ವಸಂತ್ ಮಾಧವ್‌ಗೆ ದಾದಾ ಸಾಹೇಬ್ ಫಾಲ್ಕೆ ಅಚೀವರ್ಸ್ ಅವಾರ್ಡ್

KannadaprabhaNewsNetwork |  
Published : Oct 02, 2024, 01:18 AM ISTUpdated : Oct 02, 2024, 01:19 AM IST
1ಎಚ್ಎಸ್ಎನ್18 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯ ವಸಂತ್‌ ಮಾದವ್‌. | Kannada Prabha

ಸಾರಾಂಶ

ತನಗೆ ದಾದಾ ಸಾಹೇಬ್ ಫಾಲ್ಕೆ ಅಚೀವರ್ಸ್‌ ಅವಾರ್ಡ್ ಪ್ರಶಸ್ತಿ ಸಿಕ್ಕಿದ್ದು ಮೊದಲು ನಮ್ಮ ದಾದಾ ಸಾಹೇಬ್ ಫಾಲ್ಕೆ ಸಮಿತಿಯವರಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಹಾಗೂ ನಾನು ಸಲಹೆ ಮತ್ತು ಚಿಕಿತ್ಸೆ ನೀಡಿರುವ ಎಲ್ಲಾ ರೋಗಿಗಳಿಗೆ ಅಭಿನಂದನೆ ಎಂದು ಪ್ರಶಸ್ತಿ ಪಡೆದ ವಸಂತ್ ಮಾಧವ್ ತಿಳಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದ ಅಮೋಘ ಸಾಧನೆಗೆ ಪ್ರಶಸ್ತಿಕನ್ನಡಪ್ರಭ ವಾರ್ತೆ ಹಾಸನ

ತನಗೆ ದಾದಾ ಸಾಹೇಬ್ ಫಾಲ್ಕೆ ಅಚೀವರ್ಸ್‌ ಅವಾರ್ಡ್ ಪ್ರಶಸ್ತಿ ಸಿಕ್ಕಿದ್ದು ಮೊದಲು ನಮ್ಮ ದಾದಾ ಸಾಹೇಬ್ ಫಾಲ್ಕೆ ಸಮಿತಿಯವರಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಹಾಗೂ ನಾನು ಸಲಹೆ ಮತ್ತು ಚಿಕಿತ್ಸೆ ನೀಡಿರುವ ಎಲ್ಲಾ ರೋಗಿಗಳಿಗೆ ಅಭಿನಂದನೆಗಳನ್ನು ತಿಳಿಸಿ ಕೃತಜ್ಞನಾಗಿರುತ್ತೇನೆ ಎಂದು ಪ್ರಶಸ್ತಿ ಪಡೆದ ವಸಂತ್ ಮಾಧವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ದಾದಾ ಸಾಹೇಬ್ ಫಾಲ್ಕೆ ಅಚೀವರ್ಸ್‌ ಅವಾರ್ಡ್‌ ನಮ್ಮ ದೇಶದಲ್ಲಿ ಅತ್ಯುನ್ನತವಾದ ಪ್ರಶಸ್ತಿ. ಇಲ್ಲಿಯವರೆಗೂ ಇದನ್ನು ಕಲೆ, ಚಿತ್ರರಂಗ ಹಾಗೂ ಸಾಹಿತ್ಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಲಭ್ಯವಿರುತ್ತಿತ್ತು. ಈ ಸಾಲಿನಿಂದ ಅಂದರೆ ೨೦೨೪ನೇ ಸಾಲಿನಿಂದ ಬೇರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಕೊಡಲಾಗುತ್ತಿದೆ. ಹಾಗೆಯೇ ನನಗೆ ವೈದ್ಯಕೀಯ ಕ್ಷೇತ್ರದ ಸಾಧನೆಗೆ ನನಗೆ ಈ ಪ್ರಶಸ್ತಿ ಲಭಿಸಿದೆ. ಈ ಸಾಧನೆ ನನ್ನೊಬ್ಬನದಲ್ಲ. ಇದು ಮುಖ್ಯವಾಗಿ ನನ್ನ ಈ ಮಟ್ಟಕ್ಕೆ ತಂದಿರುವ ನನ್ನ ತಂದೆ ತಾಯಿಗೆ ಹಾಗೂ ನನ್ನ ಸ್ನೇಹಿತರಿಗೆ ಸಲ್ಲಬೇಕು ಎಂದರು.

ತಂದೆತಾಯಿಗಳ ಬಲವಂತದಿಂದ ವೈದ್ಯ ವೃತ್ತಿಗೆ ಬಂದವನು. ನನ್ನ ವಿದ್ಯಾಭ್ಯಾಸ ಮುಗಿಸಿದ ನಂತರ ಮೊಟ್ಟಮೊದಲು ಆರ್ಥೋಪೆಡಿಕ್ ಸರ್ಜನ್ (ಕೀಲು, ಮೂಳೆ ತಜ್ಞರಾಗಿ) ೧೯೯೮ನೇ ಸಾಲಿನಲ್ಲಿ ಮಂಗಳೂರಿನಲ್ಲಿ ಕೆಲಸ ಶುರು ಮಾಡಿದೆ. ತದ ನಂತರ ೨೦೦೦-೦೧ರಿಂದ ಹಾಸನದಲ್ಲಿ ನಮ್ಮ ಸ್ವಂತ ಜನತಾ ಆಸ್ಪತ್ರೆಯಲ್ಲಿ ೨೦೧೬ರ ವರೆಗೂ ಕಾರ್ಯ ನಿರ್ವಹಿಸಿರುತ್ತೇನೆ. ನಂತರ ೨೦೦೪ನೇ ಸಾಲಿನಲ್ಲಿ ನನಗೆ ಚಿತ್ರರಂಗದಿಂದ ಅವಕಾಶ ಬರಲು ಶುರುವಾಯಿತು. ನಾನು ಆಕರ್ಷಿತನಾದೆ. ಹಾಗೆಯೇ (ಕೀಲು, ಮೂಳೆ ತಜ್ಞ) ನನ್ನ ವೃತ್ತಿಯನ್ನು ೨೦೦೫ ರಿಂದ ೨೦೦೬ರಿಂದ ಮೂರು ವಿಭಿನ್ನ ಅಪೋಲೋ ಸಂಕೀರ್ಣಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಆದರೂ ವೃತ್ತಿ ಬಿಡದೆ ಆಗಾಗ್ಗೆ ಅಪೊಲೋ ಆಸ್ಪತ್ರೆಯ ರೋಗಿಗಳಿಗೆ ಅಚ್ಚುಮೆಚ್ಚಾದೆ. ಇಂದು ೨೦೨೪ (೨೬ ವರ್ಷದಿಂದ) ಅಪೋಲೋ ಸಂಕೀರ್ಣ, ಎಚ್.ಎಸ್.ಆರ್. ಲೇಔಟ್, ಕೋರಮಂಗಲ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ೨೦೧೮ ರಲ್ಲಿ ಗ್ರೀಸ್ ವರ್ಲ್ಡ್, ಜರ್ಮನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಾಸ್ಕೆಟಾಲಜಿಯಲ್ಲಿ (ಚರ್ಮ ಮತ್ತು ಕೂದಲು) ತರಬೇತಿ ಪಡೆದೆ. ಹಾಸನ ಮತ್ತು ಬೆಂಗಳೂರು ಎರಡು ಜಾಗದಲ್ಲಿ ತನ್ನದೇ ಆದ (ಷೇರು ಜೋಡಣೆಯಲ್ಲಿ) ಹಾಸನದಲ್ಲಿ ಒಂದು ಬೆಂಗಳೂರಿನಲ್ಲಿ ಎರಡು ಸಂಕೀರ್ಣವನ್ನು ಪ್ರಾರಂಭಿಸಿದೆ ಎಂದು ತಮ್ಮ ಜೀವನದ ಬಗ್ಗೆ ಹೇಳಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಹುಡಾ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ಕ್ಯಾನ್ಸರ್‌ ತಜ್ಞ ಡಾ. ಜಗದೀಶ್, ಹಿರಿಯ ಪತ್ರಕರ್ತ ವೆಂಕಟೇಶ್, ಜಾವೇದ್, ನಿರಂಜನ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!