ಡೊನೇಷನ್ ಹಾವಳಿಗೆ ಕಡಿವಾಣ ಹಾಕಿ

KannadaprabhaNewsNetwork |  
Published : May 23, 2024, 01:03 AM IST
22ಕೆಬಿಪಿಟಿ.1.ಬಂಗಾರಪೇಟೆ ಬಿಇಒ ಕಚೇರಿ ಮುಂದೆ ದಲಿತ ಸಮಾಜಸೆನಯ್ಕಾರ್ಯಕರ್ತರು ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕುಸಿದಿದೆ.ಇದನ್ನೇ ಭಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಶಾಲೆಗಳು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ಸಹ ಡೊನೇಷನ್ ಹೆಸರಲ್ಲಿ ಹಣ ವಸೂಲಿ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಖಾಸಗಿ ಶಾಲೆಗಳಲ್ಲಿ ಅನಧಿಕೃತವಾಗಿ ಪಡೆಯುತ್ತಿರುವ ಡೊನೇಷನ್ ಹಾವಳಿಗೆ ಬಿಇಒ ಕಚೇರಿ ಕಟ್ಟುನಿಟ್ಟಿನ ಕ್ರಮಕೈಗೊಂಡು ತಡೆಗಟ್ಟಬೇಕು. ಇಲ್ಲವಾದರೆ ಬಿಇಒ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುಲಾಗುವುದು ಎಂದು ದಲಿತ ಸಮಾಜ ಸೇನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಎಚ್ಚರಿಕೆ ನೀಡಿದರು.

ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ದಲಿತ ಸಮಾಜ ಸೇನೆ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಖಾಸಗಿ ಶಾಲೆಗಳಿಂತ ಸರ್ಕಾರಿ ಶಾಲೆಗಳಲ್ಲಿ ಬೋಧನೆಯ ಗುಣಮಟ್ಟ ಉತ್ತಮವಾಗಿದೆ ಎಂದರು.

ಸೌಲಭ್ಯ ಇಲ್ಲದಿದ್ದರೂ ಶುಲ್ಕ ಹೆಚ್ಚಳ

ಆದರೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕುಸಿದಿದೆ.ಇದನ್ನೇ ಭಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಶಾಲೆಗಳು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ಸಹ ಡೊನೇಷನ್ ಹೆಸರಿನಲ್ಲಿ ಬಡ ಪೋಷಕರಿಂದ ಲಕ್ಷಾಂತರ ರು.ಗಳನ್ನು ಪಡೆಯುತ್ತಿವೆ. ಆದರೂ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಲ್ಲದೆ ಶಾಲೆಗಳಲ್ಲೆ ಪುಸ್ತಕದಿಂದ ಹಿಡಿದು ಎಲ್ಲಾ ಸಲಕರಣಿಗಳನ್ನು ಖರೀದಿ ಮಾಡಬೇಕೆಂದು ಶರತ್ತು ಹಾಕುವರು ಎಂದು ಆರೋಪಿಸಿ ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಲು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಲು ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಶಿಕ್ಷಣಕ್ಕಿಂತ ಹಣಕ್ಕೆ ಆದ್ಯತೆ

ಎಷ್ಟೋ ಮಂದಿ ಪ್ರತಿಭಾವಂತ ಬಡಮಕ್ಕಳು ಖಾಸಗಿ ಶಾಲೆಗಳಲ್ಲಿ ಹೈಫೈ ಶಿಕ್ಷಣ ದೊರೆಯುತ್ತದೆ ಎಂದ ಆಸೆಯಿಂದ ಕಳುಹಿಸುತ್ತಾರೆ, ಆದರೆ ಅಲ್ಲಿ ಶಿಕ್ಷಣಕ್ಕಿಂತ ಹಣಕ್ಕೆ ಹೆಚ್ಚಿನ ಆದ್ಯತೆ ನೀಡುವರು ಎಂಬ ಸತ್ಯ ಬಡ ಪೋಷಕರಿಗೆ ಅರಿಯದೆ ದಾಖಲಿಸುವರು ಇದಕೆಲ್ಲಾ ಕಡಿವಾಣ ಹಾಕಿ ಸರ್ಕಾರಿ ಶಾಲೆಗಳಲ್ಲಿ ಸಿಗುವ ಅನುಕೂಲಗಳ ಬಗ್ಗೆ ಪ್ರಚಾರ ಮಾಡಿ ಖಾಸಗಿ ವ್ಯಾಮೋಹವನ್ನು ಬಡ ಪೋಷಕರಲ್ಲಿ ಹೋಗಲಾಡಿಸಲು ಇಲಾಖೆ ಮುಂದಾಗಬೇಕು. ಇಲ್ಲದಿದ್ದರೆ ಬಿಇಒ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!