ಬಿ.ರಾಮಪ್ರಸಾದ್ ಗಾಂಧಿ ಹರಪನಹಳ್ಳಿ
ನಾಡ ಹಬ್ಬ ದಸರಾ ಪ್ರಯುಕ್ತ ಅಂತಹ ವಿವಿಧ ಪೌರಾಣಿಕ ಕಥೆ ಸಾರುವ ಮನಮೋಹಕ ದಸರಾ ಬೊಂಬೆಗಳ ಪ್ರದರ್ಶನವನ್ನು ಪಟ್ಟಣದ ಆಚಾರ ಬಡಾವಣೆಯ ಡಾ. ರಮೇಶಕುಮಾರ ಹಾಗೂ ಅರ್ಚನಾ ದಂಪತಿಗಳ ನಿವಾಸದಲ್ಲಿ ಕಾಣಬಹುದಾಗಿದೆ.
ದಶವಾತಾರದ ಗೊಂಬೆಗಳು ಸೇರಿದಂತೆ ವಿವಿಧ ಕಥಾ ಪ್ರಸಂಗಗಳುಳ್ಳ ಗೊಂಬೆ ಜೋಡಿಸಿ ದಸರಾ ಹಬ್ಬದ ಪೂಜಾ ವಿಧಿ ವಿಧಾನ ಮಾಡಲಾಗುತ್ತಿದೆ. 11 ದಿನಗಳ ಕಾಲ ದಶಾವತಾರ ಕಲ್ಪನೆ ಹೊಂದಿರುವ ಶಕ್ತಿ ದೇವತೆ ದುರ್ಗಾಮಾತೆ, ಅಷ್ಟ ಲಕ್ಷ್ಮೀ ಗೌರಿ, ಪಾರ್ವತಿ, ಈಶ್ವರ, ರಾಮಲಕ್ಷ್ಮಣ, ಸೀತೆ, ಲಕ್ಷ್ಮೀ ವೆಂಕಟೇಶ್ವರ, ಸರಸ್ವತಿ ಮುಂತಾದ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.ದಶಾವತಾರ, ಕೃಷ್ಣವತಾರ, ನವದುರ್ಗೆಯರ ವೈಭವ, ಮದುವೆ ದಿಬ್ಬಣ, ಜಟ್ಟಿ ಕಾಳಗ, ಶಿವನ ಕೈಲಾಸ, ಕೃಷ್ಣ, ನಾರಾಯಣರು ಸೇರಿದಂತೆ ಇನ್ನೂ ವಿವಿಧ ಆಕರ್ಷಕ ಗೊಂಬೆಗಳು ಗಮನ ಸೆಳೆಯುತ್ತವೆ.
ಈ ಗೊಂಬೆಗಳು 11 ದಿವಸ ನಿತ್ಯವೂ ಬೆಳಗ್ಗೆ, ಸಂಜೆ ಪೂಜಿಸಲಾಗುತ್ತದೆ, ನಮ್ಮ ಹಿರಿಯರು ಸಂಪ್ರದಾಯದಂತೆ ನಾವು ಕೂಡ ಈ ಬಾರಿ 11 ದಿನಗಳ ಕಾಲ ಪೂಜೆ ಮಾಡಿ ವಿಜಯದಶಮಿಯಂದು ಸಮಾಪ್ತಿ ಮಾಡುತ್ತೇವೆ ಎನ್ನುತ್ತಾರೆ ಗೊಂಬೆಗಳ ಆಯೋಜಕರಾದ ಅರ್ಚನಾ ಎಂ.ಆರ್ ಹಾಗೂ ಪತಿ ಡಾ.ರಮೇಶ ಕುಮಾರ ದಂಪತಿಗಳು.