಿರುವ ಜಾಗವನ್ನು ಚಲುವರಾಯಸ್ವಾಮಿರವರ ಬೆಂಬಲಿಗರು ಅತಿಕ್ರಮವಾಗಿ ಅದೇ ಜಾಗಕ್ಕೆ ತಂತಿಬೇಲಿ ಹಾಕಿಸಿ ದೌರ್ಜನ್ಯದಿಂದ ಕಬ್ಜ ಮಾಡಿಕೊಂಡು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇವುಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಸಹಿತ ದೂರುಗಳನ್ನು ನೀಡಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸುವ ದಂಧೆಕೋರರ ಜೊತೆ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿರುವ ರೈತರ ಜಮೀನಿನ ಮೂಲ ಕಡತಗಳನ್ನೇ ಕಸದ ತೊಟ್ಟಿಗೆ ಎಸೆದು ನಾಶಪಡಿಸುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಸಚಿವ ಎನ್.ಚಲುವರಾಯಸ್ವಾಮಿ ಅವರು ಕ್ರಮ ಕೈಗೊಳ್ಳಲು ಬಿಡದೆ ಬೆಂಬಲವಾಗಿ ನಿಂತಿದ್ದಾರೆ ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಕಲಬೆರಕೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಮನ್ಮುಲ್ ಒಕ್ಕೂಟಕ್ಕೆ ಮುತ್ತಿಗೆ