ಕೆ.ಎಂ.ದೊಡ್ಡಿ:
ಮದ್ದೂರಿನ ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕಿ ಸಿ.ಸುಮಿತ್ರಾ ಸುಂದ್ರೇಶ್ ರಾಶಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಹಬ್ಬ, ಸಂಸ್ಕೃತಿಯನ್ನು ಪರಿಚಯಿಸಲು ಶಾಲೆಯಲ್ಲಿ ಸುಗ್ಗಿ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಜನಪದ ಶೈಲಿಯ ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕೃತಿ ಮರೆಯಾಗುತ್ತಿರುವ ಪ್ರಸ್ತುತ ದಿನಗಳಿಂದ ಹಿಂದಿನ ಹಬ್ಬಗಳ ಶೈಲಿಯನ್ನು ಮತ್ತೆ ಅನಾವರಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಹಳ್ಳಿ ಶೈಲಿಯಲ್ಲೇ ಗುಡಿಸಲು ನಿರ್ಮಿಸಿ ಭತ್ತ, ರಾಗಿ ರಾಶಿ ಹಾಕಿ ಸೇರು, ಮೊರ, ಇಬ್ಬಳಿಗೆ, ಕೂಡುಗೋಲು ಸೇರಿದಂತೆ ರೈತರು ಬಳಸುವ ಸಾಮಗ್ರಿಗಳನ್ನು ಪೂಜಿಸಲಾಯಿತು. ವಿದ್ಯಾರ್ಥಿಗಳು ಸಂಪ್ರದಾಯಕ ಉಡುಗೆ ತೋಟ್ಟು ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ರವಿ ಸಾವಂದಿಪುರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಪಿ.ಸೌಮ್ಯ ಕೃಷ್ಣ, ಶಿಕ್ಷಕರಾದ ಎಸ್.ಬಿ.ಅಶ್ವಿನಿ, ಪಿ.ಸವಿತಾ, ಸುಕಾವ್ಯ, ವೈ.ಬಿ.ಕೃತಿಕಾ, ಎಚ್.ಸಿ.ಅರ್ಪಿತಾ, ದಿವ್ಯ, ಬಿ.ಜೆ.ಸೋನಿಕಾ, ಕೆ.ಎನ್.ಪ್ರಿಯಾಂಕ, ಕೆ.ಎನ್.ಅನುಪಮ, ಶ್ವೇತಾ, ಆಶಾ ಸೇರಿದಂತೆ ಹಲವರಿದ್ದರು. ಬ್ರಹ್ಮ ಬಾಬಾ ಲೇಖರಾಜ್ ಸ್ಮೃತಿ ದಿನ ಆಚರಣೆಕಿಕ್ಕೇರಿ:
ಆಧ್ಯಾತ್ಮ ಚಿಂತಕರಾಗಿ ಅಂಧಕಾರ ಬದುಕಿಗೆ ಮುಕ್ತಿ ಮಾರ್ಗದ ಪ್ರಚಾರಕರಾಗಿ ದಾರಿ ತೋರಿದ ಲೇಖರಾಜ್ ಬ್ರಹ್ಮ ಭಗವಂತರು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕಿಕ್ಕೇರಿ ಘಟಕದ ಮುಖ್ಯಸ್ಥೆ ಬಿ.ಕೆ.ಅರ್ಚನಾ ತಿಳಿಸಿದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಏರ್ಪಡಿಸಿದ್ದ ಪ್ರಮುಖ ಕೇಂದ್ರದ ಸ್ಥಾಪಕರಾದ ಲೇಖರಾಜ್ ಮಾತನಾಡಿ, ಬಾಬಾ ಅವರು 1969ರ ಜ.18 ರಂದು ದೈವಾಧೀನರಾದರು.
ಇವರ ಪುಣ್ಯದಿನವನ್ನು ಸ್ಮೃತಿದಿನವಾಗಿ ಇಡೀ ವಿಶ್ವದಲ್ಲಿ ಆಚರಿಸಲಾಗುತ್ತಿದೆ. ಸಂಸಾರ ವ್ರತಸ್ಥರಾಗಿ ವಜ್ರ ವ್ಯಾಪಾರಿಗಳಾಗಿದ್ದ ಇವರು ವಿಶ್ವದ 140 ರಾಷ್ಟ್ರಗಳಲ್ಲಿ 9 ಸಾವಿರ ಬ್ರಹ್ಮಕುಮಾರಿ ಸಮಾಜದ ಕೇಂದ್ರ ಸ್ಥಾಪಿಸಿದ್ದಾರೆ. ಲೌಕಿಕ ಬದುಕಿಗಿಂತ ಪಾರಮಾರ್ತಿಕ ಬದುಕು ಶ್ರೇಷ್ಠ. ಆತ್ಮ, ಜ್ಞಾನ, ಪರಮಾತ್ಮ ಒಂದೇ. ಲಿಂಗ ರೂಪದಲ್ಲಿನ ಭಗವಂತನಾದ ಶಿವ ನಿರಾಕಾರ, ನಿರಾಮಯಿಯಾಗಿ ಬಿಂಧು ರೂಪದಲ್ಲಿದ್ದಾನೆ. ಇದೇ ಜ್ಯೋರ್ತಿಬಿಂಧು ಎಂದು ತಿಳಿಸಿದವರು ಲೇಖರಾಜ್. ಭಗವಂತನ ಧ್ಯಾನ ಮಾಡಿ ಮುಕ್ತಿಮಾರ್ಗ ಹೊಂದಿ ಎಂದರು.ಈ ವೇಳೆ ದೇವರಾಜು, ಸ್ವಾಮಿಗೌಡ, ರವಿ, ವರದಮ್ಮ, ಕಾಂತಾಮಣಿ, ಮಂಜುಳಾ, ಲಲಿತಾಬಾಯಿ, ರುಕ್ಮಿಣಿ, ಪದ್ಮಾವತಿ, ಉಮಾ ಇದ್ದರು.