ಭಾರತದಲ್ಲಿ ಇಂದಿಗೂ ದಲಿತರಿಗೆ ಸಂಪೂರ್ಣ ನ್ಯಾಯವೇ ದೊರೆತಿಲ್ಲ: ತಮ್ಮಣ್ಣ

KannadaprabhaNewsNetwork |  
Published : Dec 08, 2025, 02:00 AM IST
ಹೊನ್ನಾಳಿ ಫೋಟೋ 6ಎಚ್.ಎಲ್.ಐ1 ದಲಿತ ಮತ್ತು ವಿವಿಧ ಹಿಂದುಳಿದ ಸಮುದಾಯಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಶನಿವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ  ಮಹಾಪರಿನಿರ್ವಾಣ ದಿನಾಚರಣೆ ಆಚರಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ  ಮುಖಂಡರು ಮಾತನಾಡಿದರು. | Kannada Prabha

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳೇ ಗತಿಸಿದರೂ ದಲಿತ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ನ್ಯಾಯ ಸಂಪೂರ್ಣವಾಗಿ ಸಿಕ್ಕಿಲ್ಲ ಎಂದು ದಲಿತ ಮುಖಂಡ ಹಾಗೂ ಟಿಎಪಿಸಿಎಂಎಸ್‌ ಉಪಾಧ್ಯಕ್ಷ ದಿಡಗೂರು ಜಿ.ಎಚ್. ತಮ್ಮಣ್ಣ ವಿಷಾದಿಸಿದ್ದಾರೆ.

- ಹೊನ್ನಾಳಿಯಲ್ಲಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ

- - -

ಹೊನ್ನಾಳಿ: ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳೇ ಗತಿಸಿದರೂ ದಲಿತ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ನ್ಯಾಯ ಸಂಪೂರ್ಣವಾಗಿ ಸಿಕ್ಕಿಲ್ಲ ಎಂದು ದಲಿತ ಮುಖಂಡ ಹಾಗೂ ಟಿಎಪಿಸಿಎಂಎಸ್‌ ಉಪಾಧ್ಯಕ್ಷ ದಿಡಗೂರು ಜಿ.ಎಚ್. ತಮ್ಮಣ್ಣ ವಿಷಾದಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ದಲಿತ ಮತ್ತು ವಿವಿಧ ಹಿಂದುಳಿದ ಸಮುದಾಯಗಳಿಂದ ನಡೆದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 69ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಇಂದು ಇಡೀ ವಿಶ್ವವೇ ಗೌರವಿಸುವಂತಹ ಅತ್ಯದ್ಭುತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್. ಅವರು 1956ರ ಡಿ.6ರಂದು ಇಹಲೋಕ ತ್ಯಜಿಸಿದ್ದರು. ಈ ದಿನವನ್ನು ಮಹಾಪರಿನಿರ್ವಾಣ ದಿನವಾಗಿ ದೇಶವಾಸಿಗಳು, ಅದರಲ್ಲೂ ದಲಿತ ಮತ್ತು ಹಿಂದುಳಿದ ಸಮುದಾಯದವರು ಪವಿತ್ರ ದಿನವಾಗಿ ಭಾವಿಸಿ ಆಚರಿಸುತ್ತಿದ್ದಾರೆ. ಒಳಮೀಸಲಾತಿಯಡಿ ದಲಿತ ಮತ್ತು ಹಿಂದುಳಿದವರು ಅವಕಾಶಗಳನ್ನು ಬಳಸಿ ಹೆಚ್ಚು ಶಿಕ್ಷಿತರಾಗಿ ಸೌಲಭ್ಯಗಳನ್ನು ಪಡೆಯಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ಎಂ.ಆರ್.ಮಹೇಶ್ ಮಾತನಾಡಿ, ದೇಶದ ಜನರಿಗೆ ಅಂಬೇಡ್ಕರ್ ಅವರು ವಿದ್ಯಾವಂತರಾಗಿ, ಸಂಘಟಿತರಾಗಿ ಹಾಗೂ ಉತ್ತೇಜಿತರಾಗಿ ಎಂಬ 3 ವಾಕ್ಯಗಳ ಘೋಷಣೆಯನ್ನು ಬಿಟ್ಟುಹೋಗಿದ್ದಾರೆ. ನಾವು ಇವುಗಳನ್ನು ಜೀವನದಲ್ಲಿ ಪರಿಪಾಲಿಸುವ ಮೂಲಕ ಅವರ ಕನಸು, ನಿರೀಕ್ಷೆಗಳನ್ನು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಾಕಾರಗೊಳಿಸಬೇಕಾಗಿದೆ ಎಂದರು.

ಹಾಲುಮತ ಮಹಾಸಭಾ ಅಧ್ಯಕ್ಷ ರಾಜು ಕಡಗಣ್ಣಾರ ಮಾತನಾಡಿದರು. ಒಳಮೀಸಲಾತಿ ಹೋರಾಟದಲ್ಲಿ ಉತ್ತಮ ರೀತಿಯಲ್ಲಿ ತೊಡಗಿಸಿಕೊಂಡವರಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಮಾರಿಕೊಪ್ಪದ ಮಂಜಪ್ಪ, ಕುರುವ ಮಂಜುನಾಥ,ಕ್ಯಾಸಿನಕೆರೆ ಶೇಖರಪ್ಪ ಅವರು ಅಂಬೇಡ್ಕರ್ ಕುರಿತು ಮಾತನಾಡಿದರು. ನ್ಯಾಮತಿ ಚಂದ್ರಪ್ಪ, ಹಾಲೇಶ, ದಲಿತ ಮತ್ತು ಹಿಂದುಳಿದ ಸಮುದಾಯಗಳ ಮುಖಂಡರು ಇದ್ದರು.

- - -

-6ಎಚ್.ಎಲ್.ಐ1: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌