ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಸಂಚಾಲಕತ್ವದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೈವಸ್ಥಾನದ ಉಳ್ಳಾಯ ಮದಿಪು ಚಾವಡಿಯಲ್ಲಿ ನಡೆದ ಸಭಾ ಕಾರ್ಯಕ್ರಮ

ಮೂಲ್ಕಿ: ಧಾರ್ಮಿಕ ಕೇಂದ್ರಗಳು ನಮ್ಮ ಶ್ರದ್ಧಾ ಕೇಂದ್ರವಾಗಿದ್ದು ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವುದರ ಜೊತೆಗೆ ಕ್ಷೇತ್ರದ ಅಭಿವೃದ್ದಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು. ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಸಂಚಾಲಕತ್ವದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೈವಸ್ಥಾನದ ಉಳ್ಳಾಯ ಮದಿಪು ಚಾವಡಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಅಧ್ಯಕ್ಷ ಜಗನ್ನಾಥ ಕೋಟ್ಯಾನ್‌ ವಹಿಸಿದ್ದರು. ಕಾರ್ಯಕ್ರಮವನ್ನು ಪಂಚದೀಪ ಪ್ರಜ್ವಲನೆ ಮೂಲಕ ಉದ್ಯಮಿ ಕುಮಾರ್ ಬಂಗೇರ ಮುಂಬೈ ಉದ್ಘಾಟಿಸಿದರು. ಮಂಗಳೂರು ಅಸೋಸಿಯೇಶನ್ ಆಫ್‌ ಸೌದಿ ಅರೇಬಿಯ ಸ್ಥಾಪಕಾಧ್ಯಕ್ಷ ರವಿ ಎಲ್‌ ಕರ್ಕೇರ ಸೌದಿ ಅರೇಬಿಯ, ಬಿಲ್ಲವರ ಅಸೋಸಿಯೇಶನ್ ಮುಂಬೈ ಉಪಾಧ್ಯಕ್ಷ ಸುರೇಶ್ ಕುಮಾರ್ ಕದ್ರಿ, ಸಸಿಹಿತ್ಲುವಿನ ಸಾರಂತಾಯ ಗರೋಡಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಿ.ಬಿ ಕರ್ಕೇರ ಮತ್ತು ಬಿಲ್ಲವರ ಹಿತವರ್ಧಕ ಸಂಘ ಮುಂಬೈ ಅಧ್ಯಕ್ಷ ಸತೀಶ್ ಕೋಟ್ಯಾನ್ ಉದ್ಘಾಟಿಸಿದರು. ಸಾಂಸ್ಕೃತಿಕ ಕಲೋತ್ಸವಕ್ಕೆ ನಗಾರಿ ಬಾರಿಸುವ ಮೂಲಕ ಉದ್ಯಮಿ ವೇದಪ್ರಕಾಶ್ ಶ್ರೀಯಾನ್‌ ಚಾಲನೆ ನೀಡಿದರು.

ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಗಣೇಶ್ ಡಿ ಪೂಜಾರಿ, ಸಸಿಹಿತ್ಲು ಸಾರಂತಾಯ ಗರೋಡಿಯ ಕೋಶಾಧಿಕಾರಿ ಮಂಜೋಡಿ ದೇವು ಗುರಿಕಾರರು ಯಾನೆ ಎಸ್ ದಯಾನಂದ , ಜುಮಾದಿ ಪಾತ್ರಿ ದಾಮೋದರ ಪೂಜಾರಿ ಅಳಿವೆಕೋಡಿ, ಬಿಲ್ಲವರ ಹಿತವರ್ಧಕ ಸಂಘ ಮುಂಬೈ ಗೌರವ ಸಲಹೆಗಾರ ಲಕ್ಷ್ಮಣ್ ಸನಿಲ್, ಸುನಿತಾ ಸುವರ್ಣ, ಸಂಚಾಲಕ ಪದ್ಮನಾಭ ಸಸಿಹಿತ್ಲು, ಸಸಿಹಿತ್ಲು ಮಹಿಳಾ ಸಮಿತಿ ಅಧ್ಯಕ್ಷೆ ಶಕುಂತಳ ಭೋಜ ಬಂಗೇರ, ಗೌರವಾಧ್ಯಕ್ಷೆ ಲೀಲಾ ವಸಂತ ಪೂಜಾರಿ, ಜೀರ್ಣೋದ್ದಾರ ಸಮಿತಿ ಪುಷ್ಪ ದಯಾನಂದ್ , ಬ್ರಹ್ಮಕಲಶೋತ್ಸವ ಸಮಿತಿಯ ಸಂಯೋಜಕರಾದ ಅನಿಲ್ ಪೂಜಾರಿ, ಅಶೋಕ್ ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಸತೀಶ್‌ ಕೋಟ್ಯಾನ್‌ ಸ್ವಾಗತಿಸಿದರು. ಆಡಳಿತ ಸಮಿತಿಯ ಕಾರ್ಯದರ್ಶಿ ನವೀನ್‌ ಕುಮಾರ್‌ ವಂದಿಸಿದರು. ದಿಲೀಪ್‌ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಇಟಲಿ ಮತ್ತು ಫ್ರಾನ್ಸ್ ಪ್ರವಾಸಿಗರು ಸಾರಂತಾಯ ಗರೋಡಿಗೆ ಭೇಟಿ ನೀಡಿ ಮಾಹಿತಿ ಪಡೆದರು.