ಶೋಷಿತ ಸಮುದಾಯಗಳ ಅನುಭವ ಕಥನವೇ ದಲಿತ ಸಾಹಿತ್ಯ: ರಾಮಯ್ಯ

KannadaprabhaNewsNetwork |  
Published : Sep 01, 2025, 01:03 AM IST
33 | Kannada Prabha

ಸಾರಾಂಶ

ಶೋಷಿತ ಸಮುದಾಯಗಳ ಅನುಭವ ಕಥನಗಳನ್ನು ಹಾಗೂ ಸಂವೇದನೆ ರಚಿಸುವುದರ ದಲಿತ ಸಾಹಿತ್ಯ. ಜೊತೆಗೆ ಅನ್ಯಾಯದ ವಿರುದ್ಧ ಮಾತನಾಡುವುದು ಮತ್ತು ಬರೆಯುವುದೇ ಬಂಡಾಯ ಸಾಹಿತ್ಯ. ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯೇ ದಲಿತ ಮತ್ತು ಬಂಡಾಯ ಸಾಹಿತ್ಯವನ್ನು ಹುಟ್ಟುಹಾಕಿದೆ. ದಲಿತ ಚಳವಳಿಯೇ ನಿಜವಾದ ಜಾತ್ಯತೀತ ಚಳವಳಿಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲಾ ಸಮುದಾಯಗಳನ್ನು ದಲಿತರು ಎಂದು ಕರೆಯುತ್ತಾರೆ. ದಲಿತ ಪ್ರಜ್ಞೆ ಎಲ್ಲ ಸಮುದಾಯಗಳ ಅನುಭವಗಳ ಕಥನವಾಗಿದೆ ಎಂದು ಮಂಡ್ಯ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುರಗಲವಾಡಿ ರಾಮಯ್ಯ ಅಭಿಪ್ರಾಯಪಟ್ಟರು.

ಮದ್ದೂರು ತಾಪಂ ಸಭಾಂಗಣದಲ್ಲಿ ಆಯೋಜಿಸಿದ ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟನೆ ಸಾಮಾಜಿಕ ಕ್ರಾಂತಿ ಹರಿಕಾರ ನಾರಾಯಣ ಗೌಡ ಜನ್ಮದಿನಾಚರಣೆ ಮತ್ತು ದಲಿತ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಮ ಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

ಶೋಷಿತ ಸಮುದಾಯಗಳ ಅನುಭವ ಕಥನಗಳನ್ನು ಹಾಗೂ ಸಂವೇದನೆ ರಚಿಸುವುದರ ದಲಿತ ಸಾಹಿತ್ಯ. ಜೊತೆಗೆ ಅನ್ಯಾಯದ ವಿರುದ್ಧ ಮಾತನಾಡುವುದು ಮತ್ತು ಬರೆಯುವುದೇ ಬಂಡಾಯ ಸಾಹಿತ್ಯ. ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯೇ ದಲಿತ ಮತ್ತು ಬಂಡಾಯ ಸಾಹಿತ್ಯವನ್ನು ಹುಟ್ಟುಹಾಕಿದೆ. ದಲಿತ ಚಳವಳಿಯೇ ನಿಜವಾದ ಜಾತ್ಯತೀತ ಚಳವಳಿಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟನೆಗೊಳಿಸಿ ಮಾತನಾಡಿದ ಡಯಟ್ ‌ನ ನಿವೃತ್ತ ಶಿಕ್ಷಕ ಗುರುಮೂರ್ತಿ ಅವರು, ದಲಿತ ಸಾಹಿತ್ಯ ಹೋರಾಟದ ಹಾಡುಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯವಾಗಿದೆ. ವ್ಯವಸ್ಥೆಯ ವಿರುದ್ದ ಪ್ರಶ್ನೆ ಮಾಡುವುದೆ ಮೂಲಕ ದಲಿತ ಪ್ರಜ್ಞೆ ಹುಟ್ಟಿಕೊಂಡಿತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಣಿ ಐಶ್ವರ್ಯ ಡೆವಲಪರ್ಸ್ ಮಾಲೀಕ ಎಚ್.ಎಲ್. ಸತೀಶ್ ಅವರು ದಲಿತ ಸಾಹಿತ್ಯ ಸಂವೇದನೆಯ ಲೇಖಕ ಡಾ. ಹೊಂಬಯ್ಯ ಹೊನ್ನಲಗೆರೆ, ಬಿ.ಎಲ್. ಮಧುಸೂದನ್ ಮತ್ತು ಸರೋಜಮ್ಮ ಅವರಿಗೆ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

ದಸಾಪ ತಾಲೂಕು ಗೌರವ ಅಧ್ಯಕ್ಷ ಹನುಮಂತ ರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವ ಅಧ್ಯಕ್ಷೆ ಸುಶೀಲಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೊಪ್ಪ, ಬೆಸಗರಹಳ್ಳಿ ಸತ್ಯ, ದಸಾಪ ತಾಲೂಕು ಅಧ್ಯಕ್ಷ ಕೆ.ಟಿ. ಶಿವಕುಮಾರ್, ಬಿಇಒ ಧನಂಜಯ, ಡಿ.ಸಿ. ಮಹೇಂದ್ರ, ಕೆ.ಜೆ. ಗೋವಿಂದ ರಾಜ್ ರಾಚಯ್ಯ, ಶ್ರೀನಿವಾಸ, ಚಂದ್ರಶೇಖರ್ ಇದ್ದರು.

ಮದ್ದೂರು ತಾಲೂಕು ಘಟಕದ ಅಧ್ಯಕ್ಷ ಕೆ.ಟಿ. ಶಿವಕುಮಾರ್ ಪ್ರಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಕಾರ್ಕಳ್ಳಿ ಬಸವರಾಜು ಸ್ವಾಗತಿಸಿದರು, ಕಸಬಾ ಹೋಬಳಿ ಅಧ್ಯಕ್ಷ ಡಾ.ಬಿ.ಕೆ. ಪ್ರಕಾಶ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಚ್. ಮಲ್ಲಿಕೇಶ ವಂದಿಸಿದರು.

ವಿದ್ಯಾರ್ಥಿಯಾಗಿದ್ದಾಗಲೇ ದಲಿತ ಚಳವಳಿಯ ಆಕರ್ಷಣೆಕ್ಕೊಳಗಾದೆ. ಮೈಸೂರು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಸಮುದಾಯದ ಜನರನ್ನು ಒಳಗೊಂಡು ವೇದಿಕೆ ಕಲ್ಪಿಸಿಕೊಡುವ ಸಂಘಟನೆಯಾಗಿ ದಲಿತ ಸಾಹಿತ್ಯ ಪರಿಷತ್ತು ರೂಪುಗೊಳ್ಳಲಿ. ಎಲ್ಲಾ ಪ್ರಶಸ್ತಿ ಗಳಿಗಿಂತಲೂ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನನಗೆ ತುಂಬಾ ಸಂತೋಷ ತಂದಿದೆ. ಈ ಕಾರಣಕ್ಕೆ ನನ್ನ ತಂದೆಯ ಹೆಸರಿನಲ್ಲಿ ಜನಪದ ವೈದ್ಯ ಪ್ರಶಸ್ತಿ ನೀಡಲು ರಾಜ್ಯ ಘಟಕಕ್ಕೆ 25 ಸಾವಿರ ದತ್ತಿ ನೀಡುತ್ತೇನೆ.

- ಡಾ. ಹೊಂಬಯ್ಯ ಹೊನ್ನಲಗೆರೆ, ದಲಿತ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತರು

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ