ಯಾರಿಗೂ ಬ್ಯಾಂಕ್ ಖಾತೆ ಮಾಹಿತಿ ಕೊಡಬೇಡಿ । ಸಂಶಯ ಬಂದರೆ 1930 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ । ಡಿಜಿಟಲ್ ಆರೆಸ್ಟ್ ಹೊಸ ಕ್ರೈಂ, ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಸಂವಾದ,
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರ್ಷದಲ್ಲಿ ಈವರೆಗೆ 31 ಪ್ರಕರಣಗಳು ದಾಖಲಾಗಿವೆ, ಜನರು ಸುಮಾರು ₹ 2.45 ಕೋಟಿ ಕಳೆದುಕೊಂಡಿದ್ದಾರೆ. ಈ ರೀತಿ ವಂಚನೆಗೆ ಒಳಗಾಗುತ್ತಿರುವವರ ಪೈಕಿ ವಿದ್ಯಾವಂತರೆ ಹೆಚ್ಚು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.
ಶುಕ್ರವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಅವರು ಸೈಬರ್ ಕ್ರೈಂ ಕುರಿತು ಮಾತನಾಡಿದರು. ಸೈಬರ್ ಕ್ರೈಂಗೆ ವೈಟ್ ಕಾಲರ್ ಕ್ರೈಂ ಎನ್ನುತ್ತಾರೆ. ಈ ದಂಧೆ ಮೊದಲು ಆರಂಭವಾಗಿದ್ದು 2010ರಲ್ಲಿ, ಇದಕ್ಕೆ ಕಡಿವಾಣ ಹಾಕಲು 2008ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂದಿತು. ಆದರೆ, ಆನ್ ಲೈನ್ ನಲ್ಲಿ ವಂಚನೆ ಮಾಡುವವರು ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯುತ್ತಿದ್ದಾರೆ ಎಂದರು.ಮೊದ ಮೊದಲು ಕೆಲಸ (ಜಾಬ್) ಕೊಡಿಸುತ್ತೇನೆಂದು ಹೇಳಿ ವಂಚಿಸಲು ಆರಂಭಿಸಿದರು. ನಂತರದಲ್ಲಿ ಪೋನ್ ಮಾಡಿ ನಿಮಗೆ ಲೋನ್ ಆಫರ್ ಬಂದಿದೆ. ಬ್ಯಾಂಕ್ ಹಾಗೂ ಆಧಾರ ಕಾರ್ಡ್ ಮಾಹಿತಿ ಕೊಡಿ ಎಂದು ವಂಚಿಸಲು ಆರಂಭಿಸಿ ದರು. ಇದೀಗ ಸ್ಟಾಕ್ ಎಕ್ಸ್ಚೇಂಜ್, ಡಿಜಿಟಲ್ ಆರೆಸ್ಟ್, ಆನ್‌ಲೈನ್ ಟ್ರೆಡಿಂಗ್ ವಂಚನೆ ಶುರುವಾಗಿದೆ ಎಂದ ಅವರು, ಈವರೆಗೆ ₹ 2.45 ಕೋಟಿ ವಂಚನೆ ಪೈಕಿ ₹10 ಲಕ್ಷ ಸೀಜ್ ಮಾಡಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಅಕೌಂಟ್ ನಂಬರ್, ಆಧಾರ್ ನಂಬರ್ ಕೇಳಿ ನಂತರ ಓಟಿಪಿ ಪಡೆದು ವಂಚಿಸುವವರ ಸಂಖ್ಯೆ ಕಡಿಮೆಯಾಗಿದೆ. ಕಾರಣ, ಈ ಬಗ್ಗೆ ಜನರು ಜಾಗೃತಗೊಂಡಿದ್ದರೆಂಬುದನ್ನು ಅರಿತು ವಂಚಕರು ಬೇರೆ ಮಾರ್ಗ ಕಂಡುಕೊಂಡಿದ್ದಾರೆ. ಡಿಜಿಟಲ್ ಆರೆಸ್ಟ್ ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಯೋರ್ವರು ಹಣ ಕಳೆದುಕೊಂಡಿದ್ದಾರೆ ಎಂದರು.
ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ಸೈಬರ್ ಕ್ರೈಂ ಠಾಣೆ ಇನ್ಸ್‌ಸ್ಪೆಕ್ಟರ್ ಗವಿರಾಜ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಕ್ಲಬ್‌ನ ಮಾಜಿ ಅಧ್ಯಕ್ಷ ಸುರೇಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ವಂದಿಸಿದರು.---- ಬಾಕ್ಸ್ ---ಸ್ಟಾಕ್ ಎಕ್ಸ್ ಚೇಂಜ್ - ಈ ದಂಧೆಯಲ್ಲಿ ವಂಚಕರು ಕಡಿಮೆ ಹಣ ಹೂಡುವಂತೆ ಮನವೊಲಿಸಿ ನಂತರ ಅವರ ಸ್ನೇಹ ಸಂಪಾದನೆ ಮಾಡಿ ಬಳಿಕ ಲಕ್ಷಾಂತರ ರು. ವಂಚಿಸುತ್ತಾರೆ. ಅಂದರೆ, ಯಾವುದೇ ಪ್ರಾಡೆಕ್ಟ್ ಮೇಲೆ ಹಣ ಹೂಡಿದರೆ ಇಂತಿಷ್ಟು ಲಾಭ ಬರುತ್ತದೆ ಎಂಬ ಆಸೆ ಹುಟ್ಟಿಸುತ್ತಾರೆ.
ನಾವೇನು ಮಾಡಬೇಕು:
ಪೋಟೋ ಫೈಲ್ ನೇಮ್ 21 ಕೆಸಿಕೆಎಂ 4ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಎಸ್ಪಿ ಡಾ. ವಿಕ್ರಂ ಅಮಟೆ ಅವರು ಮಾತನಾಡಿದರು. ಎಎಸ್ಪಿ ಕೃಷ್ಣಮೂರ್ತಿ, ಸೈಬರ್ ಕ್ರೈಂ ಇನ್ಸ್‌ಸ್ಪೆಕ್ಟರ್ ಗವಿರಾಜ್, ಕ್ಲಬ್ ಅಧ್ಯಕ್ಷ ಪಿ. ರಾಜೇಶ್, ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ಇದ್ದರು.