ಮಂಗ್ಳೂರಲ್ಲಿ ಇನ್ಮುಂದೆ ನೈಟ್‌ಲೈಫ್‌ಗೆ ಅನುಮತಿ

Published : Nov 24, 2026, 10:49 AM IST
Mangaluru Nightlife Govt Approval

ಸಾರಾಂಶ

ಮಂಗಳೂರು ನಗರದಲ್ಲಿ ರಾತ್ರಿ ವೇಳೆಯ ವ್ಯಾಪಾರ-ವಹಿವಾಟಿನ ಸಮಯವನ್ನು ರಾತ್ರಿ 11.45ರವರೆಗೆ ವಿಸ್ತರಿಸಲಾಗಿದ್ದು, ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ವ್ಯಾಪಾರ ವಹಿವಾಟು ನಿರ್ಬಂಧಿಸಿ ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಆದೇಶಿಸಿದ್ದಾರೆ.

ಮಂಗಳೂರು : ಮಂಗಳೂರು ನಗರದಲ್ಲಿ ರಾತ್ರಿ ವೇಳೆಯ ವ್ಯಾಪಾರ-ವಹಿವಾಟಿನ ಸಮಯವನ್ನು ರಾತ್ರಿ 11.45ರವರೆಗೆ ವಿಸ್ತರಿಸಲಾಗಿದ್ದು, ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ವ್ಯಾಪಾರ ವಹಿವಾಟು ನಿರ್ಬಂಧಿಸಿ ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಆದೇಶಿಸಿದ್ದಾರೆ.

ಮೊದಲು ರಾತ್ರಿ 10.30ರವರೆಗೆ ಅಂಗಡಿಗಳು ತೆರೆದಿಡಲು ಅವಕಾಶ

ಮಂಗಳೂರಿನಲ್ಲಿ ಈ ಮೊದಲು ರಾತ್ರಿ 10.30ರವರೆಗೆ ಅಂಗಡಿಗಳು ತೆರೆದಿಡಲು ಅವಕಾಶ ನೀಡಲಾಗಿತ್ತು. ಇದೀಗ ವ್ಯಾಪಾರ ವಹಿವಾಟು ಸಮಯವನ್ನು ರಾತ್ರಿ 11.45ರ ವರೆಗೆ ಅಧಿಕೃತವಾಗಿ ವಿಸ್ತರಿಸಲಾಗಿದೆ.

ಮಂಗಳೂರು ನಗರ ರಾತ್ರಿ 8ರ ವೇಳೆಗೆ ಸ್ತಬ್ಧವಾಗುತ್ತದೆ

ಮಂಗಳೂರು ನಗರ ರಾತ್ರಿ 8ರ ವೇಳೆಗೆ ಸ್ತಬ್ಧವಾಗುತ್ತದೆ. ಇಲ್ಲಿ ರಾತ್ರಿಯೂ ವ್ಯವಹಾರ ಚಟುವಟಿಕೆ ನಡೆಯಬೇಕು. ನೈಟ್‌ ಲೈಫ್‌ ಕಾಣಬೇಕು ಎಂದು ಈ ಹಿಂದೆ ಸಿಎಂ ಡಿ.ಕೆ.ಶಿವಕುಮಾರ್‌ ಪ್ರಸ್ತಾಪಿಸಿದ್ದರು. ಇದೀಗ ನೈಟ್‌ಲೈಫ್‌ಗೆ ಪೂರಕ ಎಂಬಂತೆ ರಾತ್ರಿ 11.45ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿರುವುದು ನಗರದ ಆರ್ಥಿಕ ಚಟುವಟಿಕೆಗಳಿಗೆ ಪೂರಕ ಎನ್ನುವಂತಾಗಲಿದೆ.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಹಿರಿಯರ ಬದುಕನ್ನು ಮಕ್ಕಳ ನಾಳೆಗಾಗಿ ನೆನಪಿಸಬೇಕಿದೆ: ಪ್ರೊ. ಧರ್ಮ
ಜಿಟಿಟಿಸಿಯಲ್ಲಿ ಕಸ ನಿರ್ವಹಣೆ ಕಾರ್ಯಾಗಾರ