ದಾಸ ಸಾಹಿತ್ಯ ಪರಂಪರೆ ಶಾಶ್ವತ: ಸೂರಿ ಶ್ರೀನಿವಾಸ್

KannadaprabhaNewsNetwork |  
Published : Feb 25, 2025, 12:48 AM IST
ಕನ್ನಡ ಭವನದಲ್ಲಿ ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ನೂತನ ಪದ ಗ್ರಹಣ ಸಮಾರಂಭ ನಡೆಯಿತು | Kannada Prabha

ಸಾರಾಂಶ

ಚಿಕ್ಕಮಗಳೂರು, ದಾಸ ಸಾಹಿತ್ಯದ ಚರಿತ್ರೆಯಲ್ಲಿ ಪುರಂದರದಾಸರು, ಕನಕದಾಸರು ಹಾಗೂ ವಾದಿರಾಜರ ಅಪಾರ ಕೊಡುಗೆಯಿಂದ ಇಂದಿಗೂ ದಾಸ ಸಾಹಿತ್ಯ ಪರಂಪರೆ ಭಾರತೀಯ ನೆಲ ದಲ್ಲಿ ಶಾಶ್ವತವಾಗಿ ನೆಲೆಸಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಕನ್ನಡ ಭವನದಲ್ಲಿ ತಾಲೂಕು ದಾಸ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ನೂತನ ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದಾಸ ಸಾಹಿತ್ಯದ ಚರಿತ್ರೆಯಲ್ಲಿ ಪುರಂದರದಾಸರು, ಕನಕದಾಸರು ಹಾಗೂ ವಾದಿರಾಜರ ಅಪಾರ ಕೊಡುಗೆಯಿಂದ ಇಂದಿಗೂ ದಾಸ ಸಾಹಿತ್ಯ ಪರಂಪರೆ ಭಾರತೀಯ ನೆಲ ದಲ್ಲಿ ಶಾಶ್ವತವಾಗಿ ನೆಲೆಸಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.ನಗರದ ಕನ್ನಡ ಭವನದಲ್ಲಿ ತಾಲೂಕು ದಾಸ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ನೂತನ ಪದಗ್ರಹಣ ಸಮಾರಂಭ ಶನಿವಾರ ಉದ್ಘಾಟಿಸಿ ಮಾತನಾಡಿದರು. ದಾಸ ಶ್ರೇಷ್ಠರ ಕೀರ್ತನೆಗಳು ಗಮನಿಸಿ, ಅವಲೋಕಿಸಿದರೆ ಸ್ವಾಸ್ಥ್ಯ ಸಮಾಜ ಕಟ್ಟು ವಲ್ಲಿ ಅತ್ಯುತ್ತಮ ಕಾಳಜಿ ವಹಿಸಿರುವುದು ತಿಳಿಯುತ್ತದೆ. ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಪರಿಕಲ್ಪನೆಯಡಿ ಕೀರ್ತನೆ ಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಇಂದು ನಾವುಗಳು ಸಂಸ್ಕಾರವಂತಾಗಲು ಕಾರಣವಾಗಿದೆ ಎಂದು ಹೇಳಿದರು.

ಭಜನೆಗಳು ಮಾನಸಿಕ ಶಾಂತಿ ಕಾಪಾಡಿದರೆ, ದಾಸ ಸಾಹಿತ್ಯ, ಕಲೆ, ಸಂಗೀತ ಪ್ರತಿಯೊಬ್ಬರ ಮನಸ್ಸನ್ನು ಅರಳಿಸುವ ಶಕ್ತಿ ಹೊಂದಿದೆ. ಹೀಗಾಗಿ ದಾಸ ಪರಂಪರೆ ಉಳಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಶಾಲಾ-ಕಾಲೇಜುಗಳಲ್ಲಿ ಕಾರ್ಯಾ ಗಾರ ಹಮ್ಮಿಕೊಂಡು ಶ್ರೇಷ್ಟರ ಕೀರ್ತನೆಗಳಿಗೆ ಪರಿಚಯಿಸುವ ಕಾರ್‍ಯಕ್ಕೆ ಮುಂದಾಗವೇಕು ಎಂದರು.ವಚನ ಸಾಹಿತ್ಯ, ಶರಣ ಸಾಹಿತ್ಯ, ದಾಸ ಸಾಹಿತ್ಯ ಜಾನಪದ ಮೂಲ ಬೇರುಗಳು. ಆದರೆ ಇತ್ತೀಚೆಗೆ ಅಳಿನಂಚಿಗೆ ಕಾಲಿಟ್ಟಿವೆ. ಹಾಗಾಗಿ ಜಿಲ್ಲೆಯ ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲಿ ಹಾಗೂ ಕನ್ನಡ ಭವನದಲ್ಲಿ ಕಾರ್‍ಯಾಗಾರ ಹಮ್ಮಿಕೊಂಡು ಮುಂದಿನ ಯುವಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಸಾಹಿತ್ಯಾಸಕ್ತರ ಮೇಲಿದೆ ಎಂದು ಹೇಳಿದರು.ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ವಿಶ್ವನಾಥ್ ಮಾತನಾಡಿ ದಾಸ ಸಾಹಿತ್ಯ ಜನರ ನಡುವೆ ಬಂದು ಜನಮಾನಸದಲ್ಲಿ ನೆಲೆಯಾಗಿ ನಿಂತಿದೆ. ದಾಸರ ಸಾಹಿತ್ಯ ಪ್ರಚಾರ, ದಾಸರ ಜೀವನ-ವ್ಯಕ್ತಿತ್ವ-ಸಾಧನೆಗಳ ಬಗ್ಗೆ ವಿಮರ್ಶೆ, ಗೋಷ್ಠಿಗಳನ್ನು ನಡೆಸಿ ಅರಿವು ಮೂಡಿಸುವುದು ಪರಿಷತ್ತಿನ ಮುಖ್ಯ ಧ್ಯೇಯ ಎಂದರು.ಪರಿಷತ್ತಿನ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಆರ್.ಮಹಾಲಕ್ಷ್ಮೀ ನಾಗರಾಜ್ ಮಾತನಾಡಿ ದಾಸ ಸಾಹಿತ್ಯ ಎಂದಿಗೂ ಆರದ ದೀಪ. ಇದನ್ನು ಓದುವುದರಿಂದ ಮಾನಸಿಕ ನೆಮ್ಮದಿ ಸಾಧ್ಯ. ಹರಿದಾಸರ ನಡೆ ಮತ್ತು ನುಡಿ ಒಂದೇ ಆಗಿತ್ತು. ದಾಸರ ಬದುಕು ಸರಳವಾಗಿತ್ತು ಎಂದರು. ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಿರೇನಲ್ಲೂ ರು ಶ್ರೀನಿವಾಸ್ ದಾಸ ಚಟುವಟಿಕೆ ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳ ತಂಡ ರಚಿಸಿಲಾಗಿದ್ದು ನೂತನ ತಂಡ ದಾಸ ಪರಂಪರೆ ರಸದೂಟವನ್ನು ಎಲ್ಲೆಡೆ ಉಣಬಡಿಸುವ ಮೂಲಕ ಶ್ರೇಷ್ಟರ ಕೀರ್ತನೆಗಳ ರುಚಿ ಪರಿಚಯಿಸಬೇಕು ಎಂದರು.ತಾಲೂಕು ದಾಸ ಸಾಹಿತ್ಯ ಮಹಿಳಾ ನೂತನ ಘಟಕ : ಆರ್.ಮಹಾಲಕ್ಷ್ಮೀ ನಾಗರಾಜ್ (ಅಧ್ಯಕ್ಷೆ), ವಿಜಯಲಕ್ಷ್ಮೀ ವಿಶ್ವನಾಥ್ (ಗೌರವಾಧ್ಯಕ್ಷೆ), ಭಾಗ್ಯ ಕೃಷ್ಣ (ಪ್ರ.ಕಾರ್ಯದರ್ಶಿ), ಆಶಾ ರಾಜು (ಕೋಶಾಧ್ಯಕ್ಷೆ), ಜಯಂತಿ ಶಿವಾಜಿ (ಸಂಘಟನಾ ಕಾರ್ಯದರ್ಶಿ), ಪದ್ಮ ಜನಕರಾಜ್‌ಅರಸ್ (ಸಂಚಾಲಕಿ), ಸಾವಿತ್ರಿ ಶಿವ ಕುಮಾರ್, ಮಲ್ಲಿಕಾದೇವಿ, ಮೈನಾ, ಶಕುಂತಲಾ (ಸದಸ್ಯರು).ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ದಾಸಾಪ ಸಂಘಟನಾ ಕಾರ್ಯದರ್ಶಿ ಸುನೀತಾ ಕಿರಣ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷೆ ಚೈತ್ರಗೌಡ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ