ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಸಂಸ್ಕೃತಿ ಹಾಸುಹೊಕ್ಕಾಗಿದೆ-ಹಾವೇರಿ

KannadaprabhaNewsNetwork |  
Published : Aug 19, 2024, 12:47 AM IST
ಪೊಟೋ ಪೈಲ್ ನೇಮ್  ೧೮ಎಸ್‌ಜಿವಿ೩   ಪಟ್ಟಣದ ಹೊರವಲಯದಲ್ಲಿರುವ ಏಕಲವ್ಯಇಂಟರನ್ಯಾಶನಲ್ ಶಾಲೆಯಲ್ಲಿ ೭೮ ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಾಚಾರ್ಯಎಸ್.ಹೆಚ್.ಹಾವೇರಿ ಮಾತನಾಡಿದರು | Kannada Prabha

ಸಾರಾಂಶ

ನಮ್ಮದೇಶಕ್ಕೆ ತನ್ನದೆ ಆದ ಚರಿತ್ರೆಯಿದೆ. ಅನೇಕ ಸಂತರ, ಶರಣರ, ದಾರ್ಶನಿಕರ, ವಚನಕಾರರ ಆದರ್ಶಗಳು ನಮ್ಮ ಮುಂದೆ ಇವೆ. ನಮ್ಮ ನಡೆ-ನುಡಿ, ಆಚಾರ-ವಿಚಾರ, ವೇಷಭೂಷಣಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಇದು ಹಾಗೆಯೇ ಮುಂದುವರೆಯಬೇಕು ಎಂದು ಪ್ರಾಚಾರ್ಯ ಎಸ್.ಎಚ್. ಹಾವೇರಿ ಹೇಳಿದರು.

ಶಿಗ್ಗಾಂವಿ: ನಮ್ಮದೇಶಕ್ಕೆ ತನ್ನದೆ ಆದ ಚರಿತ್ರೆಯಿದೆ. ಅನೇಕ ಸಂತರ, ಶರಣರ, ದಾರ್ಶನಿಕರ, ವಚನಕಾರರ ಆದರ್ಶಗಳು ನಮ್ಮ ಮುಂದೆ ಇವೆ. ನಮ್ಮ ನಡೆ-ನುಡಿ, ಆಚಾರ-ವಿಚಾರ, ವೇಷಭೂಷಣಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಇದು ಹಾಗೆಯೇ ಮುಂದುವರೆಯಬೇಕು ಎಂದು ಪ್ರಾಚಾರ್ಯ ಎಸ್.ಎಚ್. ಹಾವೇರಿ ಹೇಳಿದರು.ಪಟ್ಟಣದ ಹೊರವಲಯದಲ್ಲಿರುವ ಏಕಲವ್ಯ ಇಂಟರನ್ಯಾಶನಲ್ ಶಾಲೆಯಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಕೇವಲ ಕ್ರಾಂತಿಯಿಂದ ಸ್ವಾತಂತ್ರ‍್ಯದೊರಕಿಲ್ಲ, ಒಂದು ಕಡೆಗೆ ಶಾಂತಿಯುತ ಹೋರಾಟವು ಸ್ವಾತಂತ್ರ್ಯ ದೊರಕಲು ಕಾರಣವಾಗಿದೆ. ಮತ್ತೊಂದು ಕಡೆಗೆ ಕ್ರಾಂತಿಯ ಹೋರಾಟ ಕಾರಣವಾಗಿದೆ ಎಂದರು.ನಿವೃತ್ತ ಕೆ.ಇ.ಬಿ. ಅಧಿಕಾರಿ ಸತ್ಯಬೋಧರಾವ್ ಬೆಳಗಲಿ ಮಾತನಾಡಿ, ಸ್ವಾತಂತ್ರ್ಯೋತ್ಸವ ದಿನಾಚರಣೆಯ ದಿನ ನನ್ನದು ಹುಟ್ಟು ಹಬ್ಬವಿರುವ ಕಾರಣ ನನಗೆ ಕರೆದು ಸನ್ಮಾನಿಸಿ ಗೌರವಿಸಿದ ಏಕಲವ್ಯ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಅಲ್ಲದೇ ತಾಲೂಕಿನಲ್ಲಿ ಈ ವರ್ಷ ಉಚಿತವಾಗಿ ಶಿಕ್ಷಣ ನೀಡುತ್ತಿರುವ ಅದು ಇಂಗ್ಲಿಷ್‌ ಮಾಧ್ಯಮದಲ್ಲಿ ಈ ಸಂಸ್ಥೆಯ ಕಾರ್ಯವು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಹಜರೇಸಾಬ ನಾಗನೂರ, ರಾಜೇಸಾಬ ನದಾಫ ಸೇರಿದಂತೆ ಶಿಕ್ಷಕಿಯರು, ಸಿಬ್ಬಂದಿ ವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕಿ ಅನ್ನಪೂರ್ಣಾ ಸ್ವಾಗತಿಸಿದರು. ಶಿಕ್ಷಕಿ ಸುಷ್ಮಾ ಹಿರಗಪ್ಪನವರ ವಂದಿಸಿದರು. ಶಿಕ್ಷಕಿ ಶೃತಿ ಬೆಳಗಲಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ