ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಒಗ್ಗಟ್ಟಿನ ಒಕ್ಕೂಟದ ವ್ಯವಸ್ಥೆಯಂತೆ ಸಂಘದ ನಿರ್ದೇಶಕರು ಸಂಘದ ಪ್ರಗತಿಗಾಗಿ ಕಾರ್ಯಚಟುವಟಿಕೆ ಮುಂದುವರೆಸಬೇಕು ಎಂದರು.
ಒಕ್ಕೂಟದಿಂದ ದೇಗುಲ ಜೀರ್ಣೋದ್ಧಾರಕ್ಕೆ ಅನುದಾನ ಪಡೆಯಬಹುದು. ಷೇರುದಾರರು ಮೃತರಾದಾಗ ಶವಸಂಸ್ಕಾರಕ್ಕೆ ನೆರವು, ರಾಸುಗಳ ಆರೋಗ್ಯಕ್ಕೆ ನೆರವು, ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಪ್ರೋತ್ಸಾಹ ಧನದಂತಹ ಹಲವು ಸೌಲಭ್ಯ ಪಡೆಯಬಹುದಾಗಿದೆ ಎಂದರು.ಮಂಡ್ಯ ರಾಜ್ಯದಲ್ಲೇ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ಜಿಲ್ಲೆಯಾಗಿದೆ. ಪ್ರತಿ ಮನೆಯಲ್ಲಿ ರಾಸುಗಳು ಇರುವುದು ಸ್ವಾವಲಂಭಿಗಳಾಗಿ ಬದುಕಲು ಸಹಕಾರಿಯಾಗಿದೆ. ವಿದ್ಯಾವಂತರು ಉದ್ಯೋಗ ಹರಸಿ ಪಟ್ಟಣಕ್ಕೆ ತೆರಳುವ ಬದಲು ಹೈನುಗಾರಿಕೆಯನ್ನೆ ಉದ್ಯಮವಾಗಿ ಸ್ವೀಕರಿಸಬೇಕು. ಸಂಸ್ಥೆ ತಮ್ಮ ಜೊತೆ ಸದಾ ಇದ್ದು, ಗ್ರಾಹಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲು ಹಲವು ಯೋಜನೆಯನ್ನು ತಂದಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಆಯವ್ಯಯ, ಬಜೆಟ್ ಮಂಡನೆ ಕುರಿತು ಚರ್ಚಿಸಿ ಅನುಮೋದಿಸಲಾಯಿತು. ಡೇರಿ ಉಪಾಧ್ಯಕ್ಷ ಆರ್. ವಾಸುದೇವ, ನಿರ್ದೇಶಕರಾದ ಮಂಜೇಗೌಡ, ಪುಟ್ಟಣ್ಣಯ್ಯ, ನಾಗರಾಜಶೆಟ್ಟಿ, ತಮ್ಮಣ್ಣ, ಪರಮೇಶ್, ಮೋಹನ್, ಕೆ.ಟಿ.ರಮೇಶ್, ಪೂರ್ಣಿಮಾ, ಮೀನಾಕ್ಷಿ, ಪಲ್ಲವಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶೇಖರ್, ಜೆಡಿಎಸ್ ಮುಖಂಡ ಐಕನಹಳ್ಳಿ ಕೃಷ್ಣೇಗೌಡ ಮತ್ತಿತರರಿದ್ದರು.