ಯೋಜನೆಯಿಂದ ಗ್ರಾಮೀಣರ ಆರ್ಥಿಕ ಪ್ರಗತಿ: ಡಾ.ಡಿ ವೀರೇಂದ್ರ ಹೆಗ್ಗಡೆ

KannadaprabhaNewsNetwork |  
Published : Nov 06, 2026, 03:00 AM IST
ಸಂವಾದ | Kannada Prabha

ಸಾರಾಂಶ

ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಯೋಜನೆಯ ಹಿರಿಯ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ

ಬೆಳ್ತಂಗಡಿ: ದೂರದ ಊರಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಮಂದಿ ಯೋಜನೆ ಪ್ರಾರಂಭವಾದ ಬಳಿಕ ಊರಿಗೆ ಬಂದು ಕೃಷಿ ಮಾಡಿ ಆರ್ಥಿಕ ಪ್ರಗತಿ ಕಂಡಿದ್ದಾರೆ. ಅನೇಕ ಕುಟುಂಬಗಳು ನೆಮ್ಮದಿಯ ಬದುಕನ್ನು ಕಾಣಲು ಯೋಜನೆಯೇ ಕಾರಣ ಎಂದು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಗುರುವಾರ ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಯೋಜನೆಯ ಹಿರಿಯ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

44 ವರ್ಷಗಳ ಹಿಂದೆ ಗ್ರಾಮ ಗ್ರಾಮಗಳಿಗೆ, ಮನೆ ಮನೆಗೆ ಬೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಬೇಕಾದ ನೆರವು ನೀಡುವ ಮೂಲಕ ಯೋಜನೆ ಪ್ರಾರಂಬಿಸಲಾಯಿತು. ಅಗ ಯುವಕರಾಗಿದ್ದ ಯೋಜನೆಯ ಫಲಾನುಭವಿಗಳು ವಿವಿಧ ಸಾಧನೆಗಳನ್ನು ಮಾಡಿ ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಅವರಿಗೂ ವಯಸ್ಸಾಗಿದೆ. ನಮಗೂ ವಯಸ್ಸಾಗಿದೆ. ಅದಕ್ಕಾಗಿ ಒಂದು ಕಡೆ ಸೇರಿ ಕ್ಷೇಮ ಸಮಚಾರ ಮಾತನಾಡಲು ಒಟ್ಟು ಸೇರುವ ಎಂದು ಅಲೋಚಿಸಿ ಇಂದು ಸೇರಿದ್ದೇವೆ. ಯೋಜನೆ ಇಷ್ಟೊಂದು ಬೆಳೆಯಲು ಕಾರ್ಯಕರ್ತರ ಶ್ರಮ ಕಾರಣ ಎಂದರು. ಜ್ಞಾನ ವಿಕಾಸ ಯೋಜನೆಯ ಸ್ಥಾಪಕಾದ್ಯಕ್ಷೆ ಹೇಮಾವತಿ ವಿ ಹೆಗ್ಗಡೆಯವರು ಮಾತನಾಡಿ ನಮಗೆ ಧ. ಗ್ರಾ. ಯೋಜನೆ ಪ್ರಮಾಣಕ್ಕಿಂತ ಹೆಚ್ಚು ಪ್ರೀತಿ, ಯೋಜನೆಯ ಫಲಾನುಭವಿಗಳು ಕ್ಷೇತ್ರಕ್ಕೆ ಬಂದು ಬೆಳವಣಿಗೆಯ ಹಂಚಿಕೊಂಡಾಗ ಅಗುವ ಸಂತಸ ಬೆರೊಂದಿಲ್ಲ ಇದುವೆ ನಮಗೆ ಯಶಸ್ಸಿನ ಪ್ರಮಾಣ ಪತ್ರ. ಯೋಜನೆ ಪ್ರಾರಂಭವಾದ ಬಳಿಕ ಅನೇಕ ಕಾರ್ಯಕ್ರಮ ಪ್ರಾರಂಭವಾಯಿತು. ಹೆಗ್ಗಡೆಯವರು ಫಲಾನುಭವಿಗಳ ಹಿತಕ್ಕಾಗಿ ಬ್ಯಾಂಕ್ ಗಳಿಂದ ಕೋಟಿ ಕೋಟಿ ಸಾಲ ಪಡೆದಿದ್ದಾರೆ. ರಾತ್ರಿ ಇಡಿ ಚೆಕ್ ಗೆ ಸಹಿ ಹಾಕುತ್ತಾ ಅನೇಕ ರಾತ್ರಿಗಳನ್ನು ಕಳೆದಿದ್ದಾರೆ ಎಂದರು. ಹೆಗ್ಗಡೆಯವರಿಗೆ ಜನರ ನೆಮ್ಮದಿಗಾಗಿ ಕಾರ್ಯಕ್ರಮ ಹಮ್ಮಿಕೊಂಡರೆ ಅದರಿಂದ ಎಷ್ಟೇ ಕಷ್ಟಗಳು ಬಂದರೂ ಅದನ್ನು ನಿಲ್ಲಿಸುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಹಿಂದೆ ರಸ್ತೆಗಳು ಇಲ್ಲದ ಸಮಯದಲ್ಕೂ ಕಾರ್ಯಕರ್ತರು ಸೈಕಲ್ ನಲ್ಲೇ ಸುತ್ತಿ ಯೋಜನೆಗಾಗಿ ಶ್ರಮಿಸಿದ್ದಾರೆ. ಇವರ ಸೇವೆಯನ್ನು ಮರೆಯುವಂತಿಲ್ಲ ಯೋಜನೆ ಇನ್ನಷ್ಟು ಬೆಳೆಯಬೇಕೆಂಬುದೇ ನಮ್ಮ ಅಶಯ ಎಂದರು.

ಸೌಲಭ್ಯ ವಿತರಣೆ: ಇದೇ ಸಂದರ್ಭದಲ್ಲಿ ವಿವಿಧ ಪಲಾನುಭವಿಗಳಿಗೆ ಸೌಲಭ್ಯಗಳನ್ನು ಡಾ ಹೆಗ್ಗಡೆಯವರು ವಿತರಿಸಿದರು. ಹಿರಿಯ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಯೋಜನೆಯ ಕಾರ್ಯನಿರತ ನಿರ್ದೇಶಕ ಅನಿಲ್ ಕುಮಾರ್ ಎಸ್ ಎಸ್ ಪ್ರಾಸ್ತಾವಿಕ ಮಾತನಾಡಿದರು.ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಯೋಜನಾಧಿಕಾರಿ ಯಶೋಧರ ವಂದಿಸಿದರು. ರಾಮ್ ಕುಮಾರ್, ಮಧುರಾ ಕಾರ್ಯಕ್ರಮ ನಿರೂಪಿಸಿದರು.ಧ.ಗ್ರಾ ಯೋಜನೆ, ಜನಜಾಗೃತಿ ಕಾರ್ಯಕ್ರಮ, ಶಿಕ್ಷಣ ಕ್ಷೇತ್ರ, ಆಸ್ಪತ್ರೆ, ಸಿರಿ ಇನ್ನಿತರ ಕ್ಷೇತ್ರದ ಎಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಲು ಶ್ರಿ ಮಂಜುನಾಥ ಸ್ವಾಮಿಯ ಪ್ರೇರಣೆ. ಜನಜಾಗೃತಿ ಕಾರ್ಯಕ್ರಮದಿಂದ ನೂರಾರು ಕುಟುಂಬಗಳು ನೆಮ್ಮದಿಯ ಬದುಕು ಕಂಡರೆ ನಮಗೆ ಮಾತ್ರ ಸವಾಲು ಎದುರಿಸುವ ಕಾರ್ಯಕ್ರಮ ಆಗಿತ್ತು.

ಡಾ. ಡಿ. ವೀರೇಂದ್ರ ಹೆಗ್ಗಡೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತ ಮುಖಂಡರ ಬಂಧನಕ್ಕೆ ಜಿಲ್ಲೆಯಲ್ಲಿ ಆಕ್ರೋಶ
ಬರದಲ್ಲಿ ರೈತರಿಗೆ ಆಸರೆಯಾದ ಕೆರೆಯ ನೀರು!