ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಅವಧೂತ ದತ್ತಪೀಠದ ನಾದ ಮಂಟಪದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಕ್ಕಳೊಂದಿಗೆ ಮಕ್ಕಳಾಗಿ ಯೋಗಾಸನ ಮಾಡಿದ ನಂತರ ಮಾತನಾಡಿದ ಅವರು, ಪ್ರತಿನಿತ್ಯ ಯೋಗ ಮಾಡಿ, ಕನಿಷ್ಠ 40 ನಿಮಿಷ ಧ್ಯಾನ ಮಾಡಿ. ಅದರಿಂದ ಆಗುವ ಅನುಭವ ಅದ್ಭುತ. ಅಂತಹ ಸಮಯವನ್ನು ಮಿಸ್ ಮಾಡದೆ ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
40 ನಿಮಿಷ ಕಣ್ಣು ಮುಚ್ಚಿ ಉಸಿರನ್ನು ಒಂದೇ ತರ ಸಮತುಷ್ಟಿಯಲ್ಲಿ ತೆಗೆದುಕೊಳ್ಳಬೇಕು, ಮುಖದಲ್ಲಿ ನಗು ಇರಬೇಕು, ಕೋಪ, ಹಸಿವು ತೋರಬಾರದು. ಬೇರೆ ಯಾವುದೇ ಯೋಚನೆಯನ್ನು ಮಾಡಬಾರದು. ಯಾವ ಕೆಟ್ಟ ಶಬ್ದವನ್ನಾಗಲಿ ಅಥವಾ ಹಾಡು, ಮಾತುಗಳನ್ನು ಆಲಿಸದೆ ತದೇಕಚಿತ್ತರಾಗಿ ಧ್ಯಾನ ಮಾಡಬೇಕು ಎಂದರು.ಯೋಗ ಮಾಡುವುದರಿಂದ ದೇಹ ಸದೃಢವಾಗುತ್ತದೆ, ಮನಸು ತಿಳಿಯಾಗಿರುತ್ತದೆ. ದೇಹ ರಬ್ಬರ್ ನಂತೆ ಹೇಗೆ ಬೇಕಾದರೂ ಬೆಂಡ್ ಮಾಡಬಹುದು. ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಯೋಗ ಧ್ಯಾನದ ಜೊತೆಗೆ ಹಠಯೋಗ ಕೂಡ ಮಾಡಬೇಕು. ನಮ್ಮ ಆಶ್ರಮದ ಮಕ್ಕಳು ಹೀಗೆ ಹಠಯೋಗ ಮಾಡಿ ಸದೃಢರಾಗಿದ್ದಾರೆ. ಹೇಗೆ ಬೇಕಾದರೂ ದೇಹ ಬೆಂಡ್ ಮಾಡುತ್ತಾರೆ ಎಂದು ಅವರು ಶ್ಲಾಘಿಸಿದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗದಿನದ ಸಂಭ್ರಮ
ಮೊದಲಿಗೆ ಶಾಲೆಯ ವಿದ್ಯಾರ್ಥಿಗಳಿಂದ ಅನಾವರಣಗೊಂಡ ಯೋಗವ್ಯೂಹ ರಚನಾ ಪ್ರದರ್ಶನವನ್ನು ಕಣ್ತುಂಬಿಕೊಂಡ ಪೋಷಕರು ಹಾಗೂ ಗಣ್ಯರು ಮೆಚ್ಚುಗೆಯಿಂದ ತಲೆದೂಗಿದರು.ತದನಂತರ ದೀಪ ಪ್ರಜ್ವಲನೆ ಹಾಗೂ ಶಾಲಾ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವರ್ಷದ ಧ್ಯೇಯ ವಾಕ್ಯವಾದ ಮಹಿಳಾ ಸಬಲೀಕರಣ ಎಂಬ ಪರಿಕಲ್ಪನೆಯ ಆಶಯದಂತೆ, ವಿದ್ಯಾರ್ಥಿಗಳೊಂದಿಗೆ ಮಹಿಳಾ ಪೋಷಕರು ಕೂಡಾ ಯೋಗ ಮಾಡುವ ಮೂಲಕ ಉತ್ಸಾಹದಿಂದ ಯೋಗ ದಿನದ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.