ಸಿಲೆಂಡರ್‌ ಸ್ಫೋಟ: ಮನೆ ಸಂಪೂರ್ಣ ಭಸ್ಮ

KannadaprabhaNewsNetwork |  
Published : Apr 27, 2025, 01:32 AM IST
ಯಾದಗಿರಿಯ ದುರ್ಗಾ ನಗರದಲ್ಲಿ ಶನಿವಾರ ಅಡುಗೆ ಅನಿಲ ಸ್ಫೋಟಗೊಂಡು ಮನೆಯೊಂದ ಸಂಪೂರ್ಣ ಸುಟ್ಟು, ಅಲ್ಲಿನನೇಕ ವಸ್ತಗಳು, ನಗದು ಹಣ, ಚಿನ್ನಾಭರಣಗಳು ಭಸ್ಮವಾಗಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಗಿರೀಶ್‌ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

Cylinder explosion: House completely burnt down

ಯಾದಗಿರಿಯ ದುರ್ಗಾ ನಗರದಲ್ಲಿ ಅಡುಗೆ ಅನಿಲ ಸ್ಫೋಟ

--

ಕನ್ನಡಪ್ರಭ ವಾರ್ತೆ ಯಾದಗಿರಿ

ಅಡುಗೆ ಅನಿಲ ಸ್ಫೋಟಗೊಂಡ ಪರಿಣಾಮ ಅಗ್ನಿ ಅವಘಡ ಸಂಭವಿಸಿ, ಮನೆಯೊಂದರಲ್ಲಿದ್ದ ಸಂಪೂರ್ಣ ನಗದು ಹಣ, ಚಿನ್ನಾಭರಣಗಳು ಮತ್ತು ಅಪಾರ ಪ್ರಮಾಣದ ದವಸ ಧಾನ್ಯಗಳು, ಗೃಹಪಯೋಗಿ ಸಾಮಾನುಗಳು ಭಸ್ಮವಾದ ದುರ್ಘಟನೆ ದುರ್ಗಾ ನಗರದಲ್ಲಿ ಶನಿವಾರ ನಡೆದಿದೆ. ಅದೃಷ್ಟವಷಾತ್‌, ಈ ದುರ್ಘಟನೆಯಲ್ಲಿ ಯಾವುದೇ ಜೀವಹಾನಿ ಆಗಿಲ್ಲ.

ಮಲ್ಲಯ್ಯ ಪೂಜಾರಿ ಎಂಬುವವರಿಗೆ ಸೇರಿದ ಈ ಮನೆಯಲ್ಲಿ ದುರ್ಘಟನೆ ಸಂಭವಿಸಿದೆ. ಈ ವೇಳೆ, ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಜೀವಹಾನಿ ತಪ್ಪಿದಂತಾಗಿದೆ. ಧಗಧಗನೇ ಬೆಂಕಿಯಿಂದ ಟಿನ್‌ ಶೆಡ್‌ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಹೊಸ ಮನೆ ವಾಸ್ತುಶಾಂತಿಗಾಗಿ ತಳಮನೆಯಲ್ಲಿ ಅಡುಗೆ ಮಾಡುವುದಕ್ಕಾಗಿ ಆಡುಗೆಗಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿರುವಾಗ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ‌ ಗಿರೀಶ್ ಭೇಟಿ‌ ನೀಡಿ ಪರಿಶೀಲನೆ ಮಾಡದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ.

ಹೊಸ ಮನೆ ಕಟ್ಟುತ್ತಿದ್ದರಿಂದ ಟಿನ್ ಶೆಡ್ ನಲ್ಲಿ ಮಲ್ಲಯ್ಯ ಕುಟುಂಬ ವಾಸವಿತ್ತು. ಮನೆ ಕಟ್ಟಲು ಏಳು ಲಕ್ಷ ರು.ಗಳ ಹಣ ಹೊಂದಿಸಿಟ್ಟಿದ್ದ ಮಲ್ಲಯ್ಯ ಪೂಜಾರಿ ಅವರ 7ಲಕ್ಷ ರು.ಗಳ ಹಣ, 100 ಗ್ರಾಂ ಚಿನ್ನ, ಬೆಳ್ಳಿ ಎಲ್ಲವೂ ಸುಟ್ಟು ಕರಕಲಾಗಿದೆ ಎನ್ನಲಾಗಿದೆ. ಸ್ಥಳೀಯರ‌ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಅಪಾರ ಪ್ರಮಾಣದ ಹಾನಿಯಿಂದ ಕುಟುಂಬಸ್ಥರು ಕಣ್ಣೀರ ಕಟ್ಟೆಯೊಡೆದಿತ್ತು.

-

26ವೈಡಿಆರ್‌8 : ಯಾದಗಿರಿಯ ದುರ್ಗಾ ನಗರದಲ್ಲಿ ಶನಿವಾರ ಅಡುಗೆ ಅನಿಲ ಸ್ಫೋಟಗೊಂಡು ಮನೆಯೊಂದ ಸಂಪೂರ್ಣ ಸುಟ್ಟು, ಅಲ್ಲಿನನೇಕ ವಸ್ತಗಳು, ನಗದು ಹಣ, ಚಿನ್ನಾಭರಣಗಳು ಭಸ್ಮವಾಗಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಗಿರೀಶ್‌ ಭೇಟಿ ನೀಡಿ ಪರಿಶೀಲಿಸಿದರು.

---000---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ