ಹೈನುಗಾರರು ೧ ಲಕ್ಷ ಹಾಲು ಉತ್ಪಾದನೆಯ ಸಂಕಲ್ಪ ಯಶಸ್ವಿಗೊಳಿಸಿ

KannadaprabhaNewsNetwork |  
Published : Jun 05, 2025, 03:15 AM IST
೪ಶಿರಾ೧: ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ತುಮಕೂರು ಜಿಲ್ಲಾ ಸಹಕಾರ ಉತ್ಪಾದಕರ ಸಂಘಗಳ ಒಕ್ಕೂಟ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಿಶ್ರತಳಿ ಹೆಣ್ಣು ಕುರುಗಳ ಪ್ರದರ್ಶನ, ಒಂದು ಲಕ್ಷ ಲೀಟರ್ ಹಾಲು ಶೇಖರಣ ಸಂಕಲ್ಪ ದಿನ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮವನ್ನು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಶಾಸಕರಾದ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು.  | Kannada Prabha

ಸಾರಾಂಶ

ರೈತರು ಹಾಗೂ ಕೃಷಿಕ ಮಹಿಳೆಯರು ವರ್ಷವಿಡಿ ಆದಾಯಗಳಿಸುವ ಏಕೈಕ ಮಾರ್ಗ ಹೈನುಗಾರಿಕೆಯಾಗಿದ್ದು, ಈ ನಿಟ್ಟಿನಲ್ಲಿ ಶಿರಾ ತಾಲೂಕಿನಲ್ಲಿ ಹೈನುಗಾರರು ಹೆಚ್ಚು ಹಾಲು ಉತ್ಪಾದನೆಯ ಮಾಡುವ ಮೂಲಕ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಸಂಕಲ್ಪವನ್ನು ಯಶಸ್ವಿಗೊಳಿಸಿ ಎಂದು ತುಮಕೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಎಸ್ ಆರ್ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ರೈತರು ಹಾಗೂ ಕೃಷಿಕ ಮಹಿಳೆಯರು ವರ್ಷವಿಡಿ ಆದಾಯಗಳಿಸುವ ಏಕೈಕ ಮಾರ್ಗ ಹೈನುಗಾರಿಕೆಯಾಗಿದ್ದು, ಈ ನಿಟ್ಟಿನಲ್ಲಿ ಶಿರಾ ತಾಲೂಕಿನಲ್ಲಿ ಹೈನುಗಾರರು ಹೆಚ್ಚು ಹಾಲು ಉತ್ಪಾದನೆಯ ಮಾಡುವ ಮೂಲಕ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಸಂಕಲ್ಪವನ್ನು ಯಶಸ್ವಿಗೊಳಿಸಿ ಎಂದು ತುಮಕೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಎಸ್ ಆರ್ ಗೌಡ ಹೇಳಿದರು.ಅವರು ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ತುಮಕೂರು ಜಿಲ್ಲಾ ಸಹಕಾರ ಉತ್ಪಾದಕರ ಸಂಘಗಳ ಒಕ್ಕೂಟ, ಬುಕ್ಕಾಪಟ್ಟಣ ಮತ್ತು ಶಿರಾ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘಗಳು, ತುಮಕೂರು ಹಾಲು ಒಕ್ಕೂಟದ ಟ್ರಸ್ಟ್ ಮಲ್ಲಸಂದ್ರ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಿಶ್ರತಳಿ ಹೆಣ್ಣು ಕುರುಗಳ ಪ್ರದರ್ಶನ, ಒಂದು ಲಕ್ಷ ಲೀಟರ್ ಹಾಲು ಶೇಖರಣ ಸಂಕಲ್ಪ ದಿನ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಕಾರದ ಯಾವುದೇ ಯೋಜನೆಗಳು ನೀಡದಂತಹ ಆದಾಯ ಪಶುಸಂಗೋಪನೆಯಿಂದ ರೈತರಿಗೆ ಸಿಗುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸುವ ರೈತರ ಜೀವನ ಗುಣಮಟ್ಟ ಹೆಚ್ಚಿಸುವ ಮೂಲಕ ಅವರ ಜೀವನೋಪಾಯಕ್ಕೆ ಹೆಚ್ಚಿನ ಕೊಡುಗೆ ಪಶುಸಂಗೋಪನೆ ನೀಡುತ್ತಿದೆ. ತುಮಕೂರು ಹಾಲು ಉತ್ಪಾದಕರ ಒಕ್ಕೂಟ ಹಾಲು ಉತ್ಪಾದನೆಯಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದು, ಒಕ್ಕೂಟದಿಂದ ಹೈನುಗಾರರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಬಿ ಸುರೇಶ ಬಾಬು ಅವರು ಮಾತನಾಡಿ ಹೈನುಗಾರಿಕೆ ವ್ಯವಸಾಯದ ಜೊತೆಗೆ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉದ್ಯೋಗವಾಗಿದ್ದು, ರೈತರು ಹೆಚ್ಚು ಹೆಚ್ಚು ಹಸುಗಳನ್ನು ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ. ಹೈನುಗಾರಿಕೆಗೆ ಉತ್ತೇಜಿಸುವ ಉದ್ದಶೇದಿಂದ ನನ್ನ ಕ್ಷೇತ್ರದ ರೈತರಿಗೆ ೧೦೦೦ ಹಸುಗಳನ್ನು ಕೊಡುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು, ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾವಿರಾರು ಜನ ಪಾಲ್ಗೊಂಡು ಮಾಡಿಸಿಕೊಂಡರು. ೨ ಕೋಟಿ ವೆಚ್ಚಗಳಲ್ಲಿ ೧೧೦ ಚಾಬ್ ಕಟ್ಟರ್, ವಿವಿಧ ರೀತಿಯ ಮಿಷನ್ ಸಲಕರಣೆ ಹಾಲು ಉತ್ಪಾದಕರ ನೂರಾರು ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಡ್ವಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, ಹಾಲು ಒಕ್ಕೂಟದ ನಿರ್ದೇಶಕರುಗಳಾದ ಕೆ.ಪಿ. ಭಾರತಿದೇವಿ, ಡಿ. ಕೃಷ್ಣಕುಮಾರ್, ಎಂ. ಕೆ. ಪ್ರಕಾಶ್, ಚಂದ್ರಶೇಖರ ರೆಡ್ಡಿ, ಬಿ.ಎನ್ . ಶಿವಪ್ರಕಾಶ್, ವಿ. ಸಿದ್ದಗಂಗಯ್ಯ, ಎಚ್.ಎ. ನಂಜೇಗೌಡ, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ. ಶ್ರೀನಿವಾಸನ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹರೀಶ್, ತುಮುಲ್ ವ್ಯವಸ್ಥಾಪಕ ಶ್ರೀನಿವಾಸ್ , ಡಾ. ಎಲ್.ಡಿ. ದೀಕ್ಷಿತ್, ಬುಕ್ಕಾಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಕೆ.ಮುಜಾಯಿದ್, ಬುಕ್ಕಾಪಟ್ಟಣ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಜೆ. ಶಿವಕುಮಾರ್, ಶಿರಾ ತಾಲೂಕು ವ್ಯವಸ್ಥಾಪಕ ಬಿ.ಗಿರೀಶ್, ಪಶು ಸಹಾಯಕ ನಿರ್ದೇಶಕ ಡಾ. ರಮೇಶ್, ವಿಸ್ತರಣಾಧಿಕಾರಿ ಚೈತ್ರ ಸೇರಿದಂತೆ ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಸಾವಿರಾರು ಹಾಲು ಉತ್ಪಾದಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ