ಜಾತಿ ಹೆಸರಲ್ಲಿ ದಲಿತರಿಗೇ ಶೋಷಣೆ: ಎಐಡಿಆರ್‌ಎಂ ರಾಜ್ಯಾಧ್ಯಕ್ಷ ಡಾ.ಜನಾರ್ದನ್

KannadaprabhaNewsNetwork |  
Published : Jun 09, 2025, 02:04 AM IST
ಕ್ಯಾಪ್ಷನ8ಕೆಡಿವಿಜಿ34 ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಜಿಲ್ಲಾ ಸಮ್ಮೇಳನವನ್ನು ಡಾ.ಜನಾರ್ಧನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶತಶತಮಾನಗಳಿಂದ ಕೇವಲ ಜಾತಿಯ ಕಾರಣಕ್ಕೆ ಅತೀ ಹೆಚ್ಚು ಶೋಷಣೆಗೆ ಒಳಗಾದವರು ದಲಿತರು ಮಾತ್ರ ಎಂದು ಎಐಡಿಆರ್‌ಎಂ ರಾಜ್ಯ ಅಧ್ಯಕ್ಷ ಡಾ.ಜನಾರ್ದನ್ ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಜಿಲ್ಲಾ ಸಮ್ಮೇಳನ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶತಶತಮಾನಗಳಿಂದ ಕೇವಲ ಜಾತಿಯ ಕಾರಣಕ್ಕೆ ಅತೀ ಹೆಚ್ಚು ಶೋಷಣೆಗೆ ಒಳಗಾದವರು ದಲಿತರು ಮಾತ್ರ ಎಂದು ಎಐಡಿಆರ್‌ಎಂ ರಾಜ್ಯ ಅಧ್ಯಕ್ಷ ಡಾ.ಜನಾರ್ದನ್ ಬೇಸರ ವ್ಯಕ್ತಪಡಿಸಿದರು.

ನಗರದ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದ ಶರಣರು ಈ ಸಮಸ್ಯೆಗೆ ಅಂದೇ ಉತ್ತರ ಹೇಳಿದ್ದಾರೆ. ಸಮ ಸಮಾಜದ ಕನಸನ್ನು ಕಟ್ಟುವವರ ಆಶಯಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕೆಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಭೂಮಿ ಸರ್ಕಾರದ ಕೈಯಲ್ಲಿರಬೇಕು, ಕೈಗಾರಿಕೆಗಳು ಸಾರ್ವಜನಿಕ ಸ್ವತ್ತಾಗಬೇಕು ಎಂದು ಅಂಬೇಡ್ಕರ್ ಹೇಳಿದರು. ಇಂತಹ

ಮಹಿಳೆಯನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಈ ಸಮಾಜ ಅದರಲ್ಲೂ ದಲಿತ ಮಹಿಳೆಯರನ್ನು ತುಂಬಾ ಕೀಳಾಗಿ ಕಾಣುತ್ತಿದ್ದು, ದೇವದಾಸಿ ಪದ್ಧತಿಯಲ್ಲಿರುವವರು ದಲಿತ ಮಹಿಳೆಯರು ಮಾತ್ರ. ಇದನ್ನು ನಾವು ಜಾಗೃತಿ ಮೂಡಿಸುವುದರ ಮೂಲಕ ಹೋಗಲಾಡಿಸಬೇಕಾಗಿದೆ ಎಂದು ನುಡಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಕಾರ್ಯಕರ್ತರು ಹಳ್ಳಿಗಳಿಗೆ, ನಗರದ ಕೆಲವು ಭಾಗಗಳಿಗೆ ತೆರಳಿ ಎಲ್ಲಾ ಜಾತಿಯ ಬಡವರ ಪರವಾಗಿ ಅವರ ಹಕ್ಕುಗಳನ್ನು ಕೊಡಿಸಲು ಸಂಘಟನೆ ಮಾಡುವುದರ ಮೂಲಕ ಸಂಘಟನೆ ಬಲವರ್ಧನೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಎಚ್.ಜಿ.ಉಮೇಶ್, ಮುಖಂಡರಾದ ಪಿ.ಷಣ್ಮುಖಸ್ವಾಮಿ, ಎಸ್.ಎಸ್.ಮಲ್ಲಮ್ಮ, ವಿ.ಲಕ್ಷ್ಮಣ, ಜಿ.ಯಲ್ಲಪ್ಪ, ನರೇಗಾ ರಂಗನಾಥ್, ಶೇಖರ ನಾಯಕ್ ಮತ್ತಿತರರು ಮಾತನಾಡಿದರು.

ಯುವ ಮುಖಂಡ ಕೆರನಳ್ಳಿ ರಾಜು ಸ್ವಾಗತಿಸಿದರೆ, ಎ.ತಿಪ್ಪೇಶ್ ವಂದಿಸಿದರು, ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಕೆ.ಬಾನಪ್ಪ ಕಾರ್ಯಕ್ರಮ ನಿರೂಪಿಸಿದರು.

ದಲಿತ ಸಂಘಟನೆಗಳನ್ನು ಪುನಶ್ಚೇತನ ಮಾಡಬೇಕಿದೆ

1920ಕ್ಕಿಂತ ಮೊದಲಿನಿಂದಲೂ ದಲಿತ ಹಕ್ಕುಗಳಿಗಾಗಿ ಸಿಪಿಐ ಹೋರಾಟ ಮಾಡುತ್ತ ಬಂದಿದೆ. ಕೆಲವರು ಇದನ್ನು ದಿಕ್ಕು ತಪ್ಪಿಸುವ ಸಲುವಾಗಿ ಅಪಪ್ರಚಾರ ಮಾಡುವವರಿದ್ದಾರೆ. ಶೋಷಿತ ಸಮುದಾಯದ ಮಧ್ಯೆ ನಿರಂತರವಾಗಿ ಹೋರಾಡುತ್ತ ಬಂದಿದೆ. ನಾವು ಅದನ್ನು ಒಂದು ಆಂದೋಲನವೆಂದು ಕರೆಯುತ್ತೇವೆ. ಏಕೆಂದರೆ ಎಲ್ಲಾ ದಲಿತ ಸಂಘಟನೆಗಳನ್ನು ಸೇರಿಸಿಕೊಂಡು ಹೋರಾಟ ಮಾಡುವ ಉದ್ದೇಶದಿಂದ ದೂರ ದೃಷ್ಟಿಯ ಆಲೋಚನೆಯಿಂದಾಗಿ ದಲಿತ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. 80ರ ದಶಕದಲ್ಲಿ ತುಂಬಾ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಲಿತ ಸಂಘಟನೆಗಳು ವಿಘಟನೆಗೊಂಡಿದೆ. ಈಗ ಅದನ್ನು ಪುನಶ್ಚೇತನ ಮಾಡಬೇಕಾಗಿದೆ ಎಂದು ಡಾ.ಜನಾರ್ದನ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''