ಏಕನಾಥ ಮೆದಿಕೇರಿ
ಪಟ್ಟಣದಲ್ಲಿ ಬುತ್ತಿ ಬಸವೇಶ್ವರ ಆವರಣದಲ್ಲಿ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಪರಮೇಶ್ವರಪ್ಪ ದಂಡಿನ ವೇದಿಕೆಯ ಸಂಕೀರ್ಣ ಗೋಷ್ಠಿ ಉಪನ್ಯಾಸ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ವಿಷಯ ಕುರಿತು ಅವರು ಮಾತನಾಡಿದರು.
ಮನುಷ್ಯನ ಬದುಕಿನ ನೋವು, ನಲಿವು, ಅನುಭವ, ಸೌಂದರ್ಯಪ್ರಜ್ಞೆ ಹಾಗೂ ವೈಚಾರಿಕ ಚಿಂತನೆಗಳ ಅಭಿವ್ಯಕ್ತಿಯೇ ಸಾಹಿತ್ಯ. ಅಲೆಮಾರಿ ಬದುಕಿನಿಂದ ಆರಂಭವಾದ ಮನುಷ್ಯನ ನಾಗರಿಕತೆ, ಸಂಸ್ಕೃತಿ ಮತ್ತು ಬರವಣಿಗೆ ತಾಳೆಗರಿಯಿಂದ ಇಂದಿನ ಕೃತಕ ಬುದ್ಧಿಮತ್ತೆಯ ವರೆಗೆ ವಿವಿಧ ಹಂತಗಳಲ್ಲಿ ಬೆಳವಣಿಗೆ ಕಂಡಿದೆ. ಕನ್ನಡ ಚುಟುಕು ಸಾಹಿತ್ಯದ ಮೂಲವನ್ನು ಜನಪದ ಸಾಹಿತ್ಯದಲ್ಲಿ ಗುರುತಿಸಬಹುದು. ಜನಪದ ಹಾಡು, ಒಗಟು ಹಾಗೂ ನಾಲ್ಕು ಸಾಲಿನ ಪದ್ಯಗಳಲ್ಲಿ ಚುಟುಕು ಸಾಹಿತ್ಯದ ಆಶಯಗಳು ಅಡಕವಾಗಿವೆ ಎಂದು ಹೇಳಿದರು.ಲೇಖಕ ಕಿಷನರಾವ್ ಕುಲಕರ್ಣಿ ಸಾಹಿತ್ಯದಲ್ಲಿ ಚುಟುಕು, ಸಾಹಿತ್ಯದ ಪ್ರಭಾವ ಕುರಿತು ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಿ.ಬಿ. ಗಡಾದ ಚುಟುಕು ಸಾಹಿತ್ಯ ಬೆಳೆದು ಬಂದ ಬಗೆ ಉಪನ್ಯಾಸ ನೀಡಿದರು. ನಿವೃತ್ತ ಪ್ರಾಚಾರ್ಯ ಶರಣಬಸ ಡಾನಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಮಹಾಂತೇಶ ನೆಲಗಣಿ, ಬಸವರಾಜ ಉಪ್ಪಿನ, ಮೈಲಾರಪ್ಪ ವಕ್ಕಲಿ, ಚುಸಾಪಾ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಬಂಡಾರಿ, ಸಿಪಿಐ ವಿಶ್ವನಾಥ ಹಿರೇಗೌಡರ, ಮಂಜುನಾಥ ಗುಳೇದಗುಡ್ಡ, ಶ್ರೀಕಾಂತ ಕೊಡತನಿ, ಎಪಿ ಅಂಗಡಿ, ಪಿಎಸ್ಐ ಹನುಮಂತಪ್ಪ ತಳವಾರ, ವಸರಾಜ ಗಾಡಿಗೇರ, ಶೇಖರಗೌಡ ಮಾಲಿಪಾಟೀಲ, ವಿಶ್ವನಾಥ ಅಮಲಿಕೊಪ್ಪಮಠ, ಮಹೇಶ ಹಡಪದ ಇದ್ದರು.
ಭಾಷೆ- ಸಂಸ್ಕೃತಿ ಉಳಿಸಿ: ಚಂದಪ್ಪ ಹಕ್ಕಿ