ಆರ್ಥಿಕ ಸಂಕಷ್ಟ ನಿವಾರಣೆಗೆ ಹೈನುಗಾರಿಕೆ ಉತ್ತಮ ಸ್ವ ಉದ್ಯೋಗ: ಬಸವರಾಜಪ್ಪ.

KannadaprabhaNewsNetwork | Published : Dec 19, 2024 12:30 AM

ಸಾರಾಂಶ

ತರೀಕೆರೆ, ಆರ್ಥಿಕ ಸಂಕಷ್ಟ ನಿವಾರಣೆಗೆ ಹೈನುಗಾರಿಕೆ ಉತ್ತಮ ಸ್ವ ಉದ್ಯೋಗ ಎಂದು ತರೀಕೆರೆ ತಾಲೂಕು ಪಶುವೈದ್ಯಾಧಿಕಾರಿ ಬಸವರಾಜಪ್ಪಹೇಳಿದರು.

ಉಡೇವ ಗ್ರಾಮದಲ್ಲಿ ಹೈನುಗಾರಿಕೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಆರ್ಥಿಕ ಸಂಕಷ್ಟ ನಿವಾರಣೆಗೆ ಹೈನುಗಾರಿಕೆ ಉತ್ತಮ ಸ್ವ ಉದ್ಯೋಗ ಎಂದು ತರೀಕೆರೆ ತಾಲೂಕು ಪಶುವೈದ್ಯಾಧಿಕಾರಿ ಬಸವರಾಜಪ್ಪಹೇಳಿದರು.ಉಡೇವ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ತರೀಕೆರೆಯಿಂದ ಕೃಷಿ ವಿಸ್ತರಣಾ ಕಾರ್ಯಕ್ರಮ ಅಂಗವಾಗಿ ಹೈನುಗಾರಿಕೆ ರೈತ ಕ್ಷೇತ್ರ ಪಾಠ ಶಾಲೆ ಉದ್ಘಾಟಿಸಿ ಮಾತನಾಡಿದರು. ಇಂದು ತಾವೆಲ್ಲರೂ ಸಣ್ಣ ಪ್ರಮಾಣದಲ್ಲಾದರೂ ಹೈನುಗಾರಿಕೆ ಅಳವಡಿಸಿ ಕೊಂಡರೆ ಬಹುತೇಕ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ. ಕೃಷಿಗೆ ಪೂರಕ ಚಟುವಟಿಕೆಯಾಗಿರುವ ಹೈನುಗಾರಿಕೆಯನ್ನು ವೈಜ್ಞಾನಿಕ ರೀತಿಯಲ್ಲಿ ಹಸು ಸಾಕಣೆಯಲ್ಲಿ ತೊಡಗಬೇಕು. ಸಣ್ಣ ಮತ್ತು ಅತಿಸಣ್ಣ ರೈತ ಮಹಿಳೆಯರು ಹಾಗೂ ಭೂ ರಹಿತರು ಹೈನುಗಾರಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸುವುದರಿಂದ ಅವರ ಜೀವನ ಮಟ್ಟ ಸುಧಾರಿಸಲಿದೆ ಎಂದು ಹೇಳಿದರು.

ಹೈನುಗಾರಿಕೆಯಲ್ಲಿ ಉತ್ತಮ ರಾಸುಗಳ ಆಯ್ಕೆ, ದೇಶೀ ತಳಿ ಹಸುಗಳ ಸಾಕಾಣಿಕೆ, ಸಮತೋಲನ ಪಶು ಆಹಾರ ಕ್ರಮ, ಆರೋಗ್ಯ ರಕ್ಷಣೆ , ಪ್ರಾಥಮಿಕ ಚಿಕಿತ್ಸೆ ಮತ್ತು ರಾಸುಗಳ ನಿರ್ವಹಣೆ, ಹಸು ಮತ್ತು ಹಸು ಸಾಕಾಣಿಕೆ ಶೆಡ್ ಗಳ ಸ್ವಚ್ಛತೆ, ಪಶು ಆಸ್ಪತ್ರೆ ವೈದ್ಯರ ಸಂಪರ್ಕ, ಹೈನುಗಾರಿಕೆಯಲ್ಲಿ ಯಂತ್ರಗಳ ಬಳಕೆ, ಅಧಿಕ ಹಾಲಿನ ಇಳುವರಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡರೆ ಹೈನುಗಾರಿಕೆಯನ್ನು ಉತ್ತಮಪಡಿಸಿಕೊಳ್ಳಬಹುದು ಎಂದರು.ಉಡೇವ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ನಾಯ್ಕ ಮಾತನಾಡಿ ಹೈನುಗಾರಿಕೆ ಕೇವಲ ಆರ್ಥಿಕ ಸ್ವಾವಲಂಬನೆ ಅಷ್ಟೇ ಅಲ್ಲ, ಕೊಟ್ಟಿಗೆ ಗೊಬ್ಬರ ದೊರೆಯುವ ಜೊತೆಗೆ ಅದರಿಂದ ಭೂಮಿ ಫಲವತ್ತತೆಯನ್ನೂ ಹೆಚ್ಚಿಸಲು ನೆರವಾಗುತ್ತದೆ. ಉತ್ತಮ ರೀತಿಯಲ್ಲಿ ಹಸುಗಳ ಸಾಕಾಣಿಕೆ ಯಲ್ಲಿ ತೊಡಗಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು.

ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್ ಮಾತನಾಡಿ ಸಂಘದ ಸದಸ್ಯರಿಗೆ ಪ್ರಗತಿನಿಧಿ ಸಹಕಾರ, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿ, ಕಟ್ಟಡ ರಚನೆ, ಯೋಜನೆ ಕಲಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ವಿಶೇಷ ಹೈನುಗಾರಿಕೆ ಕಾರ್ಯಕ್ರಮಗಳ ಸಾಧನೆ, ತಾಲೂಕಿನ ಕೃಷಿ ಅನುದಾನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಉಪಾಧ್ಯಕ್ಷೆ ಲೋಲಾಕ್ಷಿ, ಕಾರ್ಯದರ್ಶಿ ದೀಪಿಕಾ, ಸೇವಾ ಪ್ರತಿನಿಧಿ ಸ್ಮಿತಾ, ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.18ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಉಡೇವ ಗ್ರಾಮದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮ ಅಂಗವಾಗಿ ನಡೆದ ಹೈನುಗಾರಿಕೆ ರೈತ ಕ್ಷೇತ್ರ ಪಾಠ ಶಾಲೆಯನ್ನು ​ ತಾಲೂಕು ಪಶು ವೈದ್ಯಾಧಿಕಾರಿ ಬಸವರಾಜಪ್ಪ ಉದ್ಘಾಟಿಸಿದರು. ಉಡೇವ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ನಾಯ್ಕ, ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್ ಇದ್ದರು.

Share this article