ತಾಲೂಕು ಮಟ್ಟದ ಜಾನಪದ ಗೀತೆ ಗಾಯನ ಸ್ಪರ್ಧೆ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕು ಮತ್ತು ಕಸಬಾ ಹೋಬಳಿ ಘಟಕಗಳು ಹಾಗೂ ಚಂಡಿಕೇಶ್ವರಿ ಭಜನಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಜಾನಪದ ಗೀತೆ ಗಾಯನ ಸ್ಪರ್ಧೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಹಾಗೂ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಮೌಲ್ಯಾಧಾರಿತ ತತ್ವ ಸಿದ್ಧಾಂತವನ್ನು ಜಾನಪದ ಸಂಸ್ಕೃತಿ, ಸಂಗೀತ, ಕಲೆ ಹೊಂದಿವೆ. ಆದ್ದರಿಂದ ಕುಟುಂಬದ ಹಿರಿಯರಾದ ನಾವುಗಳು ಮಕ್ಕಳಿಗೆ ಮನೆಯಲ್ಲಿ ಚಿಕ್ಕಂದಿನಿಂದಲೇ ಜಾನಪದದ ಬಗ್ಗೆ ಅರಿವು ಮತ್ತು ಉತ್ಸಾಹ ಉಂಟು ಮಾಡಬೇಕು ಎಂದರು.ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್ ಮಾತನಾಡಿ ಜಾನಪದವೆಂದರೆ ಬರಿ ಹಾಡಲ್ಲ, ಈ ಸಂಸ್ಕೃತಿಯಲ್ಲಿ ೨೫೦ಕ್ಕೂ ಹೆಚ್ಚು ಮೌಲ್ಧಾರಿತ ಕಲಾ ಪ್ರಕಾರಗಳಿವೆ. ಈ ಕಲೆಗಳಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ತತ್ವ ಸಿದ್ಧಾಂತಗಳಿವೆ. ನೈತಿಕ ಮೌಲ್ಯಗಳಿವೆ. ಆದ್ದರಿಂದ ಜಾನಪದ ಉಳಿದು ಬೆಳೆಯಲು ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮದ ವೇದಿಕೆಗಳಲ್ಲಿ ಜಾನಪದ ಕಲೆಗಳಿಗೆ ಅವಕಾಶ ದೊರೆಯಬೇಕು. ಆರೋಗ್ಯ ವಂತ ಸಮಾಜ ನಿರ್ಮಾಣ ಜಾನಪದ ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದರು.ಮುಖ್ಯ ಅತಿಥಿಗಳಾಗಿದ್ದ ಕಜಾಪ ತಾಲೂಕು ಅಧ್ಯಕ್ಷ ದಿವಾಕರ್ ಭಟ್, ಮಾತನಾಡಿ ಕೊಪ್ಪ ಕಸಬಾ ಹೋಬಳಿ ಅಧ್ಯಕ್ಷೆ ಶ್ಯಾಮಲಾ ಮತ್ತು ತಂಡದವರು ಕೊಪ್ಪ ತಾಲೂಕು ಮಟ್ಟದ ಜಾನಪದ ಗೀತೆ ಗಾಯನ ಸ್ಪರ್ಧೆ ಏರ್ಪಡಿಸಿ ತಾಲೂಕಿನ ಎಲ್ಲ ಜನಪದ ಕಲಾವಿದರಿಗೆ ವೇದಿಕೆ ದೊರಕಿಸಿ ಕೊಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಪಂ ಮಟ್ಟದಲ್ಲಿ ಸಮ್ಮೇಳನ ಮತ್ತು ಜಾನಪದ ಕಲಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಕಾರ್ಯಕ್ರಮ ಆಯೋಜಿಸಿದ್ದ ಕಸಬಾ ಹೋಬಳಿ ಅಧ್ಯಕ್ಷೆ ಶ್ಯಾಮಲ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ಸಂಸ್ಕೃತಿಯ ಬೆನ್ನೆಲುಬಾದ ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಇಂದಿನ ಯುವಕ ಯುವತಿಯರ ಮೇಲಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು. ನಾರ್ವೆಅಶೋಕ್, ಪರಿಷತ್ತು ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ರಂಗಕರ್ಮಿ ರಾಮಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಂಡಿಕೇಶ್ವರಿ ಭಜನಾ ಮಂಡಳಿ ಎಲ್ಲ ಸದಸ್ಯರು, ಕಲಾವಿದ ಕುಂಚೂರು ರತ್ನಾಕರ್ ಗಾಯಕಿ ಸೀತಾ ಲಕ್ಷ್ಮಿ, ಸಂತೋಷ್ ಮುಂತಾದವರಿದ್ದರು.