ಮುಂಬೈನಿಂದ ಊಟಿಯವರೆಗೆ ಸೈಕಲ್ ಪ್ರವಾಸ

KannadaprabhaNewsNetwork |  
Published : Jan 10, 2026, 03:15 AM IST
೮ ಇಳಕಲ್ಲ ೩ | Kannada Prabha

ಸಾರಾಂಶ

ವಾಹನ ಚಾಲಕರು ಸುರಕ್ಷಿತವಾಗಿ ಸಂಚರಿಸಬೇಕು ಹಾಗೂ ವಾಯು ಮಾಲಿನ್ಯ ತಡೆಗೆ ಸೈಕಲ್ ಸವಾರಿಗೆ ಮಹತ್ವ ನೀಡಬೇಕು ಎಂಬ ಸಂದೇಶ ಸಾರುತ್ತ ಮಹಾರಾಷ್ಟ್ರ ಕಲ್ಯಾಣ-ಮುಂಬೈದಿಂದ ತಮಿಳುನಾಡಿನ ಊಟಿಯವರೆಗೆ ಸೈಕಲ್ ಮೇಲೆ ಪ್ರವಾಸ ಪ್ರವಾಸ ಕೈಗೊಂಡಿದ್ದಾರೆ.

ಇಳಕಲ್ಲ: ವಾಹನ ಚಾಲಕರು ಸುರಕ್ಷಿತವಾಗಿ ಸಂಚರಿಸಬೇಕು ಹಾಗೂ ವಾಯು ಮಾಲಿನ್ಯ ತಡೆಗೆ ಸೈಕಲ್ ಸವಾರಿಗೆ ಮಹತ್ವ ನೀಡಬೇಕು ಎಂಬ ಸಂದೇಶ ಸಾರುತ್ತ ಮಹಾರಾಷ್ಟ್ರ ಕಲ್ಯಾಣ-ಮುಂಬೈದಿಂದ ತಮಿಳನಾಡಿನ ಊಟಿಯವರೆಗೆ ಸೈಕಲ್ ಮೇಲೆ ಪ್ರವಾಸ ಪ್ರವಾಸ ಕೈಗೊಂಡಿದ್ದಾರೆ. ನಗರದ ವಾಯು ವಿಹಾರ ಬಳಗದವರು ಬೆಳಗ್ಗೆ ವಾಯುವಿಹಾತಕ್ಕೆ ಹೋಗಿದ್ದಾಗ ಮಹಾರಾಷ್ಟ್ರದ ಈ ಪ್ರವಾಸಿಗರು ಎದುರಾದರು. ಕುತೂಹಲದಿಂದ ಅವರನ್ನು ವಿಚಾರಿಸಿದಾಗ ತಮ್ಮ ಪ್ರವಾಸದ ಉದ್ದೇಶ ತಿಳಿಸಿದರು. ಮುಂಬೈ ಬೈಕ್ ಸ್ಪೋರ್ಟ್ ಕ್ಲಬ್‌ನವರು ಇಂತಹ ಪ್ರವಾಸಗಳನ್ನು ಪ್ರತಿ ವರ್ಷ ಏರ್ಪಡಿಸುತ್ತಿದ್ದು, ಈ ವರ್ಷ ಕಲ್ಯಾಣ-ಮುಂಬೈದಿಂದ ಊಟಿಯವರೆಗೆ ೧೫ ಜನರಿಗೆ ಇಂತಹ ಅವಕಾಶ ಒದಗಿಸಿದೆ. ಪ್ರತಿದಿನ ೨೦೦ಕೀ.ಮೀ ಸೈಕಲ್ ಮೇಲೆ ಸಂಚರಿಸುತ್ತಿದ್ದು, ನಮ್ಮ ಮುಂದಿನ ವಸತಿ ಚಿತ್ರದುರ್ಗದಲ್ಲಿ ಮಾಡುವುದಾಗಿ ತಿಳಿಸಿದರು.ವಾಯು ವಿಹಾರ ಬಳಗದ ಹಿರಿಯರಾದ ಶರಣಪ್ಪಣ್ಣ ಅಕ್ಕಿ, ಸಿ.ಸಿ. ಚಂದ್ರಾಪಟ್ಟಣ ಸೇರಿದಂತೆ ಇತರರು ಅವರಿಗೆ ಶುಭಕೋರಿ ಬೀಳ್ಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ನಗರದಲ್ಲಿ ವಿಮಾನ ಹಾರಾಟ ಆತಂಕ!
ಕುಂದಾಪುರ- ಎಂಸಿಎನ್‌ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್