ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಅಂಬಾರಿ ಉತ್ಸವ ಸಮಿತಿ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆಯ ಅಂಗವಾಗಿ ಭಾನುವಾರ ನಗರದಲ್ಲಿ ಐದು ಆನೆಗಳ 6 ಅಂಬಾರಿ ಉತ್ಸವ ಅದ್ಧೂರಿಯಾಗಿ ನಡೆಯಿತು.
ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಿದ್ಧಾರೂಢರ ಶ್ರೀಗಳು ಹಾಗೂ ಸಮಕಾಲಿನ ಮಹಾತ್ಮರ ದರ್ಶನ ಜನರಿಗೆ ಮಾಡುವ ಕೆಲಸ ಶ್ಲಾಘನೀಯ. ಇಂದಿನ ಜನರಿಗೆ ಇನ್ನು 10 ವರ್ಷಗಳ ಬಳಿಕ ದೇವರ ಮೇಲೆ ಭಕ್ತಿ, ಹಿರಿಯರಿಗೆ ಗೌರವ ಇರುವುದಿಲ್ಲ. ಭಕ್ತಿ, ಆರಾಧನೆ ಮಾಡುವ ಜನರನ್ನು ಕಳೆದುಕೊಳ್ಳುತ್ತೇವೆ ಎಂಬ ಸಂದೇಶ ಹರಿದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾತ್ಮರ ದರ್ಶನ ಜನರಿಗೆ ಸಿಗುವಂತೆ ಮಾಡಿದ ಕುಟುಂಬದ ಕಾರ್ಯ ಮಹತ್ವವಾದದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮನೋಜಕುಮಾರ ಗದುಗಿನ, ನ. 15ರಂದು ಸಂಗಮರಥಯಾತ್ರೆ ಆರಂಭವಾಯಿತು. ಪ್ರತಿಯೊಂದು ಹಳ್ಳಿಯಲ್ಲಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. 62 ಹಳ್ಳಿಯಲ್ಲಿ 28 ದಿನಗಳ ಕಾಲ ಅಭೂತಪೂರ್ವ ರಥಯಾತ್ರೆ ನಡೆಯಿತು. ಸಿದ್ಧಾರೂಢಸ್ವಾಮೀಜಿ ಹಾಗೂ ಸಮಕಾಲಿನ ಮಹಾತ್ಮರ ಅನುಗ್ರಹಕ್ಕೆ ಎಲ್ಲರೂ ಪಾತ್ರರಾಗೋಣ ಎಂದರು.ಕುಂದಗೋಳ ಅಭಿನವ ಬಸವಣ್ಣಜ್ಜನವರ, ಜತ್ತದ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶಿವಾನಂದ ಕರಿಗಾರ, ಗೌಡಪ್ಪಗೌಡ ಪಾಟೀಲ, ಮಹಾಬಳೇಶ್ವರ ಅಣ್ಣಿಗೇರಿ, ರಂಗಾ ಬದ್ದಿ, ಹನುಮಂತಪ್ಪ ಹಳ್ಯಾಳ, ಅರ್ಜುನ ಅವ್ವಣ್ಣವರ, ಈರಣ್ಣ ಕೊರಕೊಪ್ಪ, ವರ್ಷಾ ಗದಗಿನ, ಬಸವರಾಜ ಕೆರಕಣ್ಣವರ, ವಿ.ಸಿ. ಸೋಮನಕಟ್ಟಿ, ಮಹಾದೇವಪ್ಪ ಜೀರಿಗಿ ಸೇರಿದಂತೆ ಹಲವರಿದ್ದರು.
ಸಿದ್ಧಾರೂಢರು, ಗುರುನಾಥಾರೂಢರು, ಮಡಿವಾಳೇಶ್ವರರು, ಅಜಾತ ನಾಗಲಿಂಗರು, ಉಣಕಲ್ ಸಿದ್ದಪ್ಪಜ್ಜ, ಸಂತ ಶರೀಫ ಶಿವಯೋಗಿಗಳ ಉತ್ಸವ ಮೂರ್ತಿಗಳನ್ನು ಐದು ಅಂಬಾರಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ನೆಹರೂ ಮೈದಾನದಿಂದ ಲ್ಯಾಮಿಂಗ್ಟನ್ ರೋಡ್, ಕೊಪ್ಪಿಕರ ರಸ್ತೆ, ಮ್ಯಾದರ ಓಣಿ, ತುಳುಜಾಭವನಿ ವೃತ್ತ, ದಾಜೀಬಾನಪೇಟ, ಸಂಗೊಳಿ ರಾಯಣ್ಣ ವೃತ್ತ, ಗಿರಿಣಿ ಚಾಳ, ಕಾರವಾರ ರಸ್ತೆ, ಇಂಡಿಪಂಪ್ ವೃತ್ತ ಈ ಮೂಲಕ ಮೆರವಣಿಗೆ ಸಿದ್ಧಾರೂಢ ಮಠಕ್ಕೆ ತಲುಪಿತು.ಬಾಗಿ ಬಂದವರ ಬದುಕೆಲ್ಲ ಬಂಗಾರ
ಇಲ್ಲಿಯ ಸಿದ್ಧಾರೂಢ ಮಠದ ಆವರಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಅಂಬಾರಿ ಉತ್ಸವದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀಮಠದ ಟ್ರಸ್ಟ್ ಕಮಿಟಿ ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಾನಂದ ಭಾರತಿ ಸ್ವಾಮೀಜಿ, ಶ್ರೀ ಪರಿಪೂರ್ಣಾನಂದ ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಲಲಿತಾ ಮಾತಾಜಿ, ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣ ಶೆಟ್ಟರ್, ಅಂದಾನಪ್ಪ ಚಾಕಲಬ್ಬಿ ಸೇರಿದಂತೆ ಹಲವರಿದ್ದರು.