ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆಯುವ ಈ ಸೈಕ್ಲಥಾನ್ ಸ್ಪರ್ಧೆಯಲ್ಲಿ ನಾಲ್ಕು ವಿವಿಧ ವಿಭಾಗಗಳಲ್ಲಿ ಚಟುವಟಿಕೆಗಳು ನಡೆಯಲಿದೆ. 100 ಕಿ.ಮೀ ದಾ ರೇಸ್, 50 ಕಿ.ಮೀ ದಾ ರೈಡ್, 20 ಕಿ.ಮೀ- ಫ್ಯಾಮಿಲಿ ರೈಡ್, 1 ಕಿ.ಮೀ- ಮಕ್ಕಳ ಫನ್ ರೇಸ್ ನಂಥಹ 4 ವಿಭಾಗಗಳಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಯುವ ಸಮುದಾಯದಗಳ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವ ಸಲುವಾಗಿ ಅ.4 ರಂದು ಮೈಸೂರಿನಲ್ಲಿ ವಿಶ್ವ ದರ್ಜೆಯ ಇಂಡಿಯನ್ ಪ್ರೀಮಿಯರ್ ಇವೆಂಟ್ ಲೆಟೇಪ್ ಸೈಕ್ಲಥಾನ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸೈಕ್ಲಥಾನ್ ಸ್ಪರ್ಧೆ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಟೂರ್ ದಿ ಫ್ರಾನ್ಸ್ ಸ್ಪರ್ಧೆಯಿಂದ ಪ್ರೇರೇಪಿತಗೊಂಡು ಸೈಕ್ಲಥಾನ್ ಅನ್ನು ಆಯೋಜಿಸಲಾಗಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆಯುವ ಈ ಸೈಕ್ಲಥಾನ್ ಸ್ಪರ್ಧೆಯಲ್ಲಿ ನಾಲ್ಕು ವಿವಿಧ ವಿಭಾಗಗಳಲ್ಲಿ ಚಟುವಟಿಕೆಗಳು ನಡೆಯಲಿದೆ. 100 ಕಿ.ಮೀ ದಾ ರೇಸ್, 50 ಕಿ.ಮೀ ದಾ ರೈಡ್, 20 ಕಿ.ಮೀ- ಫ್ಯಾಮಿಲಿ ರೈಡ್, 1 ಕಿ.ಮೀ- ಮಕ್ಕಳ ಫನ್ ರೇಸ್ ನಂಥಹ 4 ವಿಭಾಗಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ದಸರಾ ಸಂದರ್ಭ ಮೈಸೂರಿನಲ್ಲಿ ವಿಶ್ವದರ್ಜೆಯ ಸೈಕ್ಲಥಾನ್ ಸ್ಪರ್ಧೆ ನಡೆಸುತ್ತಿದ್ದು, ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಸುರಕ್ಷಿತ ಕ್ರಮಗಳನ್ನು ಗಮನಿಸಿ ಅಚ್ಚುಕಟ್ಟಾಗಿ ಸೈಕ್ಲಥಾನ್ ಸ್ಪರ್ಧೆಯನ್ನು ನಡೆಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಸಂಚಾರ ವ್ಯವಸ್ಥೆಗಳಲ್ಲಿ ಅಡ್ಡಿ ಆಗದಂತೆ ಹಾಗೂ ಆರೋಗ್ಯ ಸುರಕ್ಷತೆಗಳನ್ನು ಗಮನಿಸಿ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು.
ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪ ವಿಭಾಗಾಧಿಕಾರಿ ಕೆ. ಆಶಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಮೊದಲಾದವರು ಇದ್ದರು.
ಕನ್ನಡಪ್ರಭ ವಾರ್ತೆ ಮೈಸೂರುರೋಟರಿ ಸೆಂಟ್ರಲ್ ವತಿಯಿಂದ ಹೆಬ್ಬಾಳಿನ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಐವರಿಗೆ ‘ನ್ಯಾಷನ್ ಬಿಲ್ಡರ್ ಅವಾರ್ಡ್’ ಪ್ರದಾನ ಮಾಡಲಾಯಿತು.
ಕೆ.ಆರ್.ಆಸ್ಪತ್ರೆ ಅನಾಟಮಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಟಿ. ಚಂದ್ರಶೇಖರ್, ಮೈವಿವಿ ಮಾಜಿ ಪರೀಕ್ಷಾಂಗ ಕುಲಸಚಿವ, ಮಾನಸ ಗಂಗೋತ್ರಿ ವಾಣಿಜ್ಯ ಶಾಸ್ತ್ರ ಹಿರಿಯ ಪ್ರಾಧ್ಯಾಪಕ ಡಾ.ಎನ್. ನಾಗರಾಜ, ಖ್ಯಾತ ಖೋ ಖೋ ತರಬೇತುದಾರರಾದ ಕುರುಬೂರು ವಿದ್ಯಾದರ್ಶಿನಿ ಕಾನ್ವೆಂಟ್ ಗಣಿತ ಶಿಕ್ಷಕ ಕೆ. ಮಂಜುನಾಥ್, ಚಿನಕುರಳಿ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ನಾಯ್ಡು ಹಾಗೂ ನಂಜನಗೂಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್. ದಿನೇಶ್ ಅವರು ಪ್ರಶಸ್ತಿ ಪುರಸ್ಕೃತರು.ರೋಟರಿ ಸೆಂಟ್ರಲ್ ಅಧ್ಯಕ್ಷ ವಿಜಯೇಂದ್ರ ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಗೌರವ ಕಾರ್ಯದರ್ಶಿ ಎನ್, ಸಚ್ಚಿದಾನಂದಮೂರ್ತಿ, ವೃತ್ತಪರ ಸೇವಾ ನಿರ್ದೇಶಕ ಕಿಶೋರ್ ಕುಮಾರ್ ಇದ್ದರು. ಆಂಥೋಣಿ ಮೊಸಸ್ ಕಾರ್ಯಕ್ರಮ ನಿರೂಪಿಸಿದರು.
ಸೇವಾ ಕಾರ್ಯಕ್ರಮದ ಅಂಗವಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ರೂಪಾ ಅವರಿಗೆ ಹೊಲಿಗೆ ಯಂತ್ರ ನೀಡಲಾಯಿತು. ಮಾನಸ ಎಂಬವರ ಕಾಲಿನ ಶಸ್ತ್ರಚಿಕಿತ್ಸೆಗೆ 1 ಲಕ್ಷ ರು. ನೆರವು ನೀಡಲಾಯಿತು. ಸೌಜನ್ಯಾ ಅತ್ತಾವರ್, ಡಿ. ಅಶೋಕ್, ಸುಧೀರ್ ಆಚಾರ್ಯ ಅವರು ಸೇವಾ ಕಾರ್ಯಕ್ರಮ ಸಂಯೋಜಿಸಿದ್ದರು. ಅನಿಲ್ ಪದಕಿ, ವಿ. ಪ್ರೇಮಸಾಗರ್, ಭಾಸ್ಕರ್ ಶೆಟ್ಟಿ, ಎಂ.ಎಸ್. ವಿನೋದ್, ಪ್ರಸನ್ನಕುಮಾರ್ ಮಯ್ಯ, ಅಂಜಲಿ ಸಮರ್ಥ್, ವಿಜಯ್ ಸ್ವರೂಪ, ನಂದಿನಿ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.