ಕನ್ನಡಪ್ರಭ ವಾರ್ತೆ ಹಲಗೂರು
ಕನ್ನಡ ಶಿಕ್ಷಕ ಶಿವಬೀರಯ್ಯ ಮಾತನಾಡಿ, ನಮ್ಮ ಸ್ಕೂಲ್‌ನಲ್ಲಿ ನಾಡಹಬ್ಬ ದಸರಾ ಸಂಭ್ರಮದ ಅಂಗವಾಗಿ ನವರಾತ್ರಿಯಲ್ಲಿ ಚಾಮುಂಡೇಶ್ವರಿ ದೇವಿ 9 ಅವತಾರಗಳು, ಅವುಗಳ ಹಿನ್ನೆಲೆ ಮತ್ತು ವಿಶೇಷತೆಗಳನ್ನು ಪ್ರತಿಬಿಂಬಿಸುವ ವೇಷಭೂಷಣಗಳನ್ನು ನಮ್ಮ ಶಾಲೆ ಮಕ್ಕಳು ಧರಿಸಿದ್ದಾರೆ ಎಂದರು.
ಕೊನೆ ದಿನ ವಿಜಯದಶಮಿ ಅಂಗವಾಗಿ ದುರ್ಗಾ ಮಾತೆ ಮಹಿಷಾಸುರನನ್ನು ಸಂಹಾರ ಮಾಡಿದ ಹಾಗೂ ಕೈಲಾಸ ಪರ್ವತದ ಕಲ್ಪನೆ, ರಾಮಾಯಣದ ಕಥಾ ಭಾಗವಾಗಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ವೇಷ ಧರಿಸಿ ರಾಮ ರಾವಣನನ್ನು ಸಂಹರಿಸಿದನ್ನು ಅಭಿನಯಿಸಿ ಪ್ರಸ್ತುತ ಪಡಿಸುವಮೂಲಕ ಮಕ್ಕಳಲ್ಲಿ ನಮ್ಮ ಇತಿಹಾಸ, ಧರ್ಮ, ದೇವತೆಗಳ ಬಗ್ಗೆ ಕಲ್ಪನೆ, ಮೂಡಿಸುವ ಮೂಲಕ ತಿಳಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲೆ ಮೇಲ್ವಿಚಾರಕಿ ಎಚ್.ವಿ.ಶ್ವೇತಕುಮಾರಿ, ಅಕ್ಷತಾ ಅಶ್ವಿನ್ ಕುಮಾರ್, ಸೌಮ್ಯ, ಶೃತಿ, ಸುನೀತಾ, ಸವಿತಾ, ಪೂಜಾ, ಜೊಯೆಶ್ ಜೊಸೆಫ್, ವರಲಕ್ಷ್ಮಿ, ಶಿವಬೀರಯ್ಯ, ನಾಜಿಮಾ ಬೇಗಂ, ಸೂರಜ್, ಪ್ರಜಾಪತಿ, ವಂದಿತ, ಸೇರಿದಂತೆ ಇತರರು ಇದ್ದರು.ನ.15 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಕ್ಕೆ ಅರ್ಜಿ ಆಹ್ವಾನ: ಎಂ.ಎಸ್.ರವೀಂದ್ರ
ಕನ್ನಡ ಫಿಲಂ ಚೇಂಬರ್‌ನಿಂದ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನ.15ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಿಸಲು ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚೇಂಬರ್‌ನ ಅಧ್ಯಕ್ಷ ಎಂ.ಎಸ್.ರವೀಂದ್ರ ತಿಳಿಸಿದರು.
ಕಲಾವಿದರು, ಸಮಾಜ ಸೇವಕರು, ಮಾಧ್ಯಮದವರು, ಸಂಗೀತ, ನೃತ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ನವೆಂಬರ್ 10 ಕೊನೆ ದಿನ. ಅಧ್ಯಕ್ಷ ಎಂ.ಎಸ್.ರವೀಅದ್ರ ಅವರ ಸಂಖ್ಯೆಗೆ 2000 ರು. ಶುಲ್ಕ ಪಾವತಿಸಿ, ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ಜಾಗೃತಿ ವಹಿಸಿ
ಜಿಲ್ಲೆಯ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆ, ವಸತಿ ಶಾಲೆಗಳಲ್ಲಿ ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಜರುಗದಂತೆ ರಾಜ್ಯ ಮಕ್ಕಳ ರಕ್ಷಣಾ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಜಿಲ್ಲೆಯ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳು ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಜರುಗದಂತೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.