ಜಾತಿ ಮುಕ್ತ ಸಮಾಜ ನಿರ್ಮಾಣದಲ್ಲಿ ದಸಂಸ ಕೊಡುಗೆ ಆಪಾರ

KannadaprabhaNewsNetwork |  
Published : Mar 16, 2026, 12:15 AM IST
ಸಿಕೆಬಿ-1 ತಾಲ್ಲೂಕಿನ ಕಸಬಾ ಹೋಬಳಿ ಸೇಟ್ ದಿನ್ನೆ ಬಳಿ ದಸಂಸ ವತಿಯಿಂದ ಏರ್ಪಡಿಸಿದ್ದ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಆಯ್ಕೆಯ ನಂತರ ನೂತನ ಪದಾಧಿಕಾರಿಗಳಿಗೆಗೆ ದಸಂಸ ಸಂವಿಧಾನವನ್ನು ಬೋಧಿಸಲಾಯಿತು. | Kannada Prabha

ಸಾರಾಂಶ

ಕಳೆದ ಐದು ದಶಕಗಗಳ ಸುಧೀರ್ಘ ಪಯಣದಲ್ಲಿ ದಲಿತ ಸಂಘರ್ಷ ಸಮಿತಿ ಅನೇಕ ಸಾಧನೆಗಳನ್ನೂ ಸವಾಲುಗಳನ್ನೂ ಎದುರಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದ 50 ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ದಲಿತರು ಮತ್ತು ದಮನಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ಜೊತೆಗೆ ಜಾತಿಮುಕ್ತ ಮತ್ತು ಹಸಿವುಮುಕ್ತ ಸಮಾಜವನ್ನು ನಿರ್ಮಿಸುವ ದಿಕ್ಕಿನಲ್ಲಿ ನಿರಂತರವಾಗಿ ತನ್ನ ಹೋರಾಟವನ್ನು ಮುಂದುವರಿಸುತ್ತಾ ಬಂದಿದೆ ಎಂದು ದಸಂಸ ರಾಜ್ಯ ಮುಖಂಡ ಕೆ.ಸಿ. ರಾಜಕಾಂತ್ ಅಭಿಪ್ರಾಯಪಟ್ಟರು.ತಾಲೂಕಿನ ಕಸಬಾ ಹೋಬಳಿ ಸೇಟ್ ದಿನ್ನೆ ಬಳಿ ದಸಂಸ ವತಿಯಿಂದ ಏರ್ಪಡಿಸಿದ್ದ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ ಐದು ದಶಕಗಗಳ ಸುಧೀರ್ಘ ಪಯಣದಲ್ಲಿ ದಲಿತ ಸಂಘರ್ಷ ಸಮಿತಿ ಅನೇಕ ಸಾಧನೆಗಳನ್ನೂ ಸವಾಲುಗಳನ್ನೂ ಎದುರಿಸಿದೆ. ಜನಪರ ಹೋರಾಟಗಳ ಜೊತೆಗೆ ಭೂಮಿಗಾಗಿ ಕಡ್ಡಾಯ ಶಿಕ್ಷಣಕ್ಕಾಗಿ, ಸೂರಿಗಾಗಿ, ಸೇಂದಿ ಮುಕ್ತ ರಾಜ್ಯಕ್ಕಾಗಿ, ಶೋಷಣೆಯ ವಿಮುಕ್ತಿಗಾಗಿ ವಿಶ್ರಾಂತವಾಗಿ ಹೋರಾಟಗಳನ್ನು ಕಟ್ಟಿದೆ ಎಂದು ಹೇಳಿದರು.ಜಿಲ್ಲಾ ಸಂಘಟನಾ ಸಂಚಾಲಕ ಎನ್.ಎ. ವೆಂಕಟೇಶ್ ದಲಿತರ ಮೇಲಿನ ದೌರ್ಜನ್ಯಗಳನ್ನು ಗಟ್ಟಿದನಿಯಲ್ಲಿ ತಡೆಯುವ ಕೆಲಸ ಮಾಡುವ ಜೊತೆ ಜೊತೆಗೆ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಾದ ನೀರು, ನಿವೇಶನ ಮತ್ತು ಭೂಮಿ ಹಕ್ಕುಗಳಿಗಾಗಿ ದ.ಸಂ.ಸ ಹಲವು ಶಾಂತಿಯುತ ಹೋರಾಟಗಳನ್ನು ನಡೆಸಿದೆ. ಈ ಹೋರಾಟಗಳ ಮೂಲಕ ಸರ್ಕಾರದ ಸೌಲಭ್ಯಗಳನ್ನು ದಮನಿತರ ಬಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದೆ ಎಂದರು.ಸಭೆಯಲ್ಲಿ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ದಸಂಸ ಸಂವಿಧಾನವನ್ನು ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಸಂಚಾಲಕರಾದ ಎನ್.ಪರಮೇಶ್, ತಿರುಮಲಪ್ಪ, ಪೈಪಾಳ್ಯ ರವಿ, ಇಸ್ಕೂಲಪ್ಪ, ವರ್ಲಕೊಂಡ ರಾಜು, ಅದಿನಾರಾಯಣಪ್ಪ,ನಾಗರಾಜಪ್ಪ,ಗಡಿನಾಡು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು ಇದ್ದರು.

ಬಾಕ್ಸ್....

ಹೋಬಳಿ ಮಟ್ಟದ ನೂತನ ಸಮಿತಿ ಪದಾಧಿಕಾರಿಗಳು

ಸಂಘಟನಾ ಸಂಚಾಲಕರಾಗಿ ವಿ.ವೆಂಕಟೇಶ್ ದಿನ್ನೆಹೊಸಹಳ್ಳಿ ಸಂಚಾಲಕರು, ಲಕ್ಷ್ಮಣ ವನಗಿರಿಯಪ್ಪನಹಳ್ಳಿ, ಸಹ ಸಂಘಟನಾ ಸಂಚಾಲಕರಾಗಿ ಮುನಿಕೃಷ್ಣಪ್ಪ ಪಟ್ರೇನಹಳ್ಳಿ, ಸಿಂಹಾದ್ರಿ ನರಸಿಂಹಪ್ಪ ಚಲಕಾಯಲಪರ್ತಿ, ಲಕ್ಷ್ಮೀನಾರಾಯಣ ತಿಪ್ಪೇನಹಳ್ಳಿ, ನಾರಾಯಣಸ್ವಾಮಿ ವನಗಿರಿಯಪ್ಪನಹಳ್ಳಿ, ಖಜಾಂಚಿಯಾಗಿ ಶ್ರೀನಿವಾಸ್ ಮುಷ್ಟೂರು ಆಯ್ಕೆಯಾಗಿದ್ದಾರೆ.

ಇದೇ ವೇಳೆ ಸಲಹಾ ಸಮಿತಿ ಸದಸ್ಯರಾಗಿ ಮನೋಜ್ ಜಡೇನಹಳ್ಳಿ, ಪುಟ್ಟಣ್ಣ ಕರಿಗಾನಪಾಳ್ಯ, ಆನಂದ್ ಇನಮಿಂಚೇನಹಳ್ಳಿ, ರಾಮಾಂಜಿ ಜಡೇನಹಳ್ಳಿ, ಶಿವಣ್ಣ ಗುಂತಪ್ಪನಹಳ್ಳಿ, ವೆಂಕಟಸ್ವಾಮಿ ಈತಮಾಕಲಹಳ್ಳಿ, ಸತ್ಯಪ್ಪ ಹೊನ್ನೇನಹಳ್ಳಿ, ಮುನಿಯಪ್ಪ ಆವಲಗುರ್ಕಿ, ವೆಂಕಟರಾಯಪ್ಪ ಆವಲಗುರ್ಕಿ, ವೆಂಕಟಪ್ಪ ಸೇಠ್‌ದಿನ್ನೆ,ಗೋಪಿ ಗುವ್ವಲಕಾನಹಳ್ಳಿ,ಜಜ್ಯೋತೀಶ್ವರಮ್ಮ, ಹೋಟೆಲ್ ರಾಮಣ್ಣ, ರಾಮಕೃಷ್ಣಪ್ಪ, ಅಂದರ‍್ಲಹಳ್ಳಿ ಚಿನ್ನಪ್ಪ, ಕಣಿತಹಳ್ಳಿ ಮುನಿಯಪ್ಪ, ರೈತ ಮುಖಂಡ ನಾಗಭೂಷಣ್, ನಗರ ಸಂ. ಸಂಚಾಲಕ ಕುಮಾರ್, ನಗರ ಮುಖಂಡ ಸಿ.ಎಲ್ ಚಂದ್ರು ರನ್ನು ಆಯ್ಕೆ ಮಾಡಲಾಯಿತು.

ಸಿಕೆಬಿ-1 ತಾಲೂಕಿನ ಕಸಬಾ ಹೋಬಳಿ ಸೇಟ್ ದಿನ್ನೆ ಬಳಿ ದಸಂಸ ವತಿಯಿಂದ ಏರ್ಪಡಿಸಿದ್ದ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಆಯ್ಕೆಯ ನಂತರ ನೂತನ ಪದಾಧಿಕಾರಿಗಳಿಗೆಗೆ ದಸಂಸ ಸಂವಿಧಾನವನ್ನು ಬೋಧಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ನೇರ ಬಳಕೆಗಲ್ಲ
ಲಾರಿಗೆ ಕಾರು ಡಿಕ್ಕಿ: ಮೂವರು ಆರ್‌ಎಸ್‌ಐಗಳ ಸಾವು