ಕನ್ನಡಪ್ರಭ ವಾರ್ತೆ ಶಿರಾ ಶಿರಾದಂತಹ ಬಯಲುಸೀಮೆ ಪ್ರದೇಶದಲ್ಲಿ ಹೈನುಗಾರಿಕೆ ಬಡ ರೈತ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ವರದಾನವಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಹೇಳಿದರು.ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ತುಮಕೂರು ಸಹಕಾರಿ ಹಾಲು ಒಕ್ಕೂಟ, ಶಿರಾ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘ, ಆರೋಗ್ಯ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ರವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾಲು ಒಕ್ಕೂಟ ಉತ್ಪಾದಕರಿಂದ ಶೇಖರಣೆ ಮಾಡುವಂತಹ ಕೆಲಸಗಳ ಜೊತೆ, ಉತ್ಪಾದಕರ ಶ್ರೇಯೋಭಿವೃದ್ಧಿಗೆ ೨೦ ಅಂಶಗಳ ಕಾರ್ಯಕ್ರಮವನ್ನು ರೂಪಿಸಿ ಉತ್ಪಾದಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಿ ಮುನ್ನಡೆಯುತ್ತಿದೆ. ಸಾಮಾಜಿಕ ಕಳಕಳಿಯ ಬದ್ಧತೆಯೊಂದಿಗೆ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ರಕ್ತದ ಬಗ್ಗೆ ಹೆಚ್ಚು ಕಾಳಜಿವಹಿಸಿ , ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸುವಂತಹ ಮಹತ್ವದ ಕಾರ್ಯ ಕೂಡ ಮಾಡಿದೆ ಎಂದರು.ಪ್ರತಿ ದಿನ ೧ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, ಮುಂಬರುವ ದಿನಗಳಲ್ಲಿ ಶಿರಾದಲ್ಲಿ ಮತ್ತಷ್ಟು ಕ್ಷೀರ ಕ್ರಾಂತಿಯೇ ಆಗಲಿದೆ ಎಂದರು. ಉತ್ತಮ ಮಿಶ್ರತಳಿ ಕರು ಸಾಕಾಣಿಕೆ ಮಾಡಿದ ರೈತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ೬೩. ಜನ ರಕ್ತದಾನ ಮಾಡಿದರು, ಮಿಶ್ರತಳಿ ಕರುಗಳ ಪ್ರದರ್ಶನದಲ್ಲಿ ೨೦೦ ಕರುಗಳು ಪಾಲ್ಗೊಂಡಿದ್ದವು.
ನಾದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ತುಮುಲ್ ವ್ಯವಸ್ಥಾಪಕ ಚಂದ್ರಶೇಖರ ಕೇದನೂರ, ಉಪ ವ್ಯವಸ್ಥಾಪಕ ಗಿರೀಶ್, ಪ್ರಸುತಿ ತಜ್ಞ ಡಿ.ಎಂ.ಗೌಡ, ಸೂಡ ಸದಸ್ಯೆ ಲಕ್ಷಿ÷್ಮದೇವಮ್ಮ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾದ ಮೆಹೆರ್ ತಾಜ್ ಬಾಬು, ಮೇಘಶ್ರೀ ನವೀನ್, ಪಾರ್ವತಮ್ಮ, ಸದಸ್ಯರಾದ ಮಂಜುನಾಥ ಸ್ವಾಮಿ, ವಿಜಯಕುಮಾರ್, ಭೂತರಾಜು, ನಾಗರಾಜು, ಮಧುಸೂದನ್, ವಿಸ್ತರಣಾಧಿಕಾರಿಗಳಾದ ಚೈತ್ರ, ಕಿರಣ್ ಕುಮಾರ್, ಡಾ. ಶ್ರೀಕಾಂತ್, ಸಮಾಲೋಚಕ ದಯಾನಂದ, ಕೆಮಿಸ್ಟರ್ ಬಾಬಾ ಫಕ್ರುದ್ದೀನ್, ಹನುಮಂತ, ಅನುಷಾ, ಯಶೋಧ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಜ್ಜಣ್ಣ, ಮುಖಂಡರಾದ ಕೊಟ್ಟ ಶ್ರೀನಿವಾಸ್, ಇನಾಮ್ ಗೊಲ್ಲಹಳ್ಳಿ ಶಿವಣ್ಣ, ಮುದ್ದು ಗಣೇಶ್, ಚಿಕ್ಕಗೋಳ ಮಲ್ಲೇಶ್, ಪವನ್ ಗೌಡ, ರಾಜಣ್ಣ ಸೇರಿದಂತೆ ಜಿಲ್ಲಾ ಕುಟುಂಬ ಕಲ್ಯಾಣ ರಕ್ತ ನಿಧಿ ಬ್ಯಾಂಕ್ ಸಿಬ್ಬಂದಿ, ದೃಷ್ಟಿ ಧಾಮ ಕಣ್ಣಿನ ಆಸ್ಪತ್ರೆ ಸಿಬ್ಬಂದಿ, ಹಲವಾರು ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಹಾಲು ಉತ್ಪಾದಕರು ಸೇರಿದಂತೆ ಹಲವರು ಹಾಜರಿದ್ದರು.