ಧರ್ಮಸ್ಥಳ: ಭಜನಾ ಕಮ್ಮಟ ಭಜನಾ ತರಬೇತಿ ಸಂಪನ್ನ

KannadaprabhaNewsNetwork |  
Published : Oct 01, 2026, 02:45 AM IST
ಧರ್ಮಸ್ಥಳ  | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೆ.29 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಎರಡನೇ ದಿನದ ಶಿಬಿರದಲ್ಲಿ ಸಂಗೀತ ವಿದೂಷಿ ಉಷಾ ಹೆಬ್ಬಾರ್, ಮಣಿಪಾಲ ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿ ನೀಡಿದರು.

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೆ.29 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಎರಡನೇ ದಿನದ ಶಿಬಿರದಲ್ಲಿ ಸಂಗೀತ ವಿದೂಷಿ ಉಷಾ ಹೆಬ್ಬಾರ್, ಮಣಿಪಾಲ ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿ ನೀಡಿದರು.ಈ ಸಂದರ್ಭ ಭಜನಾ ಕಮ್ಮಟ ಪರಿಷತ್ ನ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ, ಉಪಾಧ್ಯಕ್ಷೆ ಡಾ. ಹೇಮಾವತಿ ಅಮ್ಮನವರು, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಐಶ್ವರ್ಯ ನಿಶ್ಚಲ್ ಜೈನ್ ಉಪಸ್ಥಿತರಿದ್ದರು..

ಆರೋಗ್ಯ ರಕ್ಷಣೆಗೆ ಭಜನೆ ಸಹಕಾರಿ: ವಿವೇಕ್ ಪಾಯಸ್: ಆರೋಗ್ಯ ರಕ್ಷಣೆಗೆ ಭಜನೆಯು ಅತಿ ಮುಖ್ಯ ಹಾದಿಯಾಗಿದ್ದು, ಬದುಕಿನ ಸುಗಮದ ದಾರಿಯೇ ಭಜನೆಯಾಗಿದೆ. ಆರೋಗ್ಯವಂತ ಶರೀರವೇ ಆತ್ಮದ ಅರಮನೆ ಎಂದು ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಮಂಗಳವಾರ ನಡೆದ 28ನೇ ವರ್ಷದ ಭಜನಾ ಕಮ್ಮಟದ ಎರಡನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಜನೆಯಿಂದ ಸಾಮಾಜಿಕ ಪರಿವರ್ತನೆ, ಕೌಟುಂಬಿಕ ಸಾಮರಸ್ಯ ಹಾಗೂ ಒಳ್ಳೆಯ ನಡತೆಗಳು ಸೃಷ್ಟಿಯಾಗಿ ಸಮಾಜದಲ್ಲಿ ತಲೆದೋರಿರುವ ಸಾಮಾಜಿಕ ಸಮಸ್ಯೆಗಳು ದೂರವಾಗುತ್ತದೆ. ಕತ್ತಲನ್ನು ದೂರ ಮಾಡಿ ಬೆಳಕನ್ನ ಪಸರಿಸುವಲ್ಲಿ ಭಜನೆಯು ಪ್ರಮುಖ ಪಾತ್ರವನ್ನು ವಹಿಸಿದ್ದು, ಭವಿಷ್ಯದ ಹಾದಿಯನ್ನು ತಪ್ಪಿಸುವ ಚಟಗಳನ್ನು ತ್ಯಜಿಸಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ ಎಂದು ಶಿಬಿರಾರ್ಥಿಗಳಿಗೆ ತಿಳಿಹೇಳಿದರು.

ವರ್ಣಜಾಗೃತಿ, ಮಧ್ಯವರ್ಜನ ಶಿಬಿರ ಹಾಗೂ ಭಜನಾ ಕಮ್ಮಟ ಇಂತಹ ಹಲವಾರು ಯೋಜನೆಗಳ ಮೂಲಕ ಪೂಜ್ಯ ಹೆಗ್ಗಡೆಯ ದಂಪತಿಗಳು ಸಾವಿರಾರು ಜನರ ಪಾಲಿಗೆ ನೆರಳಾಗಿ ನಿಂತು ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಎಂದು ಶ್ಲಾಘನೀಯ ಮಾತುಗಳನ್ನಾಡಿದರು.

ಈ ಸಂದರ್ಭ ಭಜನಾ ಕಮ್ಮಟದ ಮುಖ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಭಜನಾ ಕಮಟ ಪರಿಷತ್ ನ ಎಲ್ಲಾ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬತ್ತದ ಗದ್ದೆಗಳಲ್ಲಿ ಬೆಂಕಿ ರೋಗ ಮತ್ತು ಎಲೆಸುರುಳಿ ಹುಳುಗಳ ಬಾಧೆ ಹಾಗೂ ಪರಿಹಾರ
ಸಾರ್ವಜನಿಕ ಜಾಗೃತಿ ಮೂಡಿಸಿದ ಪೋಲೀಸ್ ಸಿಬ್ಬಂದಿ