ದಾಂಡೇಲಿ ನಗರಸಭೆ: ₹20 ಲಕ್ಷ ಉಳಿತಾಯ ಬಜೆಟ್‌ ಮಂಡನೆ

KannadaprabhaNewsNetwork |  
Published : Mar 11, 2026, 02:30 AM IST
ಎಚ್‌೦೯.೩-ಡಿಎನ್‌ಡಿ೧: ನಗರ ಸಭೆಯ ೨೦೨೬-೨೭ನೇ ಸಾಲಿನ ಬಜಟ್ ಮಂಡಿಸಿದ ಪೌರಾಯುಕ್ತ ವಿವೇಕ ಬನ್ನೆ | Kannada Prabha

ಸಾರಾಂಶ

ರಸ್ತೆ, ಚರಂಡಿ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಬೀದಿ ದೀಪ ನಿರ್ವಹಣೆ, ನಗರ ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ಸೇರಿದಂತೆ ನಗರಸಭೆಯಲ್ಲಿ ಒಟ್ಟು ೬೨,೯೫,೮೬,೧೯೩ ಜಮಾ ಮತ್ತು ಒಟ್ಟು ₹೬೨,೭೫,೨೪,೯೩೩ ಖರ್ಚು ಸೇರಿದಂತೆ ೨೦,೬೧,೭೬೦ ಉಳಿತಾಯ ಬಜೆಟ್‌ನ್ನು ಮಂಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ದಾಂಡೇಲಿ

ರಸ್ತೆ, ಚರಂಡಿ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಬೀದಿ ದೀಪ ನಿರ್ವಹಣೆ, ನಗರ ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ಸೇರಿದಂತೆ ನಗರಸಭೆಯಲ್ಲಿ ಒಟ್ಟು ₹೬೨,೯೫,೮೬,೧೯೩ ಜಮಾ ಮತ್ತು ಒಟ್ಟು ₹೬೨,೭೫,೨೪,೯೩೩ ಖರ್ಚು ಸೇರಿದಂತೆ ₹೨೦,೬೧,೭೬೦ ಉಳಿತಾಯ ಬಜೆಟ್‌ನ್ನು ಮಂಡಿಸಲಾಗಿದೆ.

ಶಾಸಕ ಆರ್.ವಿ. ದೇಶಪಾಂಡೆ ಉಪಸ್ಥಿತಿಯಲ್ಲಿ ಪೌರಾಯುಕ್ತ ವಿವೇಕ ಬನ್ನೆ ೨೦೨೬-೨೭ನೇ ಸಾಲಿನ ನಗರಸಭೆಯ ಆಯವ್ಯಯ ಮಂಡಿಸಿ, ಈ ಬಜೆಟ್‌ಗೆ ನಗರಸಭೆಯ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ಸಮ್ಮತಿ ಪಡೆಯಲಾಗಿದೆ ಎಂದು ತಿಳಿಸಿದರು.

ಅಂದಾಜು ಆದಾಯ ಮೂಲ:

ಸಿಬ್ಬಂದಿ ವೇತನ ಅನುದಾನ ₹೪.೫ ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಬಿಲ್ಲ ಅನುದಾನ ₹೬ ಕೋಟಿ, ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಅನುದಾನ ₹೧.೩೫ ಕೋಟಿ, ಸಿಎಂಐಡಿಪಿ ಅನುದಾನ ₹೧೧,೪೮,೧೦,೦೦೦, ೧೬ನೇ ಹಣಕಾಸು ಅನುದಾನ ₹೩ ಕೋಟಿ, ಸ್ವಚ್ಛ ಭಾರತ ಮಿಷನ್ (೨.೦) ಅನುದಾನ ₹೫ ಕೋಟಿ, ಅಮೃತ (೨.೦) ಅನುದಾನ ₹೧ ಕೋಟಿ, ಆಸ್ತಿ ತೆರಿಗೆ ₹೩.೫ ಕೋಟಿ, ನೀರಿನ ಕಂದಾಯ ₹೨.೫ ಕೋಟಿ, ವಾಣಿಜ್ಯ ಮಳಿಗೆ ಬಾಡಿಗೆ ₹೭೫ ಲಕ್ಷ, ಯುಜಿಡಿ ತೆರಿಗೆ ₹೩೫ ಲಕ್ಷ, ಟ್ರೇಡ್ ಲೈಸನ್ಸ್ ಫೀ ₹೧೫ ಲಕ್ಷ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ ₹೧೫ ಲಕ್ಷ, ಎಸ್‌ಎಫ್‌ಸಿ, ಎಸ್‌ಸಿಎಸ್‌ಪಿ ಅನುದಾನ ₹೨೦ ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ ₹೧೨ ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನ ₹೮೫ ಲಕ್ಷ ಸೇರಿದಂತೆ ಒಟ್ಟು ₹೬೨,೯೫,೮೬,೧೯೬ಗಳ ಆದಾಯದ ಮೂಲ ತೋರಿಸಲಾಗಿದೆ.

ಅಂದಾಜು ಖರ್ಚು ವಿವರ:

ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ₹೨ ಕೋಟಿ, ರಸ್ತೆಗಳ ನಿರ್ಮಾಣ ಮತ್ತು ನವೀಕರಣಕ್ಕೆ ₹೮ ಕೋಟಿ, ರಸ್ತೆ ಬದಿಯ ಚರಂಡಿ ನಿರ್ಮಾಣ, ನಿರ್ವಹಣೆ ಮತ್ತು ಸ್ಲ್ಯಾಬ್ ಅಳವಡಿಕೆಗೆ ₹೮ ಕೋಟಿ, ನಗರ ವ್ಯಾಪ್ತಿಯಲ್ಲಿ ಹೊಸ ಬೀದಿ ದೀಪಗಳ ಅಳವಡಿಕೆಗೆ ₹೪೦ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಹೊಸ ಯಂತ್ರೋಪಕರಣಗಳ ಖರೀದಿಗೆ ₹೨ ಕೋಟಿ, ನೀರು ಸರಬರಾಜು ಸಂಬಂಧಿಸಿದ ಕಾಮಗಾರಿಗಳಿಗೆ ₹೯೦ ಲಕ್ಷ, ಯುಜಿಡಿ ನಿರ್ವಹಣೆ ಮತ್ತು ದುರಸ್ತಿಗೆ ₹೭೦ ಲಕ್ಷ, ಹೊಸ ವಾಹನಗಳ ಖರೀದಿಗೆ ₹೭೦ ಲಕ್ಷ ಸೇರಿ ₹೬೨,೭೫,೨೪,೯೩೩ ಗಳ ಒಟ್ಟು ಖರ್ಚನ್ನು ತೋರಿಸಲಾಗಿದೆ.

ಪ.ಜಾತಿ, ಪಂಗಡಗಳ ಮತ್ತು ಇತರೆ ಬಡ ಜನಾಂಗ ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಒಟ್ಟು ₹೩೮,೩೩,೦೧೮ಗಳನ್ನು ಮೀಸಲಿರಿಸಲಾಗಿದೆ. ಜೊತೆಗೆ ನಗರದ ಸೌಂದರ್ಯೀಕರಣಕ್ಕಾಗಿ ₹೨೫ ಲಕ್ಷ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ₹ ೨೦ ಲಕ್ಷ ಕಾಯ್ದಿರಿಸಲಾಗಿದೆ ಎಂದು ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಂಪನ್ನ
ಸ್ತ್ರೀಯರ ಸಾಧನೆಗೆ ಪ್ರೋತ್ಸಾಹಿಸಿ: ಅರುಣಾ ಗುಜ್ಜರಿ