ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ

Published : Oct 26, 2025, 12:08 PM ISTUpdated : Oct 26, 2025, 12:46 PM IST
Food Style

ಸಾರಾಂಶ

"ಲೋಕೋಃ ಪುರುಷಸ್ಸಮಿತಿ" (ಚ.ಸಂ.) – ಮಾನವನ ದೇಹವು ಪ್ರಕೃತಿಯ ಪ್ರತಿಬಿಂಬ. ಪ್ರಕೃತಿಯ ಬದಲಾವಣೆಗಳು ದೇಹದೊಳಗೂ ಪ್ರತಿಫಲಿಸುತ್ತವೆ. ಆಯುರ್ವೇದವು “ದೇಹವು ಪ್ರಕೃತಿಯೊಂದಿಗೆ ಲಯ ಹೊಂದಿಕೊಂಡಿದೆ” ಎಂದು ಹೇಳುತ್ತದೆ

"ಲೋಕೋಃ ಪುರುಷಸ್ಸಮಿತಿ" (ಚ.ಸಂ.) – ಮಾನವನ ದೇಹವು ಪ್ರಕೃತಿಯ ಪ್ರತಿಬಿಂಬ. ಪ್ರಕೃತಿಯ ಬದಲಾವಣೆಗಳು ದೇಹದೊಳಗೂ ಪ್ರತಿಫಲಿಸುತ್ತವೆ. ಆಯುರ್ವೇದವು “ದೇಹವು ಪ್ರಕೃತಿಯೊಂದಿಗೆ ಲಯ ಹೊಂದಿಕೊಂಡಿದೆ” ಎಂದು ಹೇಳುತ್ತದೆ. ಹೀಗಾಗಿ ಪ್ರತಿ ಋತುವಿನ ಬದಲಾವಣೆ ದೇಹದ ವಾತ–ಪಿತ್ತ–ಕಫ ಸ್ಥಿತಿಯನ್ನು ನೇರವಾಗಿ ಪ್ರಭಾವಿಸುತ್ತದೆ. ಋತುಚರ್ಯೆ (ಋತುಗಳಿಗೆ ತಕ್ಕ ಜೀವನ ಶೈಲಿ) ಅನುಸರಿಸುವುದು ಆರೋಗ್ಯರಕ್ಷಣೆಯ ಪ್ರಮುಖ ಭಾಗವೆಂದು, ಆಯುರ್ವೇದ ಅಚಾರ್ಯರು ಹೇಳಿದ್ದಾರೆ.

ದೋಷಗಳ ಚಕ್ರ ದೇಹದಲ್ಲಿ ದೋಷಗಳ ಸಂಚಯ

 → ಪ್ರಕೋಪ → ಶಮನ ಸಹಜವಾಗಿ ನಡೆಯುತ್ತದೆ. ದೋಷ-ಸಂಚಯ-ಪ್ರಕೋಪ-ಶಮನ •ವಾತ-ಗ್ರೀಷ್ಮ-ವರ್ಷಾ-ಶರದ್ •ಪಿತ್ತ -ವರ್ಷಾ-ಶರದ್-ಹೇಮಂತ •ಕಫ-ಶಿಶಿರ -ವಸಂತ-ಗ್ರೀಷ್ಮ

ವರ್ಷಾಕಾಲದಲ್ಲಿ ಪಿತ್ತ ನಿಧಾನವಾಗಿ ಸಂಚಯ → ಶರದ್ ಋತುವಿನಲ್ಲಿ ಗರಿಷ್ಠ ಪ್ರಕೋಪ ವಾತ ಬೇಸಿಗೆ → ಮಳೆಗಾಲದಲ್ಲಿ ಪ್ರಕೋಪ → ಶರದ್‌ನಲ್ಲಿ ಶಮನ ಕಫ ಚಳಿಗಾಲ → ವಸಂತದಲ್ಲಿ ಪ್ರಕೋಪ → ಬೇಸಿಗೆ ಶಮನ

 ಶರದ್ ಋತುವಿನಲ್ಲಿ ಪಿತ್ತದ ಪ್ರಬಲತೆ ಮಳೆಯ ತೇವ–ಶೀತದ ನಂತರ ತೀವ್ರ ಬಿಸಿಲಿನ ಕಿರಣಗಳಿಂದ ಪಿತ್ತ ಉಗ್ರಗೊಳ್ಳುತ್ತದೆ. ಪರಿಣಾಮ: ದಾಹ, ಜ್ವರ, ಆಸಿಡಿಟಿ, ಚರ್ಮದ ತೊಂದರೆಗಳು, ಮೂತ್ರನಾಳ ಉರಿಯೂತ ಇತ್ಯಾದಿ.

 ಏಕೆ ಋತುಚರ್ಯೆ..? "ಹಿತಮಹಿತಮ್ ಯದಾನ್ನಾತಿ..." (ಚ.ಸಂ.) ಸರಿಯಾದ ಆಹಾರ –ವಿಹಾರ ಪಾಲಿಸಿದವನು ಆರೋಗ್ಯವಂತ, ತಪ್ಪಿದವನು ರೋಗಿಯೇ. ಹೀಗಾಗಿ ಶರದ್ ಋತುವಿನಲ್ಲಿ ಪಿತ್ತ ಶಮನಕ್ಕೆ ತಕ್ಕ ಆಹಾರ–ವಿಹಾರ, ಔಷಧೋಪಚಾರಗಳನ್ನು ಪಾಲಿಸುವುದು ಅತ್ಯಾವಶ್ಯಕ.

ಶರದ್ ಋತುವಿನ ವೈಶಿಷ್ಟ್ಯ ಹಗಲು ಉಷ್ಣ, ರಾತ್ರಿ ಚಂದ್ರಕಿರಣದ ಶೀತ ಚರ್ಮದಲ್ಲಿ ಕೆಂಪು, ಕೆರಕು, ಸುಡುವಿಕೆ ಆಸಿಡಿಟಿ, ಹುಳಿ ತೇಗು ಮೂತ್ರದಲ್ಲಿ ಉರಿಯುವಿಕೆ

ಕಾಲ: ಆಶ್ವಯುಜ (ಅಶ್ವಿನ) – ಕಾರ್ತಿಕ ಮಾಸಗಳು → ಸೆಪ್ಟೆಂಬರ್ ಮಧ್ಯದಿಂದ ನವೆಂಬರ್ ಮಧ್ಯಭಾಗದವರೆಗೆ

ಸಾಮಾನ್ಯವಾಗಿ ಕಾಣುವ ರೋಗಗಳು ಅಜೀರ್ಣ / ಆಸಿಡಿಟಿ – ಹುಳಿ ತೇಗು, ಅನ್ನನಾಳ ಉರಿಯುವಿಕೆ ಚರ್ಮದ ತೊಂದರೆಗಳು – ಕೆಂಪು ಬಿರುವಿಕೆ, ಕೆರಕು, ಉರಿ ಮೂತ್ರನಾಳ ಸಮಸ್ಯೆಗಳು (UTI) – ಸುಡುವಿಕೆ, ಕೆರಕು

 ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ  ತಿನ್ನಬೇಕಾದವು (ಪಿತ್ತ ಶಮನಕ್ಕೆ): ಧಾನ್ಯಗಳು: ರಕ್ತಶಾಲಿ, ಯವ (ಬಾರ್ಲಿ), ಗೋಧಿ ಹಣ್ಣುಗಳು: ದ್ರಾಕ್ಷಿ, ದಾಳಿಂಬೆ, ಆಮ್ಲಕಿ, ತೆಂಗಿನ ನೀರು. ತರಕಾರಿ / ಸೊಪ್ಪುಗಳು: ಪಡುವಳಕಾಯಿ, ಕುಂಬಳಕಾಯಿ, ಹರಿವೆ ಸೊಪ್ಪು, ಮೆಂತೆ ಸೊಪ್ಪು, ಸೌತೆಕಾಯಿ ಹಾಲು ಮತ್ತು ತುಪ್ಪ: ಶೀತ ಮತ್ತು ಪಿತ್ತ ಶಮನಕ್ಕೆ ಅತ್ಯಂತ ಹಿತ ತಾಜಾ ಸಾದಾ ಮಜ್ಜಿಗೆ – ಜೀರ್ಣಶಕ್ತಿಗೆ ಹಿತಕರ, ಪಿತ್ತ ಶಮನಕ್ಕೆ ಸಹಕಾರಿ ತಿಕ್ತ–ಮಧುರ–ಆಮ್ಲ ರಸ ಪದಾರ್ಥಗಳು: ಮೆಂತೆ, ಆಮ್ಲಕಿ, ನಿಂಬೆ , ಪುನರ್ಪುಳಿ 

 ತಪ್ಪಿಸಬೇಕಾದವು : •ಖಾರ–ಹುಳಿ–ಉಪ್ಪು ಅಧಿಕ ಆಹಾರ, ಸೋಡಾ, ಮದ್ಯಪಾನ, ದಿವಾಸ್ವಪ್ನ * ಮಾಂಸ ಸೇವನೆ: ಅಗತ್ಯವಿದ್ದರೆ ಮಾತ್ರ ಹಿತ–ಮಿತವಾಗಿ. 🕒 ಆಹಾರ ಮತ್ತು ನಿದ್ರೆ ಶಿಸ್ತು: ಶರದ್ ಋತು ಪಿತ್ತ ವೃದ್ಧಿ ಕಾಲವಾಗಿರುವುದರಿಂದ ಅಗ್ನಿಯೂ (ಜೀರ್ಣಶಕ್ತಿ) ಪ್ರಬಲವಾಗಿರುತ್ತದೆ. ಆದ್ದರಿಂದ ; * ಊಟವನ್ನು ಸಮಯಕ್ಕೆ ಸರಿಯಾಗಿ ಸೇವಿಸಬೇಕು ಹಸಿವಿಲ್ಲದೆ ತಿನ್ನಬಾರದು; ಹಸಿವಾದಾಗ ವಿಳಂಬಿಸಬಾರದು ಬೆಳಿಗ್ಗೆ ತಿಂಡಿ ತಪ್ಪಿಸಬಾರದು; ಮಧ್ಯಾಹ್ನದ ಊಟ ಮುಖ್ಯ ತಡರಾತ್ರಿ ನಿದ್ರೆ ತಪ್ಪಿಸಬಾರದು ದಿವಾಸ್ವಪ್ನ (ದಿನದ ನಿದ್ರೆ) ಪಿತ್ತ–ಕಫ ವೃದ್ಧಿಗೆ ಕಾರಣ, ತಪ್ಪಿಸಬೇಕು 🧘 ಪ್ರಾಣಾಯಾಮ ಅನುಲೋಮ–ವಿಲೋಮ, ಶೀತಲಿ / ಶೀತಕಾರಿ ಉಸಿರಾಟಗಳು ಶರದ್ ಋತುದಲ್ಲಿ ಪಿತ್ತ ಶಮನಕ್ಕೆ ಸಹಕಾರಿ ಚಂದ್ರಭೇದನ ಉಸಿರಾಟ (ಎಡ ನಾಸಿಕೆಯಿಂದ) ಸಹ ಪಿತ್ತ ತಣಿಸಲು ಉಪಯುಕ್ತ ಭ್ರಾಮರಿ – ಮನಸ್ಸು ಶಾಂತಗೊಳಿಸಲು, ಚರ್ಮದ ತಾಪಮಾನವನ್ನು ನಿಯಂತ್ರಿಸಲು ಸಹಾಯಕ ದಿನಕ್ಕೆ 2–3 ಬಾರಿ, 5–10 ನಿಮಿಷ ಅಭ್ಯಾಸ ಮಾಡಬಹುದು

ಸೂಚನೆ : ಹೃದಯ, ಉಸಿರಾಟ ಅಥವಾ ಇತರೆ ಗಂಭೀರ ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಮಾರ್ಗದರ್ಶನದಂತೆ ಮಾತ್ರ ಅಭ್ಯಾಸ ಮಾಡಬೇಕು.

ಹಂಸೋದಕ – ಶರದ್ ವಿಶೇಷ ಜಲಪಾನ “ತಪ್ತಂ ತಪ್ತಾಂಶು ಕಿರಣೈಃ ಶೀತಂ ಶೀತಾಂಶು ರಶ್ಮಿಭಿಃ । ಸಮಂತಾತ್ ಅಪ್ಯಹೋರಾತ್ರಂ ಅಗಸ್ತ್ಯೋದಯ ನಿರ್ವಿಷಮ್ ॥ ಶುದ್ಧ, ವಿಷಮುಕ್ತ ನೀರು – ಹಗಲು ಸೂರ್ಯಕಿರಣದಿಂದ ತಾಪಿತ, ರಾತ್ರಿ ಚಂದ್ರಕಿರಣದಿಂದ ಶೀತಗೊಂಡ, ಅಗಸ್ತ್ಯ ನಕ್ಷತ್ರೋದಯಕ್ಕೆ ತಯಾರಾದದು ನಾಭಿಷ್ಯಂದಿ, ನಾ ರೂಕ್ಷಂ – ಕುಡಿಯಲು ಸದಾ ತಾಜಾ, ಹಾನಿ ಇಲ್ಲದ, ಅಮೃತದಂತೆ ಸುಸ್ವಾದ. ಪಿತ್ತ ಶಮನ, ದಾಹ, ಉರಿಯೂತ, ಚರ್ಮದ ತೊಂದರೆಗಳಿಗೆ ಅತ್ಯಂತ ಹಿತಕರ. ಚಿಕಿತ್ಸಾ ಕ್ರಮಗಳು ಅಭ್ಯಾಂಗ (ತೈಲ ಮಸಾಜ್) – ಪಿತ್ತ ನಿಯಂತ್ರಣ, ಚರ್ಮ ರಕ್ಷಣೆಗೆ ವಿರೇಚನ – ಪಿತ್ತ ಶೋಧನೆಗೆ ರಕ್ತಮೋಕ್ಷಣ (ಜಲೌಕಾವಚರಣ) – ಚರ್ಮದ ಪಿತ್ತ ವ್ಯಾಧಿಗಳಿಗೆ

> “ಶರದ್ ಕೃತಂ ವಿರೇಚನಂ ಪಿತ್ತವಿಕಾರೇ ಭೇಷಜಮ್” (ಸು.ಸಂ.) ಸೂಚನೆ: ಈ ಕ್ರಮಗಳನ್ನು ವೈದ್ಯ ಮೇಲ್ವಿಚಾರಣೆಯಲ್ಲಿ ಮಾತ್ರ ಮಾಡಬೇಕು 🌸 ಸಾರಾಂಶ ಶರದ್ ಋತುವಿನಲ್ಲಿ ಪಿತ್ತ ಪ್ರಬಲವಾಗುವುದರಿಂದ: ತುಪ್ಪ, ಹಾಲು, ಹಗುರ ಧಾನ್ಯ, ತಿಕ್ತ–ಕಷಾಯ–ಮಧುರ ರಸಯುಕ್ತ ಆಹಾರ ಸೇವಿಸಬೇಕು ದಿವಾಸ್ವಪ್ನ, ಖಾರ–ಹುಳಿ–ಉಪ್ಪು–ಭಾರಿ ಆಹಾರ ತಪ್ಪಿಸಬೇಕು ವೈದಕೀಯ ಮೇಲ್ವಿಚಾರಣೆಯಲ್ಲಿ ವಿರೇಚನ, ರಕ್ತಮೋಕ್ಷಣ ಮಾಡಿಸಿಕೊಳ್ಳಬೇಕು ಹಂಸೋದಕ ಬಳಸಿ ದೇಹ–ಮನಸ್ಸು ಶುದ್ಧಗೊಳಿಸಬೇಕು.

“ಸೂಚನೆ: ಈ ಲೇಖನವು ಆಯುರ್ವೇದ ತತ್ವಗಳನ್ನು ಹಂಚಿಕೊಂಡು ಮಾಹಿತಿ ನೀಡುವ ಉದ್ದೇಶಕ್ಕೆ ಬರೆಯಲಾಗಿದೆ. ನಿಮ್ಮ ದೇಹ–ಮನಸ್ಸಿನ ವೈಯಕ್ತಿಕ ಸ್ಥಿತಿ ಅನ್ವಯ, ದಯವಿಟ್ಟು ಆಯುರ್ವೇದ ವೈದ್ಯರಿಂದ ಸಲಹೆ ಪಡೆಯಿರಿ.”

 “ಋತುಸಹಜ ಜೀವನ – ದೋಷ ಶಮನ, ರೋಗ ನಿವಾರಣ.” 

* ಡಾ. ರಾಧಿಕಾ ಕೊಡ್ಲೆಕೆರೆ ಆಯುರ್ವೈದ್ಯೆ

PREV
Read more Articles on

Recommended Stories

ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ
ಇಂದು ಶ್ರೀ ಚಂದ್ರಶೇಖರ ಸ್ವಾಮೀಜಿ ಹುಟ್ಟೂರ ಜನ್ಮ ದಿನ ಸಂಭ್ರಮ