ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಚ್ಚೇಗೌಡರ ಸಭಾ ಭವನದಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ವೆಂಕಟೇಶ್ ಮಾತನಾಡಿ, ಆಧುನಿಕತೆಯ ದೃಶಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಅವಕೃಪೆಯಿಂದ ಯುವ ಸಮುದಾಯ ಕಲೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಗ್ರಾಮೀಣ ಭಾಗದಲ್ಲಿ ಕಲೆಗೆ ಸಿಗಬೇಕಾದ ಮನ್ನಣೆ ಯುವ ಸಮುದಾಯದಿಂದ ಸಿಗುವಂತಾಗಬೇಕು ಎಂದರು.ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಬೇಕು, ಸಂಘ ಸಂಸ್ಥೆಗಳು ಸಹ ಕಲೆಯನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಕಾನೂನು ಸೇಚಾ ಪ್ರಾಧಿಕಾರದ ಸದಸ್ಯರಾದ ಎಂ.ಪ್ರಶಾಂತ್ ಮಾತನಾಡಿ, ಕಲೆಯನ್ನೇ ನಂಬಿಕೊಂಡಿರುವ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರಿಯಾದ ಪ್ರೋತ್ಸಾಹ, ಸಹಕಾರ ಸಿಗದೆ ಯುವ ಪೀಳಿಗೆ ಕಲಾಕ್ಷೇತ್ರದತ್ತ ಚಿತ್ತ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಶಾ ಮತ್ತು ತಂಡದಿಂದ ಭರತನಾಟ್ಯ, ಸಮರ್ಥ ಮತ್ತು ತಂಡದಿಂದ ಜಾನಪದ ನೃತ್ಯ, ಅರುಣ್ ಕುಮಾರ್ ತಂಡದಿಂದ ಜಾನಪದ ಗೀತೆ, ಮುನಿಕೃಷ್ಣ ತಂಡದಿಂದ ಸುಗಮ ಸಂಗೀತ, ತನುಶ್ರೀ ತಂಡದಿಂದ ಭರತನಾಟ್ಯ, ಚಿನ್ಮಿತ ತಂಡದಿಂದ ಸಮೂಹ ನೃತ್ಯ, ಸಂತೋಷ ತಂಡದಿಂದ ಜನಪದ ಗೀತೆ, ಸ್ಟುಡಿಯೋ ಆನಂದ್ ತಂಡದಿಂದ ರಂಗಗೀತೆಗಳ ಕಾರ್ಯಕ್ರಮ ನಡೆಯಿತು.
ರಂಗ ಕಲಾವಿದ ಡಿ.ಲಕ್ಷ್ಮೀನಾರಾಯಣ, ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್, ನಿರ್ದೇಶಕ ಸೈಯದ್ ಮೆಹಬೂಬ್, ತರಬಹಳ್ಳಿ ಹರೀಶ್, ಅತ್ತಿಬೆಲೆ ಮಂಜುನಾಥ್, ನಯಾಜ್ ಖಾನ್, ಜಿಯಾವುಲ್ಲಾ, ಕಲಾವಿದೆ ತನುಶ್ರೀ, ವಸತಿ ಶಾಲೆಯ ಶಿಕ್ಷಕರಾದ ರುತ್ ಜೆಸೆಂತಾ, ರಕ್ಷಿತಾ, ಗಂಗಾಧರ್ ಇತರರು ಇದ್ದರು.