ಬೆಂಗಳೂರಿಗೆ ನೀರು ಸರಬರಾಜಾಗುವ 2100 ಎಂಎಂ ಸುತ್ತಳತೆಯ ಕಬ್ಬಿಣದ ಪೈಪ್‌ಗೆ ಹಾನಿ : ನೀರು ಪೋಲು

KannadaprabhaNewsNetwork | Updated : Dec 24 2024, 12:19 PM IST

ಸಾರಾಂಶ

ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯಿಂದ ಬೆಂಗಳೂರು ಮಹಾನಗರಕ್ಕೆ ನೀರು ಕೊಂಡೊಯ್ಯುತ್ತಿರುವ 2100 ಎಂಎಂ ಸುತ್ತಳತೆಯ 250 ಎಂಎಲ್ ಸಾಮರ್ಥ್ಯವುಳ್ಳ ನೀರಿನ ಪೈಪ್ ವಾಲ್ ನಾಟ್ (ಬಾಲು) ಗೆ ಹಾನಿಯಾಗಿ ನೀರು ರಭಸವಾಗಿ ಹೊರ ಚಿಮ್ಮುತ್ತಿದ್ದ ದೃಶ್ಯ ಕಂಡು ಬಂತು.

 ಹಲಗೂರು :  ತೊರೆಕಾಡನಹಳ್ಳಿಯಿಂದ ಬೆಂಗಳೂರು ನೀರು ಸರಬರಾಜು ಆಗುವ ನೀರಿನ ಪೈಪ್‌ನ ವಾಲ್ ನಟ್‌ಗೆ ಹಾನಿಯಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾದ ಘಟನೆ ಗುಂಡಾಪುರ ಗ್ರಾಮದ ಬಳಿ ಸೋಮವಾರ ನಡೆದಿದೆ.

ಗ್ರಾಮದ ಶಿವಲಿಂಗೇಗೌಡರ ಜಮೀನಿನ ಬಳಿ ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯಿಂದ ಬೆಂಗಳೂರು ಮಹಾನಗರಕ್ಕೆ ನೀರು ಕೊಂಡೊಯ್ಯುತ್ತಿರುವ 2100 ಎಂಎಂ ಸುತ್ತಳತೆಯ 250 ಎಂಎಲ್ ಸಾಮರ್ಥ್ಯವುಳ್ಳ ನೀರಿನ ಪೈಪ್ ವಾಲ್ ನಾಟ್ (ಬಾಲು) ಗೆ ಹಾನಿಯಾಗಿ ನೀರು ರಭಸವಾಗಿ ಹೊರ ಚಿಮ್ಮುತ್ತಿದ್ದ ದೃಶ್ಯ ಕಂಡು ಬಂತು.

ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿ ಹರಿದು ಹೋಗುತ್ತಿರುವುದು ಹಾಗೂ ಚಿಮ್ಮುತ್ತಿರುವ ದೃಶ್ಯವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದರು.

ವಿಷಯ ತಿಳಿದ ತಕ್ಷಣ ಬಿಡಬ್ಲ್ಯೂ ಎಸ್‌ಎಸ್‌ಬಿ ಎಇಇ ರಘು, ಎಇ ವಿನೋದ್ ತಕ್ಷಣ ತಮ್ಮ ಸಿಬ್ಬಂದಿಯವರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಕೆಲಕಾಲ ಬೆಂಗಳೂರಿಗೆ ಸರಬರಾಜು ಆಗುತ್ತಿರುವ ನೀರನ್ನು ಸ್ಥಗಿತಗೊಳಿಸಿ ಡ್ಯಾಮೇಜ್ ಆಗಿದ್ದ ಬಾಲ್ ವಾಲ್ ನಟ್ ಸರಿ ಮಾಡಿರುವುದಾಗಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ.ಕೆ .ನರೇಶ್ ತಿಳಿಸಿದ್ದಾರೆ.

ರೈತ ಮುಖಂಡ ಕೂಡಲಕುಪ್ಪೆ ಸೋಮಣ್ಣರಿಗೆ ಸನ್ಮಾನ

ಶ್ರೀರಂಗಪಟ್ಟಣ:  ರೈತರ ದಿನಾಚರಣೆ ಪ್ರಯುಕ್ತ ರಾಜ್ಯ ಒಕ್ಕಲಿಗರ ಕೆಂಪೇಗೌಡ ಯುವಶಕ್ತಿ ವೇದಿಕೆಯಿಂದ ರೈತ ಕೂಡಲಕುಪ್ಪೆ ಸೋಮಣ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಕೆಂಪೇಗೌಡ ಯುವಶಕ್ತಿ ವೇದಿಕೆ ತಾಲೂಕು ಅಧ್ಯಕ್ಷರು ಕಾಳೆನಹಳ್ಳಿ ಮಹೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಂದಗಾಲ್ ಶಂಕರ್, ನಾಗೇಶ್, ಮಧು, ಪ್ರಶಾಂತ್, ನಾಗಣ್ಣ, ವಿಶ್ವ, ರಘು, ಆನಂದಣ್ಣ, ಲೋಕೇಶ್, ವೆಂಕಟೇಶ್ ಸೇರಿದಂತೆ ಇತರರು ಇದ್ದರು.

28ಕ್ಕೆ ಬಿಎಂಶ್ರೀ ದಿನಾಚರಣೆ

ಮಂಡ್ಯ:  ಜಿಲ್ಲಾ ಬಬ್ಬೂರುಕಮ್ಮೆ ಸೇವಾ ಬಳಗದ ವತಿಯಿಂದ ಡಿ.25 ರಂದು ಕನ್ನಡದ ಕಣ್ವ ಬಿ.ಎಂ.ಶ್ರೀ. ದಿನಾಚರಣೆ ನಗರದ ಬ್ರಾಹ್ಮಣ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ನಗರಸಭೆ ಅಧ್ಯಕ್ಷ ಎಂ.ವಿ.ನಾಗೇಶ್ (ಪ್ರಕಾಶ್) ಕಾರ್ಯಕ್ರಮ ಉದ್ಘಾಟಿಸುವರು. ಬಳಗದ ಅಧ್ಯಕ್ಷ ಎನ್.ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಬಳಗದ ಗೌರವಾಧ್ಯಕ್ಷ ಬೆಳ್ಳೂರು ಎಸ್.ಶಿವರಾಂ, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎಸ್.ನರಸಿಂಹಮೂರ್ತಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ನಿವೃತ್ತ ತಹಸೀಲ್ದಾರ್ ಸೋಮಕುಮಾರ್, ನಿವೃತ್ತ ಉಪನ್ಯಾಸಕ ಆರ್.ಶಿವರಾಮುರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯದರ್ಶಿ ಕೆ.ಸೂರ್ಯಪ್ರಕಾಶ್ ತಿಳಿಸಿದ್ದಾರೆ.

ಫೆ.15 ಅರ್ಜಿ ಸಲ್ಲಿಸಲು ಕೊನೆ ದಿನ

ಮಂಡ್ಯ:  ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು 2024-25 ನೇ ಸಾಲಿನ 2024-25 ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ಓದುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.15 ಕೊನೆ ದಿನವಾಗಿದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Share this article