ಉಡುಪಿ: ಇಂದಿನ ಆಧುನಿಕ ಯುಗದಲ್ಲಿ ಜನಸಾಮಾನ್ಯರು ಸೈಬರ್ ವಂಚನೆಗೆ ಬಲಿಯಾಗುತ್ತಿರುವುದು ಸಾಮಾನ್ಯ ವಿಷಯವಾಗಿದ್ದು, ಇದರಿಂದ ಸೈಬರ್ ಕ್ರೈಂ ಕುರಿತಾದ ಅರಿವು ಕಾರ್‍ಯಕ್ರಮ ವ್ಯಾಪಕವಾಗಿ ನಡೆಯಬೇಕಾಗಿದೆ. ಅದರಲ್ಲೂ ಹಿರಿಯ ನಾಗರಿಕರು ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಕೌಶಲ್ಯ ತರಬೇತುದಾರ ರವಿರಾಜ ನಾಯಕ್ ಹೇಳಿದರು.
ಉಡುಪಿ ಹಿರಿಯ ನಾಗರಿಕರ ಸಂಸ್ಥೆ ಅಧ್ಯಕ್ಷ ಕೆ. ಮುರಳೀಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲತಿ ತಂತ್ರಿ ಅವರು ಇನ್ನರ್ ವೀಲ್ ಕ್ಲಬ್‌ನ ಪರಿಚಯ ಮಾಡಿದರು. ಇನ್ನರ್ ವೀಲ್ ಕ್ಲಬ್ ಕಾರ್‍ಯದರ್ಶಿ ಶೈಲಾ ಮಯ್ಯ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್‍ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಹಿರಿಯ ನಾಗರಿಕ ಸಂಸ್ಥೆಯ ಗೌರವಾಧ್ಯಕ್ಷ ಕೆ. ಸದಾನಂದ ಹೆಗ್ಡೆ, ಕಾರ್‍ಯದರ್ಶಿ ನಂದ ಕುಮಾರ್ ಉಪಸ್ಥಿತರಿದ್ದರು. ಜತೆ ಕಾರ್‍ಯದರ್ಶಿ ಜಯ ತಂತ್ರಿ ವಂದಿಸಿದರು. ಕಾರ್‍ಯಕ್ರಮದಲ್ಲಿ ನೂರಾರು ಹಿರಿಯ ನಾಗರಿಕರು ಭಾಗವಹಿಸಿದ್ದರು.