ರೈತರಿಗೆ ಹೈನುಗಾರಿಕೆ ವರದಾನ: ಸಚಿವ ಪಿ.ಎಂ.ನರೇಂದ್ರಸ್ವಾಮಿ

KannadaprabhaNewsNetwork |  
Published : Sep 29, 2026, 01:45 AM IST
28ಕೆಎಂಎನ್ ಡಿ15 | Kannada Prabha

ಸಾರಾಂಶ

ಪ್ರತಿ ಗ್ರಾಮಗಳಲ್ಲಿ ಹಾಲು ಉತ್ಪಾದಕರು ಒಕ್ಕೂಟದ ಸಹಾಯದಿಂದ ಸಂಘವ ಸ್ಥಾಪಿಸಿಕೊಂಡು ಅಭಿವೃದ್ಧಿಪಡಿಸುವ ಜೊತೆಗೆ ಕಟ್ಟಡದ ಕಾಮಗಾರಿ ಮಾಡಲು ಸಹ ಮುಂದಾಗಿರುವುದು ಸಂತೋಷಕರ ವಿಚಾರ. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಸಹ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರೈತರಿಗೆ ಹೈನುಗಾರಿಕೆ ವರದಾನ. ಹಾಲು ಉತ್ಪಾದಕರಿಗೆ ಹಲವು ಸೌಲಭ್ಯಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ಬಿಜಿಪುರ ಹೋಬಳಿಯ ಪೂರಿಗಾಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 17 ಲಕ್ಷ ರು. ವೆಚ್ಚದಲ್ಲಿ ಮೇಲೆ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ, 10.5 ಲಕ್ಷ ರು. ವೆಚ್ಚದಲ್ಲಿ ಮಲಿಯೂರು ಡೈರಿಗೆ ಶುದ್ಧ ಕುಡಿಯುವ ನೀರಿನ ಘಟಕ, ನೆಲ್ಲಿಗೆರೆ ಮತ್ತು ಮಾಗನೂರು ಡೈರಿಗಳಿಗೆ ತಲಾ 12 ಲಕ್ಷ ರು. ವೆಚ್ಚದಲ್ಲಿ ನೂತನ ಕಟ್ಟಡ ಕಾಮಗಾರಿ, ಗೊಲ್ಲರಹಳ್ಳಿ ಡೈರಿಗೆ 12 ಲಕ್ಷ ರು.ವೆಚ್ಚದಲ್ಲಿ ದಾಸ್ತಾನು ಮಳಿಗೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಬಳಿಕ ಮಾತನಾಡಿದರು.

ಪ್ರತಿ ಗ್ರಾಮಗಳಲ್ಲಿ ಹಾಲು ಉತ್ಪಾದಕರು ಒಕ್ಕೂಟದ ಸಹಾಯದಿಂದ ಸಂಘವ ಸ್ಥಾಪಿಸಿಕೊಂಡು ಅಭಿವೃದ್ಧಿಪಡಿಸುವ ಜೊತೆಗೆ ಕಟ್ಟಡದ ಕಾಮಗಾರಿ ಮಾಡಲು ಸಹ ಮುಂದಾಗಿರುವುದು ಸಂತೋಷಕರ ವಿಚಾರ. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಸಹ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ರೈತರು ಇನ್ನು ಹೆಚ್ಚು ಹೆಚ್ಚು ರಾಸುಗಳನ್ನು ಸಾಕುವುದರಿಂದ ಸಂಘ ಮತ್ತು ಒಕ್ಕೂಟದ ಜೊತೆಗೆ ಹಾಲು ಉತ್ಪಾದಕರಿಗೂ ಹೆಚ್ಚು ಲಾಭವಾಗಿರುತ್ತದೆ ಎಂದರು.

ಈ ವೇಳೆ ಸಂಘದ ಅಧ್ಯಕ್ಷ ರಾಜುರವರು ಕೃಷಿಸಚಿವರನ್ನು ಗೌರವಿಸಲಾಯಿತು. ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಪೂರಿಗಾಲಿ ಡೇರಿ ಸಂಘದ ಉಪಾಧ್ಯಕ್ಷ ಮರಿಶೆಟ್ಟಿ, ನಿರ್ದೇಶಕರಾದ ರೇವಣ್ಣ, ಪಿ.ಎಂ.ಸುಮಲತಾ, ಕೃಷ್ಣ, ಚಂದ್ರಶೇಖರಮೂರ್ತಿ, ಎನ್.ಚೇತನ, ಶಿವಮ್ಮ, ಎಚ್.ಕೆ.ರೂಪ, ರತ್ನಮ್ಮ, ಮನ್ಮುಲ್ ವಿಸ್ತರಣಾಧಿಕಾರಿ ರಶ್ಮಿ. ಎಂ.ಸಿ, ವಿವಿಧ ಡೈರಿಗಳ ಕಾರ್ಯದರ್ಶಿಗಳಾದ ಬಿ.ಪಿ.ಪ್ರತಾಪ್, ಶಿವಕುಮಾರ್, ಪ್ರಸಾದ್, ನಾಗರಾಜು,ಬಸವಣ್ಣ, ಜಯಮಾಲಾ, ದೀಪಿಕಾ, ಪೂರಿಗಾಲಿ ಸೊಸೈಟಿ ಅಧ್ಯಕ್ಷ ಚಿಕ್ಕಬಸವರಾಜು, ಮುಖಂಡರಾದ ಪರಶಿವಮೂರ್ತಿ, ಆರ್.ಗುರುಸ್ವಾಮಿ, ಜಯರಾಜು, ಪಟೇಲ್, ನಾಗೇಶ್ ಸೇರಿದಂತೆ ಹಲವರು ಹಾಜರಿದ್ದರು.

ನಾಳೆ ಶಿಕ್ಷಕರ ದಿನಾಚರಣೆ, ಅಭಿನಂದನಾ ಸಮಾರಂಭ

ಮಳವಳ್ಳಿ: ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ಸೆ.30ರಂದು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ವಹಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಪ್ರಧಾನ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ವಿವೇಕಾನಂದ, ಬಿ.ಎಸ್.ಶಿವಣ್ಣ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು, ಡಯಟ್ ಉಪನಿರ್ದೇಶಕ ಕೆ.ಯೋಗೇಶ್, ಪದವಿ ಪೂರ್ವ ಕಾಲೇಜು ಉಪನಿರ್ದೇಶಕ ಪ್ರಸನ್ನ ಕುಮಾರ್, ತಾಪಂ ಆಡಳಿತಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಸೇರಿದಂತೆ ಹಲವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆ ಜಾರಿಗೆ ಸರ್ಕಾರ ಬದ್ಧ
ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಅಗತ್ಯ ಕ್ರಮ