- ಬಾಲಭವನದಲ್ಲಿ ಜಿಲ್ಲಾಮಟ್ಟದ ಮಕ್ಕಳ ದಿನಾಚರಣೆ ಉದ್ಘಾಟನೆ - - - ದಾವಣಗೆರೆ: ಮಕ್ಕಳ ಸುಪ್ತಪ್ರತಿಭೆ ಅನಾವರಣಗೊಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ಅವರ ಕಲಾಸಕ್ತಿ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಗುರುಪ್ರಸಾದ್ ಹೇಳಿದರು.
ಸಂಗೀತ, ಪಾತ್ರಾಭಿನಯ, ನೃತ್ಯ, ಚಿತ್ರಕಲೆ, ವಿಜ್ಞಾನದ ಆವಿಷ್ಕಾರಗಳು, ಮಗುವಿನ ಕಲಿಕೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಪೋಷಕರು ಮಕ್ಕಳಿಗೆ ಪುಸ್ತಕಗಳ ಓದುವುದಕ್ಕಷ್ಟೆ ಸೀಮಿತಗೊಳಿಸದೇ ಅವರ ಸರ್ವಾಂಗೀಣ ಅಭಿವೃದ್ಧಿಗೆ ಬಲ ತುಂಬುವಂತಹ ಸಾಂಸ್ಕೃತಿಕ ನೆಲಗಟ್ಟನ್ನು ಗಟ್ಟಿಗೊಳಿಸಿ, ಕ್ರಿಯಾಶೀಲರನ್ನಾಗಿ ಮಾಡಲು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ, ಪರಿವೀಕ್ಷಣಾಧಿಕಾರಿ ಮಾಲತಿ ಹಿರೇಗೌಡ, ನಿರ್ಣಾಯಕರಾದ ಅಜೇಯ ನಾರಾಯಣ್, ಶಾಂತಯ್ಯ ಪರಡಿಮಠ, ಇಂದಿರಾ, ಎಂ.ನಾಗರಾಜ ಇದ್ದರು.ಕಾರ್ಯಕ್ರಮದಲ್ಲಿ ವೈಷ್ಣವಿ ಸ್ವಾಗತ ನೃತ್ಯ ಮಾಡಿದರು. ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕಿ ಎಸ್.ಬಿ. ಶಿಲ್ಪ ಸ್ವಾಗತಿಸಿದರು. ವಂದನಾ ಕಾರ್ಯಕ್ರಮ ನಿರೂಪಿಸಿದರೆ ಡಿ.ಕೆ. ಲಕ್ಷ್ಮೀ ವಂದಿಸಿದರು.
- - - -17ಕೆಡಿವಿಜಿ47:ದಾವಣಗೆರೆಯಲ್ಲಿ ಸೋಮವಾಋಲ್ಲಿಂದು ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಗುರುಪ್ರಸಾದ ಉದ್ಘಾಟಿಸಿದರು.