ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಗೌರಿ ಹಬ್ಬದ ಪ್ರಯುಕ್ತ ಕೆಆರ್‌ಡಿಎಸ್‌ಎಸ್ ಸಮಿತಿಯ ಡಿ.ಜಿ.ಸಾಗರ ಬಣದಿಂದ ಆಯೋಜಿಸಿದ್ದ 13ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಭಾನುವಾರ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ 21 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ರಾಮಯ್ಯ ಹಲವು ಕಷ್ಟದ ಸಂದರ್ಭಗಳ ನಡುವೆಯೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಿರಂತರವಾಗಿ ಆಯೋಜಿಸುತ್ತಿರುವುದು ಮೆಚ್ಚುವಂತಹ ಕಾರ್ಯವಾಗಿದೆ. ಸಾಮೂಹಿಕ ವಿವಾಹಕ್ಕೆ ಆಗಮಿಸುವ ಬಹುತೇಕ ಕುಟುಂಬ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರುತ್ತಾರೆ. ಇಂತಹ ಕಾರ್ಯಕ್ರಮ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಮದುವೆಯ ಆರ್ಥಿಕ ಹೊರೆ ಕಡಿಮೆ ಮಾಡುವುದರ ಜತೆಗೆ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಛಲವಾದಿ ನರಸಪ್ಪ, ಎಚ್.ಶಿವಶಂಕರ ಗೌಡ, ಬಿ.ನಾರಾಯಣಪ್ಪ, ಎಚ್. ರಾಮಯ್ಯ, ಕೆ. ಷಣ್ಮುಖಪ್ಪ, ಪಿಡಿಒ ಮಲ್ಲಿಕಾರ್ಜುನ, ರಾಜೇಶ್, ಎ.ಇ.ಇ. ಸಿಆರ್ ಹನುಮಂತ, ಜಿ.ರಾಮಣ್ಣ, ಚಾಂದ್ ಬಾಷಾ, ರಾಜಶೇಖರ ಗೌಡ, ಹೊನ್ನಳ್ಳಿ ಗಂಗಾಧರ, ಕೆ. ಮಲ್ಲಿಕಾರ್ಜುನ, ಮೆಟ್ರಿಗಿರಿ ರಮೇಶ್ ಗೌಡ, ಬೇಕರಿ ಸಿದ್ದಪ್ಪ, ಸೋಮಶೇಖರ, ಶಿವಪ್ಪ,ಬಾರಿಕರು ಬಾವೇಕ್ಯ ವೆಂಕಟೇಶ್, ಎಚ್.ಕುಮಾರ್ ಸೇರಿದಂತೆ ರಾಮಸಾಗರ ಗ್ರಾಮದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ನವದಂಪತಿಗಳ ಕುಟುಂಬಸ್ಥರು ಪಾಲ್ಗೊಂಡಿದ್ದರು.