ಧಾರ್ಮಿಕ ಪರಂಪರೆಯಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ

KannadaprabhaNewsNetwork |  
Published : Jun 27, 2026, 12:30 AM IST
ವಾರ್ಸಿಕೊತ್ಸವ | Kannada Prabha

ಸಾರಾಂಶ

ನುಗ್ಗೇಹಳ್ಳಿ ಗ್ರಾಮ ತನ್ನದೇ ಇತಿಹಾಸ ಹೊಂದಿದ್ದು, ಗ್ರಾಮದಲ್ಲಿ ಪಂಚಕಲ್ಯಾಣ ಸೇರಿದಂತೆ ಐತಿಹಾಸಿಕ ದೇವಾಲಯಗಳು ನಿರ್ಮಾಣಗೊಂಡಿವೆ. ಇದರಲ್ಲಿ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯವು ಕೂಡ ಒಂದಾಗಿದೆ. ಭಕ್ತರ ನೆರವಿನಿಂದ ಪುನರ್‌ ನಿರ್ಮಾಣಗೊಂಡು ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆ ಹೋಮ ಹವನಗಳನ್ನು ನಡೆಸಲಾಗಿದೆ. ದೇವರ ಕೃಪೆಯಿಂದ ಈ ವರ್ಷ ಬರಗಾಲದ ಛಾಯೆ ತೊಲಗಿ ಉತ್ತಮ ಮಳೆ ಬೆಳೆಯಾಗಲಿ ಎಂದು ದೇವರನ್ನು ಪ್ರಾರ್ಥಿಸಲಾಗಿದೆ ಎಂದರು. ವಾರ್ಷಿಕೋತ್ಸವ ಹಾಗೂ ದೇವರ ವಾಹನ ಒಂಟೆ ಪ್ರತಿಷ್ಠಾಪನೆ ಪ್ರಯುಕ್ತ ದೇವಾಲಯದಲ್ಲಿ ಅಭಿಷೇಕ ಸೇರಿದಂತೆ ಗ್ರಾಮದ ರಾಜಬೀದಿಗಳಲ್ಲಿ ದೇವರ ಉತ್ಸವ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಅಖಂಡ ವಿಶ್ವದಲ್ಲಿ ಭಾರತ ದೇಶದ ಸನಾತನ ಹಿಂದೂ ಧರ್ಮ ಸಂಸ್ಕೃತಿ ಯನ್ನು ಪೂಜ್ಯ ಭಾವನೆಯಿಂದ ನೋಡುವುದರ ಜೊತೆಗೆ ಎಲ್ಲಾ ದೇಶದವರು ಗೌರವಿಸುತ್ತಿದ್ದಾರೆ ಎಂದು ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಹೋಬಳಿ ಕೇಂದ್ರದ ಪೇಟೆ ಬೀದಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ದೇವರ ವಾಹನ ಒಂಟೆ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ದೇಶದ ಸಂಸ್ಕೃತಿ ಧರ್ಮ ಪರಂಪರೆಯ ಬಗ್ಗೆ ಜೊತೆಗೆ ಇಲ್ಲಿನ ಆಚರಣೆಯ ಬಗ್ಗೆ ವಿಶ್ವದ ಅನೇಕ ದೇಶಗಳಲ್ಲಿ ವಿಶೇಷ ಗೌರವ ಹೊಂದಿದ್ದಾರೆ ನಮ್ಮ ಧಾರ್ಮಿಕ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಇಲ್ಲಿ ಯಾವುದು ಕಾಲ್ಪನಿಕವಲ್ಲ ಎಲ್ಲವೂ ಕೂಡ ಇತಿಹಾಸವನ್ನು ಕೇಳುತ್ತವೆ ಎಂದರು.ರಾಮಾಯಣ ಮಹಾಭಾರತ ಮನುಷ್ಯನಲ್ಲಿರುವ ದ್ವೇಷ ಅಸೂಯೆ ಎಲ್ಲವನ್ನೂ ಕೂಡ ತನ್ನ ಚರಿತ್ರೆಯಲ್ಲಿ ಹೇಳುವ ಮೂಲಕ ಮನುಷ್ಯನಲ್ಲಿ ಬದಲಾವಣೆ ತರಲು ಸಾಧ್ಯವಾಗಿದೆ. ನುಗ್ಗೇಹಳ್ಳಿ ಗ್ರಾಮ ತನ್ನದೇ ಇತಿಹಾಸ ಹೊಂದಿದ್ದು, ಗ್ರಾಮದಲ್ಲಿ ಪಂಚಕಲ್ಯಾಣ ಸೇರಿದಂತೆ ಐತಿಹಾಸಿಕ ದೇವಾಲಯಗಳು ನಿರ್ಮಾಣಗೊಂಡಿವೆ. ಇದರಲ್ಲಿ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯವು ಕೂಡ ಒಂದಾಗಿದೆ. ಭಕ್ತರ ನೆರವಿನಿಂದ ಪುನರ್‌ ನಿರ್ಮಾಣಗೊಂಡು ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆ ಹೋಮ ಹವನಗಳನ್ನು ನಡೆಸಲಾಗಿದೆ. ದೇವರ ಕೃಪೆಯಿಂದ ಈ ವರ್ಷ ಬರಗಾಲದ ಛಾಯೆ ತೊಲಗಿ ಉತ್ತಮ ಮಳೆ ಬೆಳೆಯಾಗಲಿ ಎಂದು ದೇವರನ್ನು ಪ್ರಾರ್ಥಿಸಲಾಗಿದೆ ಎಂದರು. ವಾರ್ಷಿಕೋತ್ಸವ ಹಾಗೂ ದೇವರ ವಾಹನ ಒಂಟೆ ಪ್ರತಿಷ್ಠಾಪನೆ ಪ್ರಯುಕ್ತ ದೇವಾಲಯದಲ್ಲಿ ಅಭಿಷೇಕ ಸೇರಿದಂತೆ ಗ್ರಾಮದ ರಾಜಬೀದಿಗಳಲ್ಲಿ ದೇವರ ಉತ್ಸವ ನಡೆಸಲಾಯಿತು.ಮಾಜಿ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಬಿಜೆಪಿ ಮುಖಂಡ ಸಿ ಆರ್‌ ಚಿದಾನಂದ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ಪ್ರಧಾನ ಅರ್ಚಕ ರವಿಶಾಚಾರ್ ಸೇರಿದಂತೆ ಭಕ್ತರು ಗ್ರಾಮಸ್ಥರು ಪಾಲ್ಗೊಂಡಿದ್ದರು.ಫೋಟೋ ಸುದ್ದಿ :

ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಪೇಟೆ ಬೀದಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ದೇವರ ವಾಹನ ಒಂಟೆ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮದಲ್ಲಿ ಪುರ ವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಗಸ್ಟ್‌ 22, 23ರಂದು ಧಾರವಾಡದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಮೊಹರಂ: ಇರಾನಿಗಳ ಮೈಯಿಂದ ಚೆಲ್ಲಿದ ರಕ್ತ