ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ:
ರಾಮಪುರದ ಪೂರ್ಣಿಮಾ ಹೀರೋ ಮೋಟರ್ಸ್ ನೂತನ ಕಾರ್ಯಾಗಾರ ಮತ್ತು ಮಾರಾಟ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಕೇವಲ ಲಾಭದ ದೃಷ್ಟಿಕೋನ ಹೊಂದದೇ ಗ್ರಾಹಕರ, ಸಿಬ್ಬಂದಿಗಳ ವಿಶ್ವಾಸ, ನಂಬಿಕೆ ಮತ್ತು ಪ್ರೀತಿಗೆ ಭಾಜನರಾದಾಗ ಮಾತ್ರ ದೀರ್ಘಕಾಲದ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿ, ವ್ಯವಹಾರ ಸ್ನೇಹಮಯವಾಗಿ ಬೆಳೆಯಬೇಕು. ಅದರಲ್ಲಿ ಗ್ರಾಹಕ ಮತ್ತು ಮಾಲೀಕ ಇಬ್ಬರು ತೃಪ್ತಿಪಟ್ಟುಕೊಳ್ಳುವಂತಾಗುವದೇ ವ್ಯವಹಾರ. ಮೂರು ದಶಕಗಳ ಕಾಲ ಅಟೋಮೋಬೈಲ್ ಉದ್ಯಮದಲ್ಲಿ ಅವಿಶ್ರಾಂತ ದುಡಿದು ಅಹಂಭಾವ ಬೆಳೆಸಿಕೊಳ್ಳದೇ ಗ್ರಾಹಕರು ದೇವರೆಂದು ಭಾವಿಸಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯೂ ಪ್ರಗತಿಯಾಗುತ್ತದೆ ಎಂದರು.
ಬಳಿಕ ಇಂಚಗೇರಿಯ ರುದ್ರಮನಿ ಸ್ವಾಮೀಜಿ ಮಾತನಾಡಿದರು. ಹಿರಿಯ ಮಹಾದೇವಪ್ಪ ಹೊರಟ್ಟಿ, ರಾಮಣ್ಣ ಭದ್ರನ್ನವರ, ಗುರುರಾಜ ಹೊರಟ್ಟಿ, ಎ.ಬಿ.ದೇಸಾಯಿ, ಮಲ್ಲು ಭದ್ರನ್ನವರ, ರಾಜು ಕಡಕಬಾವಿ, ಪವನ ಲಡ್ಡಾ, ಸೋಮಶೇಖರ ಕೊಟ್ರಶೆಟ್ಟಿ, ಬಸವರಾಜ ದಲಾಲ, ಚಿದಾನಂದ ಹೊರಟ್ಟಿ, ಸುವರ್ಣಾ ಹೊರಟ್ಟಿ, ಗೀತಾ ಮಿರ್ಜಿ, ಗಿರಿಜಾ ಅಂದಾನಿ, ಆರುಷಿ, ಮಂಜುಳ ಕೆಂಧೂಳಿ, ಪ್ರಜ್ವಲ್, ಶಶಾಂಕ, ಚಂದ್ರಶೇಖರ, ಮನೋಜ ಆಳಂದಕರ ಸೇರಿದಂತೆ ಮುಂತಾದವರು ಹಾಜರಿದ್ದರು.