ಸೈಬರ್‌ ಅಪರಾಧ: ಸಂಖ್ಯೆ ಇಳಿದರೂ, ವಂಚನೆ ಮೊತ್ತ ಆರೇಳು ಪಟ್ಟು ಅಧಿಕ

KannadaprabhaNewsNetwork |  
Published : Feb 21, 2026, 01:15 AM IST
ಹೊನ್ನಾಳಿ ಫೋಟೋ 20ಎಚ್.ಎಲ್.ಐ2 ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ವಿಬಿ-ರಾಮ್-ಜಿ ಬಗ್ಗೆ ನಡೆಯುವ ಜನಜಾಗೃತಿಯ ಸಮಾರೋಪ ಸಮಾರಂಭದ ಸ್ಥಳವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವೀಕ್ಷಿಸಿ ಮಾತನಾಡಿದರು.  | Kannada Prabha

ಸಾರಾಂಶ

ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್‌ ಅಪರಾಧಗಳ ಸಂಖ್ಯೆ ಸ್ವಲ್ಪ ಇಳಿಮುಖವಾದರೂ ವಂಚನೆ ಮೊತ್ತ ಮಾತ್ರ ಆರೇಳು ಪಟ್ಟು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ ₹13.22 ಕೋಟಿಯಷ್ಟುಸೈಬರ್‌ ವಂಚನೆ ಆಗಿದೆ.

ಕಳೆದ ಒಂದೂವರೆ ತಿಂಗಳಲ್ಲೆ ಬರೋಬ್ಬರಿ 15 ಪ್ರಕರಣ । ₹4.50 ಕೋಟಿ ನಷ್ಟು ಸೈಬರ್‌ ವಂಚನೆ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್‌ ಅಪರಾಧಗಳ ಸಂಖ್ಯೆ ಸ್ವಲ್ಪ ಇಳಿಮುಖವಾದರೂ ವಂಚನೆ ಮೊತ್ತ ಮಾತ್ರ ಆರೇಳು ಪಟ್ಟು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ ₹13.22 ಕೋಟಿಯಷ್ಟುಸೈಬರ್‌ ವಂಚನೆ ಆಗಿದೆ.

ಕಳೆದ ಒಂದೂವರೆ ತಿಂಗಳಲ್ಲೆ ಬರೋಬ್ಬರಿ 15 ಪ್ರಕರಣ ದಾಖಲಾಗಿದ್ದು, ಸುಮಾರು ₹4.50 ಕೋಟಿ ನಷ್ಟು ಸೈಬರ್‌ ವಂಚನೆ ಬೆಳಕಿಗೆ ಬಂದಿದೆ. ಇದಲ್ಲದೇ, ದೂರು ದಾಖಲಾಗದಿರುವ ನೂರಾರು ಪ್ರಕರಣಗಳಿದ್ದು, ಕೋಟ್ಯಾಂತರ ರು. ವಂಚನೆ ಆಗಿವುದರಲ್ಲಿ ಯಾವುದೇ ಅನುಮಾನವಿಲ್ಲ.

ಪಾರ್ಟ್‌ ಟೈಮ್ ಜಾಬ್, ಉದ್ಯೋಗಾವಕಾಶ, ತ್ವರಿತ ಗತಿಯಲ್ಲಿ ಹಣ ದ್ವಿಗುಣ ಆಮಿಷದ ಹೂಡಿಕೆ, ಸರ್ಕಾರಿ ಯೋಜನೆಗಳ ಲಾಭ, ಡಿಜಿಟಲ್ ಅರೆಸ್ಟ್ ನೆಪದಲ್ಲಿ ವಂಚಕರು ಸಾರ್ವಜನಿಕರಿಂದ ಕೋಟ್ಯಾಂತರ ಹಣ ದೋಚಿದ್ದಾರೆ.

ಆನ್‌ಲೈನ್‌ ವ್ಯವಸ್ಥೆ ಸುಧಾರಿಸಿದಷ್ಟು ಸೈಬರ್‌ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಗದು ರಹಿತ ವ್ಯವಹಾರಕ್ಕೆ ಜನರು ಆದ್ಯತೆ ನೀಡುತ್ತಿರುವುದು ಸೈಬರ್‌ ವಂಚಕರಿಗೆ ವರದಾನವಾಗುತ್ತಿದೆ.

ಸಂಖ್ಯೆ ಇಳಿಕೆ, ವಂಚನೆ ಮೊತ್ತ ಅಧಿಕ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಸಂಭವಿಸಿದ ಸೈಬರ್‌ ವಂಚನೆ ಪ್ರಕರಣಗಳನ್ನು ಗಮನಿಸಿದರೆ, ವರ್ಷ ದಿಂದ ವರ್ಷಕ್ಕೆ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ, ವಂಚನೆಯಾದ ಮೊತ್ತದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

2023ರಲ್ಲಿ 62 ಸೈಬರ್‌ ಪ್ರಕರಣ ದಾಖಲಾಗಿ ₹1.35 ಕೋಟಿ ವಂಚನೆ ನಡೆದಿತ್ತು. 2024ರಲ್ಲಿ ಈ ಸಂಖ್ಯೆ 55ಕ್ಕೆ ಇಳಿದರೂ ವಂಚನೆ ಮೊತ್ತ ಮಾತ್ರ ಬರೋಬ್ಬರಿ ₹5.38 ಕೋಟಿಗೆ ಹೆಚ್ಚಿತ್ತು. 2025ರಲ್ಲಿ ಪ್ರಕರಣಗಳ ಸಂಖ್ಯೆ 47ಕ್ಕೆ ಕುಸಿದಿದ್ದರೂ ವಂಚನೆ ಮೊತ್ತ ₹6.48 ಕೋಟಿ ಯಾಗಿದೆ. 2026ರ ಜನವರಿ ಹಾಗೂ ಫೆ.20ರ ಅವಧಿಯಲ್ಲಿ ಒಟ್ಟು ₹15 ಪ್ರಕರಣ ದಾಖಲಾಗಿ ಇದರಿಂದ ಬರೋಬ್ಬರಿ ₹4.50 ಕೋಟಿ ನಷ್ಟು ಹಣ ದೋಚಲಾಗಿದೆ. ಒಂದೇ ಪ್ರಕರಣದಲ್ಲಿ ₹2.59 ಕೋಟಿ ವಂಚನೆ ನಡೆದ ಬಗ್ಗೆ ದೂರು ದಾಖಲಾಗಿದೆ.

ವಂಚನೆ ಕೋಟಿಯಾದರೂ ರಿಕವರಿ ಲಕ್ಷಕ್ಕೆ ಸೀಮಿತ

ಸೈಬರ್‌ ವಂಚನೆಯಲ್ಲಿ ಕಳೆದುಕೊಂಡ ಮೊತ್ತ ಮರು ವಸೂಲಿ ಎಂಬುದೇ ಇಲ್ಲ. ಗೋಲ್ಡರ್‌ ಅವರ್‌ನಲ್ಲಿ ಸೈಬರ್‌ ಪೊಲೀಸರ ಗಮನಕ್ಕೆ ತಂದರಷ್ಟೆ ಶೇ.50 ರಿಂದ 60 ರಷ್ಟು ಹಣ ರಿಕವರಿ ಮಾಡಲು ಸಾಧ್ಯ. ಆದರೆ, ದಾಖಲಾಗುವ ಬಹುತೇಕ ಪ್ರಕರಣ ಗಳಲ್ಲಿ ಸೈಬರ್‌ ವಂಚನೆ ಆಗಿರುವ ಬಗ್ಗೆ ಅರಿವಿಗೆ ಬರುವುದೇ ತಡವಾಗಿ. ಆ ವೇಳೆಗೆ ವಂಚನೆ ಹಣ ಬೇರೆ ಬೇರೆ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗಿರುತ್ತದೆ. ಆಗ ರಿಕವರಿ ಮಾಡುವುದು ಅಸಾಧ್ಯ ಎಂದು ಡಿವೈಎಸ್‌ಪಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

-- ಬಾಕ್ಸ್‌ --

ಬ್ಯಾಂಕ್‌ ನೋಡಲ್‌ ಅಧಿಕಾರಿಗಳ ಅಸಹಕಾರ

ಸೈಬರ್‌ ಅಪರಾಧ ಪತ್ತೆ, ತನಿಖೆ ಸಹಕಾರ ನೀಡುವುದಕ್ಕೆ ಪ್ರತಿ ಬ್ಯಾಂಕ್‌ನಲ್ಲಿ ನೋಡಲ್‌ ಅಧಿಕಾರಿ ನೇಮಕ ಮಾಡಲಾಗಿದೆ, ಆದರೆ, ನೋಡಲ್‌ ಅಧಿಕಾರಿಗಳು ಸರಿಯಾಗಿ ಸಹಕಾರ ನೀಡುವುದಿಲ್ಲ. ಈ ಕಾರಣಕ್ಕೆ ಪ್ರಕರಣ ಇತ್ಯರ್ಥಪಡಿಸುವುದು ವಿಳಂಬ ವಾಗಲಿದೆ. ವಂಚಕ 2ನೇ ಹಂತ ಹಾಗೂ ಆ ನಂತರದ ಹಂತದ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಿದಾ ವಸೂಲಿ ಮಾಡುವುದಕ್ಕೆ ಬ್ಯಾಂಕ್‌ ಸಹಕಾರ ನೀಡಬೇಕು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಹಕಾರ ದೊರೆಯುತ್ತಿಲ್ಲ, ಹಾಗಾಗಿ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.---ಬಾಕ್ಸ್‌--

ಉದ್ಯೋಗದ ಆಸೆ ವಂಚನೆ ಹೆಚ್ಚು

ಕಳೆದ ಮೂರು ವರ್ಷದ ಅಂಕಿ ಅಂಶ ಗಮನಿಸಿದರೆ, ಅತಿ ಹೆಚ್ಚು ಮಂದಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವುದೇ ಹೆಚ್ಚಾಗಿವೆ. ಒಟ್ಟು ಪ್ರಕರಣದ ಪೈಕಿ 36 ಮಂದಿ ಉದ್ಯೋಗ ಪಡೆವ ನಿಟ್ಟಿನಲ್ಲಿ ವಂಚನೆಗೆ ಒಳಗಾಗಿದ್ದಾರೆ. ಉಳಿದಂತೆ 16 ಪ್ರಕರಣ ಅನಧಿಕೃತ ಲಿಂಕ್‌ ಬಳಕೆ ಮತ್ತು ಒಟಿಪಿ ಹೇಳಿ ವಂಚನೆಗೆ ಒಳಗಾಗಿದ್ದಾರೆ.

ಷೇರು ಮಾರುಕಟ್ಟೆ ಹೂಡಿಗೆಗೆ ಸಲಹೆ ನೆಪ ಮತ್ತು ವರ್ಕ್‌ ಫ್ರಂ ಹೋ ಕೆಲಸ ಕೊಡಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ 10 ಪ್ರಕರಣ, ವರ್ಕ್‌ ಫ್ರಂ ಹೋಂಗೆ ಸಂಬಂಧಿಸಿದಂತೆ 5 ಪ್ರಕರಣ ದಾಖಲಾಗಿವೆ.

--ಕೋಟ್‌--

ಎಚ್ಚರಿಕೆಯೊಂದೆ ಪರಿಹಾರ

ಸೈಬರ್‌ ವಂಚನೆ ತಡೆಯಲು ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಜನರು ಜಾಗೃತರಾಗಬೇಕು. ಎಪಿಕೆ ಲಿಂಕ್‌ ಬಳಕೆ ಮಾಡಬಾರದು. ಸೈಬರ್‌ ವಂಚನೆ ಬಗ್ಗೆ ತಕ್ಷಣ ಸಹಾಯವಾಣಿಗೆ 1930 ಕರೆ ಮಾಡಿ ದೂರು ದಾಖಲಿಸಿದರೆ ವಂಚನೆ ತಡೆಗಟ್ಟಲು ಅವಕಾಶವಿದೆ.

- ತಿಪ್ಪೇಸ್ವಾಮಿ

ಡಿವೈಎಸ್‌ಪಿ, ಜಿಲ್ಲಾ ಸಿಇಎನ್‌ ಅಪರಾಧ ವಿಭಾಗ, ಚಿಕ್ಕಮಗಳೂರು

- ಬಾಕ್ಸ್‌---

ಮೂರು ವರ್ಷದ ಸೈಬರ್‌ ಕ್ರೈಂ ವಿವರ

ವರ್ಷಪ್ರಕರಣವಂಚನೆ ಮೊತ್ತರಿಕವರಿ ಮೊತ್ತ

2023621,35,94,65417,88,7812024555,38,19,38015,50,6102025476,48,57,37318,70,260

2026(ಫೆ.20)154,11,54,590

ಒಟ್ಟು17717,34,26,36152,09,651

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಸಫಾರಿ ಪುನಾರಂಭ: ಸಚಿವ ಖಂಡ್ರೆ
ವಿಬಿ ಜಿ ರಾಮ್ ಜಿ ಯೋಜನೆ ರದ್ದುಗೊಳಿಸಲು ಆಗ್ರಹ