ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣಾ ಪ್ರಕ್ರಿಯೆಯಲ್ಲಿ ರಿಟರ್ನಿಂಗ್ ಅಧಿಕಾರಿ ಪಾರ್ವತಮ್ಮ ಗೊಂದಲ ಸೃಷ್ಟಿಸಿ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.ಗ್ರಾಮದ ವೆಂಕಟಲಕ್ಷ್ಮಮ್ಮ ಕೋಂ ಲೇ ಶ್ರೀನಿವಾಶಶೆಟ್ಟಿ ಅವರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆ ಬಯಸಿ ಅ.24ರಂದು ಅರ್ಜಿ ಸಲ್ಲಿಸಿದ್ದು, ದಾಖಲೆಗಳನ್ನ ಪರಿಶೀಲಿಸಿದ ಚುನಾವಣಾಧಿಕಾರಿ ಹಿಂದುಳಿದ ವರ್ಗ ’ಎ’ ಎಂದು ಪ್ರಕಟ ಮಾಡಿದ್ದಾರೆ. ಆದರೆ, ಅ.25ರಂದು ಅದೇ ವೆಂಕಟಲಕ್ಷ್ಮಮ್ಮರನ್ನು ಹಿಂದುಳಿದ ವರ್ಗ ’ಬಿ’ ಎಂದು ಹೇಳಿ ಈ ಎರಡು ಪಟ್ಟಿಯನ್ನು ಸಂಘದ ಕಚೇರಿ ನಾಮಫಲಕದಲ್ಲಿ ಹಾಕುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.
ಅಭ್ಯರ್ಥಿ ವೆಂಕಟಲಕ್ಷ್ಮಮ್ಮ ಅವರು ತಾಲೂಕು ಕಚೇರಿಯಿಂದ ಜಾತಿ ಪತ್ರಮಾಣ ಪತ್ರವನ್ನು ಪಡೆದೇ ಅರ್ಜಿಸಲ್ಲಿಸಿದ್ದಾರೆ. ಒಂದು ವೇಳೆ ವರ್ಗ ’ಎ’ ಎಂದು ಪರಿಗಣಿಸಿದ್ದರೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಈ ಹಿಂದೆ ಗ್ರಾಮದ ಸೊಸೈಟಿ ಚುನಾವಣೆಯಲ್ಲಿ ವೆಂಕಟಲಕ್ಷ್ಮಮ್ಮ ಅವರ ಪತಿ ಶ್ರೀನಿವಾಸಶೆಟ್ಟಿ ಅವರು ಪ್ರವರ್ಗ ’ಎ’ ಸ್ಪರ್ಧಿಸಿ ಪರಾಭವಗೊಂಡಿದ್ದರು.ತಹಸೀಲ್ದಾರ್ ಅವರೇ ನೀಡಿರುವ ಜಾತಿ ಪ್ರಮಾಣ ಪತ್ರವನ್ನು ಒಪ್ಪುತ್ತಿಲ್ಲ. ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಪಾರ್ವತಮ್ಮ ಸರಿಯಾಗಿ ಕರ್ತವ್ಯ ನಿರ್ವಹಿಸದೆ, 3 ಗಂಟೆ ವರೆವಿಗೂ ಇರಬೇಕಾದ ಇವರು ಮಧ್ಯಾಹ್ನ 1 ಗಂಟೆಗೆ ತೆರಳುತ್ತಾರೆ. ಪ್ರಶ್ನಿಸಿದರೆ ನಿಮ್ಮ ಊರಿಗೆ ಬರಬಾರದಿತ್ತು. ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ಉದ್ದಟನತ ತೋರುತ್ತಾರೆ ಎಂದು ಗ್ರಾಮಸ್ಥರು ದೂರಿದರು.
ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಬಿ.ಸುಧಾ ದೇವರಾಜು ಆಯ್ಕೆಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ತಗ್ಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬಿ.ಸುಧಾ ದೇವರಾಜು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಕೊತ್ತತ್ತಿ ಹೋಬಳಿ ಎರಡನೇ ವೃತ್ತದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಇತಿಹಾಸದಲ್ಲೇ ಮಹಿಳೆಯೊಬ್ಬರು ಪ್ರಥಮ ಬಾರಿಗೆ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.
ಬಳಿಕ ಬಿ.ಸುಧಾ ದೇವರಾಜು ಮಾತನಾಡಿ, ಅಧ್ಯಕ್ಷರಾಗಲು ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರು ಹಾಗೂ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಜೆಡಿಎಸ್ ಮುಖಂಡರು, ಸಂಘದ ಎಲ್ಲಾ ಷೇರುದಾರರಿಗೂ ಧನ್ಯವಾದ ಅರ್ಪಿಸಿದರು.ಈ ವೇಳೆ ಸಂಘದ ನಿರ್ದೇಶಕರಾದ ದೇವರಾಜು, ಜ್ಯೋತಿ ಶಂಕರೇಗೌಡ, ಎಂ.ಎನ್.ನಿಂಗೇಗೌಡ ಸೇರಿದಂತೆ ಹಾಲಿ ನಿರ್ದೇಶಕರು, ಜೆಡಿಎಸ್ ಮುಖಂಡರಾದ ತಗ್ಗಹಳ್ಳಿ ಪ್ರಸನ್ನ, ಮಾದೇಗೌಡ, ಟಿ.ಮಲ್ಲಿಗೆರೆ ಎಂ.ಬಿ.ಲೋಕೇಶ್, ದೇವರಾಜು, ಸಂಘದ ಕಾರ್ಯದರ್ಶಿ ಸಿದ್ದರಾಜು ಸೇರಿದಂತೆ ಹಲವರು ಇದ್ದರು.