ಶಿರಸಿ: ನಗರದ ಬಿಡ್ಕಿಬೈಲ್‌ನಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ಶಿರಸಿಯ ಮಾರಿಕಾಂಬಾ ದೇವಿಯ ದರ್ಶನ ಮತ್ತು ಪೂಜಾ ಸೇವೆಗಳು ಗುರುವಾರದಿಂದ ಆರಂಭವಾಗಿದ್ದು, ಸಹಸ್ರಾರು ಭಕ್ತಾದಿಗಳು ದೇವಿಯ ದರ್ಶನ ಪಡೆದು ಪುನೀತರಾದರು.
ಬೆಳಗ್ಗೆ ೪ ಗಂಟೆಯಿಂದ ದೇವಿಯ ದರ್ಶನಕ್ಕಾಗಿ ಕಿಲೋ ಮೀಟರ್ ದೂರ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು. ದೇವಿ ಪ್ರತಿಷ್ಠಾಪನೆಯಾದ ಬಿಡ್ಕಿಬೈಲ್‌ನಿಂದ ೩ ಸಾಲಾಗಿ ಮಾರಿಕಾಂಬಾ ದೇವಾಲಯದ ವರೆಗೂ ಹೋಗಿದ್ದು, ಜನದಟ್ಟಣೆಯೆಂದು ತೋರ್ಪಡಿಸಿತು.
ವೃದ್ಧರು, ಗರ್ಭಿಣಿಯರಿಗೆ, ಅಂಗವಿಕಲರಿಗೆ ದೇವಿಯ ದರ್ಶನಕ್ಕೆ ನೇರ ವ್ಯವಸ್ಥೆ ಮಾಡಲಾಗಿತ್ತು. ಸೇವಾ ಕಾರ್ಯಕರ್ತರು ಅಶಕ್ತರಿಗೆ ವೀಲ್ ಚೇರ್ ಮೂಲಕ ದೇವಿ ದರ್ಶನ ಮಾಡಿಸಿದರು.