ಕಾನೂನು ಕಾಲೇಜಿಗೆ ಶಾಸಕ ದರ್ಶನ್‌ ₹2 ಲಕ್ಷದ ಪುಸ್ತಕ ಗಿಫ್ಟ್‌

KannadaprabhaNewsNetwork |  
Published : Feb 13, 2026, 01:45 AM IST
ಕಾನೂನು ಕಾಲೇಜಿಗೆ 2 ಲಕ್ಷ ಮೌಲ್ಯದ ಪುಸ್ತಕ ಕೊಡುಗೆ | Kannada Prabha

ಸಾರಾಂಶ

ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್‌ ಧ್ರುವನಾರಾಯಣ ಅವರು ನಗರದ ಕಾನೂನು ಕಾಲೇಜು ಗ್ರಂಥಾಲಯಕ್ಕೆ 2 ಲಕ್ಷ ರು. ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

- ಶಾಸಕರ ನಡೆಗೆ ಕಾಲೇಜಿನಿಂದ ಅಭಿನಂದನೆ---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್‌ ಧ್ರುವನಾರಾಯಣ ಅವರು ನಗರದ ಕಾನೂನು ಕಾಲೇಜು ಗ್ರಂಥಾಲಯಕ್ಕೆ 2 ಲಕ್ಷ ರು. ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಚಾಮರಾಜನಗರ ಕಲಾವಿದ ರಾಮಸಮುದ್ರ ರಾಜಪ್ಪ ಅವರು ಪುಸ್ತಕಗಳನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ.ಅಶ್ವಿನಿ ಅವರ ಮೂಲಕ ಕಾಲೇಜಿಗೆ ನೀಡಲಾಯಿತು.

ಪುಸ್ತಕಗಳನ್ನು ಸ್ವೀಕರಿಸಿದ ಸಹಾಯಕ ಪ್ರಾಧ್ಯಾಪಕಿ ಎಂ.ಅಶ್ವಿನಿ ಮಾತನಾಡಿ, ‘ಚಾಮರಾಜನಗರ ಮಾಜಿ ಸಂಸದ ದಿ.ಆರ್‌.ಧ್ರುವನಾರಾಯಣ ಅವರ ಪುತ್ರ ಶಾಸಕ ದರ್ಶನ್‌ ಧ್ರುವನಾರಾಯಣ ಅವರು ಕಾಲೇಜು ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡಿಸುವಂತೆ ಕಾಲೇಜು ವತಿಯಿಂದ ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸಿ ಅವರು 2 ಲಕ್ಷ ರು. ಮೌಲ್ಯದ ಪುಸ್ತಕಗಳನ್ನು ಕೊಟ್ಟಿದ್ದಾರೆ. ಅವರಿಗೆ. ಕಾಲೇಜು ವತಿಯಿಂದ ಹೃತ್ಪೂರ್ವಕ ಅಭಿನಂದನೆ’ ಎಂದರು.

ಕಲಾವಿದ ರಾಮಸಮುದ್ರ ರಾಜಪ್ಪ ಮಾತನಾಡಿ, ಮಾಜಿ ಸಂಸದರ ಹೋರಾಟದ ಫಲವಾಗಿ ಜಿಲ್ಲೆಯಲ್ಲಿ ಕಾನೂನು ಕಾಲೇಜು ಆಗಿದ್ದು, ಅವರು ಪುತ್ರ, ಶಾಸಕ ದರ್ಶನ್‌ ಅವರು ಕೂಡ ಕಾಲೇಜಿಗೆ 2 ಲಕ್ಷ ರು. ಮೌಲ್ಯದ ಪುಸ್ತಕಗಳನ್ನು ನೀಡುವ ಮೂಲಕ ತಂದೆ ಹಾದಿಯಲ್ಲಿ ಸಾಗುತ್ತಿದ್ದಾರೆ’ ಎಂದರು

ಈ ಸಂದರ್ಭದಲ್ಲಿ ದ್ವಿತೀಯ ದರ್ಜೆ ಸಹಾಯಕ ಆರ್.ಸ್ವಾಮಿ, ಮುಖಂಡ ನಾಗೇಂದ್ರ, ಹಾಜರಿದ್ದರು.

-------------

12ಸಿಎಚ್ಎನ್‌4

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8 ತಿಂಗಳಿಂದ ನೀರಿನ ಸಮಸ್ಯೆ: ಜಗಳೂರು ತಾಪಂಗೆ ಗ್ರಾಮಸ್ಥರಿಂದ ಬೀಗ!
ಹೊಸಕೋಟೆಯಲ್ಲಿ ಸಾರ್ವತ್ರಿಕ ಮುಷ್ಕರ ಯಶಸ್ವಿ