ಬೋನಸ್ ಪಡೆದರೆ ಮಾತ್ರ ಡೇರಿ, ರೈತರು ಅಭಿವೃದ್ಧಿ ಸಾಧ್ಯ: ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork |  
Published : Dec 13, 2025, 02:00 AM IST
12ಕೆಎಂಎನ್ ಡಿ22 | Kannada Prabha

ಸಾರಾಂಶ

ಜನರು ಹೈನುಗಾರಿಕೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬೋನಸ್ ಪಡೆದರೆ ಮಾತ್ರ ರೈತರು ಹಾಗೂ ಆಡಳಿತ ಮಂಡಳಿ ನಡುವೆ ವ್ಯವಹಾರ ಉತ್ತಮವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರೈತರು ಹೆಚ್ಚಿನ ಮಟ್ಟದಲ್ಲಿ ಬೋನಸ್ ಪಡೆದರೆ ಮಾತ್ರ ಸಂಘದ ಜತೆಗೆ ರೈತರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಹೊಸಸಾಯಪನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಡೇರಿಗಳು ರೈತರ ಆರ್ಥಿಕ ಮೂಲವಾಗಿ ಕೆಲಸ ಮಾಡುತ್ತಿವೆ. ಜನರ ಕುಟುಂಬ ನಿರ್ವಹಣೆ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಹೈನುಗಾರಿಕೆ ನೆರವಾಗುತ್ತಿದೆ ಎಂದರು.

ಜನರು ಹೈನುಗಾರಿಕೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬೋನಸ್ ಪಡೆದರೆ ಮಾತ್ರ ರೈತರು ಹಾಗೂ ಆಡಳಿತ ಮಂಡಳಿ ನಡುವೆ ವ್ಯವಹಾರ ಉತ್ತಮವಾಗಿರುತ್ತದೆ ಎಂದರು.

ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ರಾಜ್ಯ ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಮನ್ಮುಲ್ ಒಕ್ಕೂಟ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ನಿತ್ಯ 13 ಲಕ್ಷಕ್ಕೂ ಅಧಿಕ ಹಾಲು ಉತ್ಪಾದನೆ ಮಾಡುತ್ತಿದೆ ಎಂದರು.

ತಾಲೂಕಿನಲ್ಲಿ 148 ಡೇರಿಗಳ ಪೈಕಿ ಕೆಲವು ಸಂಘಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಕೆಲವು ಸಂಘಕ್ಕೆ ಸ್ವಂತ ನಿವೇಶನವೇ ಇಲ್ಲ. ಹಾಗಾಗಿ ನಿವೇಶನ ರಹಿತ ಸಂಘಗಳು ನಿವೇಶನ ಖರೀದಿಸಿದರೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಧರ್ಮಸ್ಥಳ ಸಂಘದಿಂದಲೂ ಸಹ ನಿರ್ಮಾಣವಾಗಿರುವ ಡೇರಿಕಟ್ಟಡಕ್ಕೆ 1.26 ಕೋಟಿ ಸಹಾಯಧನ ನೀಡಲಾಗಿದೆ ಎಂದರು.

ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಡೇರಿ ಅಧ್ಯಕ್ಷೆ ದೀಪರಾಜೇಶ್, ಉಪಾಧ್ಯಕ್ಷೆ ಗೌರಮ್ಮ, ನಿರ್ದೇಶಕರಾದ ಪವಿತ್ರ, ಸುಮ, ಶೈಲಜಾ, ಎನ್.ಎಸ್.ರಾಧ, ಸುಜಾತ, ಭವ್ಯ, ಸರಸ್ವತಿ, ರಾಧ, ಕಾರ್ಯದರ್ಶಿ ವಸಂತಲಕ್ಷ್ಮೀಬೋರೇಗೌಡ, ಸಿಬ್ಬಂದಿ ಧನಲಕ್ಷ್ಮಿ, ವಿದ್ಯಾಶ್ರೀ, ಕಾರ್ಯದರ್ಶಿ ಸಂಘದ ಅಧ್ಯಕ್ಷ ಡಿಂಕಾಶಿವಪ್ಪ, ಧರ್ಮಸ್ಥಳ ಯೋಜನಾಧಿಕಾರಿ ಯಶ್ವಂತ್, ಮಾರ್ಗ ವಿಸ್ತರ್ಣಾಧಿಕಾರಿ ಉಷ, ಪ್ರಜ್ವಲ್, ಗ್ರಾಪಂ ಸದಸ್ಯ ಸಿ.ಚಂದ್ರು, ಮಾಜಿ ಸದಸ್ಯ ಮಹದೇವು, ಅಂಬುಜ, ವೆಂಕಟೇಶ್, ಧರಣಿ, ಸೋಮೇಗೌಡ, ತಿಮ್ಮೇಗೌಡ, ಶಿವೇಗೌಡ, ಮಂಚೇಗೌಡ, ಮಧುಕುಮಾರ್, ಪುಟ್ಟೇಗೌಡ, ಪರಿಶುರಾಮ್, ಸೋಮೇಗೌಡ,ನಾರಾಯಣ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ