ಸಂಸ್ಕಾರ ಭರಿತ ಕಲೆ ಸಮಾಜಕ್ಕೆ ಅವಶ್ಯ

KannadaprabhaNewsNetwork |  
Published : Aug 22, 2024, 01:01 AM IST
21ಡಿಡಬ್ಲೂಡಿ7ಸಂಸ್ಕಾರ ಭಾರತಿ ಉತ್ತರ ಪ್ರಾಂತ ಮತ್ತು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್  ಸಂಯುಕ್ತವಾಗಿ ಗ್ರಂಥ ಮಾಲಾದ ಅಟ್ಟದಲ್ಲಿ ಏರ್ಪಡಿಸಿದ್ದ ಸಂವಾದ. | Kannada Prabha

ಸಾರಾಂಶ

ಕಲೆಗಾಗಿ ಕಲೆ ಅಲ್ಲ, ಕಲೆ ಕೇವಲ ವಿಲಾಸಕ್ಕಾಗಿ ಅಥವಾ ಮನರಂಜನೆಗಾಗಿ ಮಾತ್ರ ಅಲ್ಲ. ಅದು ಮುಕ್ತಿ ನೀಡುವಂತಹದ್ದಾಗಿದೆ.

ಧಾರವಾಡ:

ಭಾರತೀಯ ಕಲೆಗಳು ಆಯಾ ವ್ಯಕ್ತಿ, ಕುಟುಂಬ, ಗ್ರಾಮವನ್ನೊಳಗೊಂಡು ದೇಶದ ಉನ್ನತಿಗೆ ಸಂಸ್ಕಾರ ನೀಡಿದಾಗ ಮಾನವ ಕುಲದ ಉದ್ಧಾರ ಸಾಧ್ಯ ಎಂದು ಸಂಸ್ಕಾರ ಭಾರತೀಯ ಅಖಿಲ ಭಾರತ ಸಂಘಟಕ ಅಭಿಜಿತ ಗೋಖಲೆ ಹೇಳಿದರು.

ಸಂಸ್ಕಾರ ಭಾರತಿ ಉತ್ತರ ಪ್ರಾಂತ ಮತ್ತು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಂಯುಕ್ತವಾಗಿ ಗ್ರಂಥ ಮಾಲಾದ ಅಟ್ಟದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ಕಲೆಗಾಗಿ ಕಲೆ ಅಲ್ಲ, ಕಲೆ ಕೇವಲ ವಿಲಾಸಕ್ಕಾಗಿ ಅಥವಾ ಮನರಂಜನೆಗಾಗಿ ಮಾತ್ರ ಅಲ್ಲ. ಅದು ಮುಕ್ತಿ ನೀಡುವಂತಹದ್ದಾಗಿದೆ. ವಿಕೃತಿ, ಪ್ರಕೃತಿ, ಸಂಸ್ಕೃತಿ. ಈ ಮೂರು ಸಂಗತಿಗಳಲ್ಲಿ ಪ್ರಕೃತಿದತ್ತ್‌ ಕಲೆಗಳು. ಸಂಸ್ಕಾರ ಯುಕ್ತವಾಗಿ ಆತ್ಮೋನ್ನತಿಯೆಡೆಗೆ ಮತ್ತು ದೇಶ ಭಕ್ತಿ, ರಾಷ್ಟ್ರ ಭಕ್ತಿಯಿಂದ ಕೂಡಿದಾಗ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಪರಕೀಯರ ಆಕ್ರಮಣ ಭಾರತದ ಮೇಲಾದಾಗ ಭಕ್ತಿ ಪರಂಪರೆಯು ಈ ರಾಷ್ಟ್ರದ, ಧರ್ಮದ ಉಳಿವಿಗೆ ಕಾರಣವಾಯಿತು. ಅಂತೆಯೇ ಭಾರತೀಯ ಸಂಸ್ಕೃತಿ ಉಳಿಸಿ ಸ್ವಸ್ಥ ಸಮಾಜಕ್ಕೆ ಮಾದರಿಯಾಯಿತು. ಈ ರೀತಿಯ ಮಹತ್ ಕಾರ್ಯದ ಉದ್ದೇಶದಿಂದಲೇ ಸಂಸ್ಕಾರ ಭಾರತೀಯು ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

ಆನಂತರ ನಡೆದ ಸಂವಾದದಲ್ಲಿ ರಂಗ ನಿರ್ದೇಶಕ ಡಾ. ಪ್ರಕಾಶ ಗರುಡ, ಡಾ. ರಮಾಕಾಂತ ಜೋಶಿ, ಡಾ. ಹ.ವೆಂ. ಕಾಖಂಡಿಕಿ, ಸಮೀರ ಜೋಶಿ, ಅರವಿಂದ ಕುಲಕರ್ಣಿ, ಸುರೇಶ ಗುದಗನವರ, ರಾಜು ಪಾಟೀಲ, ಶ್ರೀನಿವಾಸ, ಮಾರುತಿ ಹುಟಗಿ, ಅಶೋಕ ಮೊಕಾಶಿ, ನಾಗೇಂದ್ರ ದೊಡ್ಡಮನಿ, ಡಾ. ಶ್ರೀಧರ ಕುಲಕರ್ಣಿ, ವೆಂಕಟೇಶ. ಸಂಜಯ ಪಾಟೀಲ, ಶ್ರೀನಿವಾಸ ಶಾಸ್ತ್ರೀ, ವೈಶಾಲಿ ರಸಾಳಕರ, ಶಿಲ್ಪಾ ಪಾಂಡೆ, ವಿನಾಯಕ ಮೊದಲಾದವರು ಭಾಗವಹಿಸಿದ್ದರು. ಡಾ. ಶಶಿಧರ ನರೇಂದ್ರ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!