ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಿಡಿಹಬ್ಬದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾವೈಕ್ಯತೆ ಸಂಕೇತವಾಗಿ ಆಚರಿಸುವ ಸಿಡಿಹಬ್ಬದಲ್ಲಿ ಒಂದೊಂದು ಜವಾಬ್ದಾರಿಯೊಂದಿಗೆ ಹಬ್ಬ ನಡೆಯುವುದರಿಂದ ನಿಯಮಬದ್ಧ ಆಚರಣೆಗೆ ಅನುವು ಮಾಡಿಕೊಡಬೇಕೆಂದರು.
ಸಿಡಿಹಬ್ಬದ ಪ್ರಮುಖ ಆಕರ್ಷಣೆ ಘಟ್ಟ ಮೆರವಣಿಗೆಯಲ್ಲಿ ಸಮಯ ನಿಗಧಿಪಡಿಸಲಾಗಿದೆ, ಪೇಟೆ ಒಕ್ಕಲಕೇರಿ ಬೀದಿ ರಾತ್ರಿ 9 ರಿಂದ 10, ಸಿದ್ಧಾರ್ಥನಗರ ಘಟ್ಟ 10 ರಿಂದ 12, ಕೀರ್ತಿ ನಗರ 12 ರಿಂದ 1, ಗಂಗಾಮತ ಬೀದಿ 1ರಿಂದ 3, ಅಶೋಕ್‌ನಗರ ಚಿಕ್ಕಪಾಲು 3ರಿಂದ 4.15, ಅಶೋಕ್‌ನಗರ ದೊಡ್ಡಪಾಲು 4.15ರಿಂದ 5.15, ಬಸವಲಿಂಗಪ್ಪ ನಗರ 5.15ರಿಂದ 6 ಗಂಟೆಯೊಳಗೆ ಎಲ್ಲಾ ಘಟ್ಟಗಳ ಮೆರವಣಿಗೆ ನಡೆಯಬೇಕು. ಸಿಡಿ ಮುಗಿದ ನಂತರ ಸಂಪ್ರದಾಯದಂತೆ ಕೊಂಡೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.ಡಿವೈಎಸ್‌ಪಿ ಎಸ್.ಬಿ.ಯಶ್ವಂತ್ ಕುಮಾರ ಮಾತನಾಡಿ, ಘಟ್ಟ ಮೆರವಣಿಗೆ ಹಾಗೂ ಸಿಡಿ ಎಳೆಯುವುದು ಹಬ್ಬದಲ್ಲಿ ವಿಶೇಷವಾಗಿದೆ. ಹೆಚ್ಚಿನ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಸಂಭ್ರಮದಿಂದ ಆಚರಿಸುವ ಹಬ್ಬದಲ್ಲಿ ಪ್ರತಿಯೊಬ್ಬರೂ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿದರೆ ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ಅಗ್ನಿಶಾಮಕ ದಳ, ತಾಲೂಕು ವೈದ್ಯಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು, ಚೆಸ್ಕಾಂ ಇಲಾಖೆ, ಪುರಸಭೆ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದ್ದಾರೆ. ಪೊಲೀಸರು ಸಹಕಾರ ನೀಡಬೇಕೆಂದು ಕೋರಿದರು.
ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಹಬ್ಬದ ಅಂಗವಾಗಿ ಸಮರ್ಪಕ ನೀರು, ಹೆಚ್ಚಿನ ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಪ್ರವಾಸಿ ಮಂದಿರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಕೂಡಲೇ ಸರಿಪಡಿಸಬೇಕು ಎಂದರು.
ಇದೇ ವೇಳೆ ಹಬ್ಬಗಳ ಅಂಗವಾಗಿ ಪಟ್ಟಣದ ಎಲ್ಲಾ ಸಮುದಾಯ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ಮುಖಂಡರಾದ ಪಟೇಲ್ ಕಿರಣ್‌ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.