ಬೆಳ್ತಂಗಡಿ: ಸರ್ಕಾರವು ರಾಜ್ಯಾದ್ಯಂತ ಇರುವ ಹೈನುಗಾರರಿಗೆ ಕೊಡುವ ಪ್ರೋತ್ಸಾಹಧನವನ್ನು ಬಾಕಿ ಇರಿಸಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಒಪ್ಪಿಕೊಂಡಿದ್ದಾರೆ.
ದ.ಕ. ಜಿಲ್ಲೆಯ ಕಡಬ ಪ.ಪಂ.ಗೆ 85 ಲಕ್ಷ ರು., ಬಜ್ಪೆ ಪ.ಪಂ.ಗೆ 113 ಲಕ್ಷ ರು., ಕಿನ್ನಿಗೋಳಿ ಪಂ.ಪಂ.ಗೆ 153 ಲಕ್ಷ ರು. ಹಾಗೂ ಬೈಂದೂರು ಪ.ಪಂ.ಗೆ 211 ಲಕ್ಷ ರು.ಗಳ ಅನುದಾನ ಖೋತಾ ಅಗಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಕೆಲ ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆಯಲ್ಲಿ ಚುನಾಯಿತ ಸದಸ್ಯರು ಇಲ್ಲದೇ ಇರುವುದರಿಂದ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನ ಪಡೆಯಲು ಅರ್ಹವಾಗಿಲ್ಲದ ನಗರ ಸ್ಥಳೀಯ ಸಂಸ್ಥೆಗಳ ವಿವರ ಕೇಳಿದ್ದರು.ಅದಕ್ಕುತ್ತರಿಸಿದ ಸಚಿವರು ರಾಜ್ಯದಲ್ಲಿ ಅಂತಹ 48 ಸ್ಥಳೀಯ ಸಂಸ್ಥೆಗಳಿದ್ದು, 2023-24ನೇ ಸಾಲಿನಲ್ಲಿ ಒಟ್ಟು 6202 ಲಕ್ಷ ರು. ಅನುದಾನ ಬಾಕಿ ಇದೆ. ಚುನಾಯಿತ ಸದಸ್ಯರು ಇಲ್ಲದೆ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೂ ಸಹ ಅನುದಾನ ಬಿಡುಗಡೆ ಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕೋರುವ ಪ್ರಸ್ತಾಪವು ಪರಿಶೀಲನೆಯ ಹಂತದಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆ.